ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೫೬ - ಸೇರಿರುತ್ತವೆ. ಬಹಳ ಬಿಸಿಯಾದ ನೀರನ್ನು ಸ್ನಾನಕ್ಕೆ ಸಹನವಾಗುವಂತೆ ಮಾಡುವ ದಕ್ಕೆ ಹೇಗೆ ಅದಕ್ಕೆ ತಣ್ಣೀರು ಬೆರೆಯಿಸಲ್ಪಡುವದೋ, ಹಾಗೆಯೇ ಬಹಳ ತೀಕ್ಷ ವಾದ ಆಮ್ಲಜನಕವು ನಮ್ಮ ಉಸುರಾಟಕ್ಕೆ ಯೋಗ್ಯವಾಗುವಂತೆ ಮಾಡುವ ದಕ್ಕೆ ಅದರೊಡನೆ ಸಾರಜನಕವು ಕೂಡಿಸಲ್ಪಟ್ಟಿರುತ್ತದೆ. ಹವೆಯಲ್ಲಿ ಈ ಎರಡು ವಾಯುಗಳು ಮಾತ್ರವಲ್ಲದೆ ನೀರಿನ ಉಗಿ ಯು ಸೇರಿರುತ್ತದೆ. ಇದನೇ ಅಧ್ಯಾಯದಲ್ಲಿ ಮೋಡಗಳ ಉತ್ಪತ್ತಿಯನ್ನು ಹೇಳುವಾಗ ಈ ಉಗಿಯನ್ನು ಕುರಿತು ಸ್ವಲ್ಪ ವಿಚಾರಮಾಡಿರುತ್ತೇವೆ, ಭೂಮಿಯ ಮೇಲಿರುವ ಸಮುದ್ರ, ನದಿ, ತಟಾಕ ಮುಂತಾದ ಜಲಪ್ರದೇಶಗಳ ನೀರು ಸೂರ್ಯನ ಕಿರಣಗಳಿಂದ ಉಗಿಯಾಗಿ ಮೇಲಕ್ಕೇರಿ ಹವೆಯಲ್ಲಿ ಸೇರುತ್ತಿ ರುವದು. ಹೀಗೆ ಪ್ರತಿದಿನವೂ ಸಾಗುತ್ತಿರುವದರಿಂದ ಹವೆಯಲ್ಲಿ ಉಗಿಯು ಯಾವಾಗಲೂ ಹೆಚ್ಚಾಗಿ ಅಥವಾ ಕಡಿಮೆಯಾಗಿ ಇದ್ದೆ ಇರುವದು ಈ ಉಗಿಯು ತಣಿದು ರೂಪಾಂತರವನ್ನು ಹೊಂದುವವರೆಗೂ ನಮ್ಮ ಕಣ್ಣಿಗೆ ಗೋಚರವಾಗುವ ಉಗಿಯು ಭೂಮಿಗೆ ಸಮೀಪವಾದ ಹವೆಯಲ್ಲಿ ಹೆಚ್ಚಾಗಿದ್ದು ಮೇಲೆಮೇಲೆ ಹೋದಹಾಗೆ ಕಡಿಮೆಯಾಗುತ್ತಾ ಹೋಗುವದು, ಉಗಿಯು ಭೂಮಿಯ ಸುತ್ತಲು ವ್ಯಾಪಿಸಿರುವದರಿಂದ, ಭೂಮಿಗೆ ಒಂದು ಹೊದಿಕೆಯಂತೆ ಇರುತ್ತದೆ. ಈ ಉಗಿಯ ಹೊದಿಕೆಯಿಲ್ಲದಿದ್ದರೆ, ಭೂಮಿಯು ಸೂರ್ಯನಿಂದ ಹಗಲಲ್ಲಿ ಒಳಗೊಂಡ ಎಲ್ಲಾ ಉಷ್ಣವನ್ನು ರಾತ್ರಿಯಲ್ಲಿ ಬಹಳ ಬೇಗನೇ ಹೊರಗೆಬಿಡುತ್ತಿತ್ತು, ಮತ್ತು ಬೆಳಗಾಗುವದರೊಳಗೆ ನೆಲದ ಮೇಲಿರುವ ಎಲ್ಲಾ ನೀರು ಅತಿಶಯ ಶೀತದಿಂದ ಗಡ್ಡೆ ಕಟ್ಟುತ್ತಿತ್ತು. - ಹವೆಯಲ್ಲಿ ಉಗಿಯ ಅಂಶವು ಯಾವ ಯಾವ ಕಾಲಗಳಲ್ಲಿ ಎಷ್ಟಿರುತ್ತದೆಂ ಬುವದನ್ನು ತಿಳಿಸುವದಕ್ಕೆ ಒಂದು ಸಾಧನವು ಏರ್ಪಟ್ಟಿರುತ್ತದೆ. ಇದನ್ನು ಆದ್ರ್ರ ಶಾಸೂಚಕ ಯಂತ್ರವೆಂದು ಹೇಳಬಹುದು. ಈ ಯಂತ್ರದಲ್ಲಿ ಸಾಧಾರಣ ಉಷ ಮಾಪಕಯಂತ್ರದಲ್ಲಿರುವ ಗೋಲದಂಥ ಎರಡು ಗೋಲಗಳಿರುತ್ತವೆ. ಈ ಗೋಲಗ ಳಲ್ಲಿ ಒಂದು ಗೋಲದ ಸುತ್ತಲು ತೆಳುವಾದ ಒಂದು ಬಟ್ಟೆಯನ್ನು ಸುತ್ತಿ, ಅದು ಯಾವಾಗಲೂ ಒದ್ದೆಯಾಗಿರುವಂತೆ ನೀರು ತುಂಬಿದ ಒಂದು ಗಾಜಿನ ಕುಡಿಕೆ ಯಿಂದ ( ದೌತಿಯಿಂದ ) ಒಂದು ನೂಲಿನ ಬತ್ತಿಯು ಅದಕ್ಕೆ ಕೂಡಿಸಲ್ಪಟ್ಟರು