ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೫೫ – (೩) ನೀರು ನೆಲಕ್ಕಿಂತ ಸಾವಕಾಶವಾಗಿ ಕಾಯುತ್ತದೆ, ಮತ್ತು ಸಾವ ಕಾಶವಾಗಿ ತಂಪಾಗುತ್ತದೆ. ಬೇಸಿಗೆಯಲ್ಲಿ ನೆಲವು ಬೇಗ ಕಾಯುವದರಿಂದ ಅಲ್ಲಿಯ ಗಾಳಿಯು ನೀರಿನ ಮೇಲಿನ ಗಾಳಿಗಿಂತ ಹೆಚ್ಚು ಉಷ್ಣವುಳ್ಳದ್ದಾಗಿರುತ್ತದೆ. ಆದ್ದ ರಿಂದ ಸಮುದ್ರ ಅಥವಾ ಒಂದು ವಿಸ್ತಾರವಾದ ತಟಾಕದ ಸಮೀಪದಲ್ಲಿರುವ ಪ್ರದೇ ಶದ ಹವೆಯು ಭೂಮಧ್ಯ ಭಾಗಗಳ ಮೇಲಿನ ಹವೆಗಿಂತ ತಂಪಾಗಿರುತ್ತದೆ. ಚಳಿಗಾಲಲ್ಲಿ ಭೂಮಿಯು ತಾನು ಧರಿಸಿರುವ ಉಷ್ಣವನ್ನು ತೀವ್ರವಾಗಿ ಹೊ ರಗಟ್ಟುವದರಿಂದ ನೆಲವು ಬೇಗ ಶೀತಲವಾಗುವದು. ನೀರು ತಾನು ಧರಿಸುವ ಉ ಪ್ಲವನ್ನು ಸಾವಕಾಶದಿಂದ ಬಿಡುವದರಿಂದ ಅದರ ಮೇಲಿನ ಹವೆಯು ಸ್ವಲ್ಪ ಸೆಕೆ ಯುಳ್ಳದ್ದಾಗಿಯೇ ಇರುವದು. ಆದ್ದರಿಂದ ಚಳಿಗಾಲದಲ್ಲಿ ಸಮುದ್ರದ ಸವಿಾಪದ ಲ್ಲಿರುವ ಪ್ರದೇಶಗಳ ಹವೆಯು ಅದೇ ಅಕ್ಷಾಂಶದಲ್ಲಿ ಸಮುದ್ರದಿಂದ ದೂರದಲ್ಲಿರುವ ಪ್ರದೇಶಗಳ ಹವೆಗಿಂತ ಕಡಿಮೆ ಶೀತವುಳ್ಳದ್ದಾಗಿರುತ್ತದೆ. ] ಒಂಭತ್ತನೇ ಅಧ್ಯಾಯ, ಹವೆಯಲ್ಲಿರುವ ಉಗಿ ಮತ್ತು ಅದರ ಕೆಲವು ರೂಪa೦ತರಗಳು, [ ಸೂಚನೆ:- ಒಂದು ಪ್ರದೇಶದ ಹವೆಯಲ್ಲಿ ಉಗಿಯ ಅಂಶವು ಎಷ್ಟಿ ರು ತದೆಂಬುವದನ್ನು ಗೊತ್ತು ಮಾಡುವದಕ್ಕೆ ರುಕ್ರ ಮತ್ತು ಆದ್ರ್ರ ಗೋಲಗಳಿರುವ ಉಷ ಮಾಪಕಯಂತ್ರವು ಬೇಕಾಗುವದು. ಇದನ್ನು ಶಾಲೆಗಳಲ್ಲಿ ತರಿಸಿಟ್ಟರ ಬೇಕು. ] ನಮ್ಮ ಸುತ್ತಲು ಎಲ್ಲಾ ಕಡೆಗಳಲ್ಲಿ ವ್ಯಾಪಿಸಿರುವ ಹವೆಯು ಅವಿಭಕ್ತವಾದ ಒಂದೇ ವಸ್ತುವಾಗಿರದೆ ಮುಖ್ಯವಾಗಿ ಎರಡು ವಾಯುಗಳ ಮಿಶ್ರಣವೆಂದು ಸಿದ್ದ ವಾಗಿರುತ್ತದೆ. ಇದರಲ್ಲಿ ಆಮ್ಲಜನಕವೆಂದೂ ( oxygen ಆಕ್ಸಿಜನ್ ಸಾರಜನಕ ವೆಂದೂ (nitrogen ನೈಟ್ರೋಜನ್ )ಎರಡು ಬೇರೆ ಬೇರೆ ವಾಯುಗಳು ಸೇರಿ ರುತ್ತವೆ. ಇವುಗಳಲ್ಲಿ ಆಮ್ಲಜನಕವೇ ನಮ್ಮ ಪ್ರಾಣಾಧಾರವಾಗಿಯೂ ಬೆಂಕಿ ಉರಿ ಯುವದಕ್ಕೆ ಸಹಾಯಕವಾಗಿಯೂ ಇರುತ್ತದೆ. ಸಾರಜನಕ ವಾಯುವಿಗೆ ಈ ಗು ಣಗಳಿಲ್ಲದೆ ಅದು ಒಂದು ಜಡತರವಾದ ವಾಯುವಾಗಿರುತ್ತದೆ, ಸಾಧಾರಣ ಹವೆ ಯಲ್ಲಿ ಸಾರಜನಕವು ನಾಲ್ಕುಪಾಲಾಗಿಯೂ ಆಮ್ಲ ಜನಕವು ಒಂದುಪಾಲಾಗಿಯೂ