ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-- ೫೯ - ಗಾಳಿಯು ಹೆಚ್ಚಾಗಿರುವ ವೇಳೆಗಳಲ್ಲಿಯೂ ಬಾಷ್ಪ ಭವನವು ತೀವ್ರವಾಗಿ ನಡೆಯುವದು. ಆಗ ಬೈಲಿನಲ್ಲಿ ಹಾಕಿದ ಒದ್ದೆ ಬಟ್ಟೆಗಳು ಬೇಗ ಆರುತ್ತವೆ. ಗಾಳಿಯ ಹೊಸ ಹೊಸ ಪ್ರವಾಹಗಳು ಬರುತ್ತಾ ಆದ್ರ್ರತೆಯುಳ್ಳ ಹವೆಯನ್ನು ಮುಂದಕ್ಕೆ ದೂಡುವದರಿಂದ ಉಗಿಯು ಹವೆಯಲ್ಲಿ ಸೇರಲು ಅವಕಾಶವಿರುವದು, - ಹವೆಯಲ್ಲಿರುವ ಉಗಿಯ ವಿಷಯದಲ್ಲಿ ನಮಗೆ ಇಲ್ಲಿಯವರೆಗೆ ತಿಳಿದ ವಿಷ ಯುಗಳನ್ನು ಸಂಗ್ರಹಿಸಿ ಹೇಳಬೇಕಾದರೆ:-ಶೀತವಾಗಿರುವ ಹವೆಗಿಂತ ಬೆಚ್ಚಗಿರುವ ಹವೆಯಲ್ಲಿ ಹೆಚ್ಚು ಉಗಿಯು ಸೇರಲು ಅವಕಾಶವಿರುತ್ತದೆ. ಆದ್ದರಿಂದ ರಾತ್ರಿಯ ಕಾಲಕ್ಕಿಂತ ಹಗಲಲ್ಲಿಯ ಚಳಿಗಾಲಕ್ಕಿಂತ ಬೇಸಿಗೆಯಲ್ಲಿಯೂ ಬಾಪ್ಪಭವನವು ಹೆಚ್ಚಾಗಿ ಸಾಗುತ್ತದೆ. ಗಾಳಿಯು ಹೆಕ್ಟ್ರಾಗಿರುವ ವೇಳೆಗಳಲ್ಲಿಯೂ ಬಾಷ್ಪ ಭವನವು ತೀವ್ರವಾಗಿ ನಡೆಯುತ್ತದೆ. ನಮ್ಮ ದೇಶದಲ್ಲಿ ಚಳಿಗಾಲದ ಹವೆಯಲ್ಲಿ ಮಳೆಗಾ ಲದ ಹವೆಯಲ್ಲಿರುವದಕ್ಕಿಂತ ಆದ್ರ್ರತೆಯು ಕಡಿಮೆಯಾಗಿರುವದರಿಂದ ತೇವು ಬೇಗ ಆರುತ್ತದೆ. ಉಗಿಯ ರೂಪಾಂತರಗಳು; ಮ೦ಜು, ಇಬ್ಬನ್ನಿ, ಹವೆಯಲ್ಲಿ ಸೇರುವ ಉಗಿಯು ತಣಿದರೆ, ಅಗೋಚರಸ್ಥಿತಿಯನ್ನು ಬಿಟ್ಟು ಅತಿಸೂಕ್ಷ್ಮವಾದ ಅಣುಗಳ ಸಮೂಹವಾಗಿ ಅಂತರಿಕ್ಷದಲ್ಲಿ ಮೋಡಗಳರೂಪದಲ್ಲಿ ತೇಲಾಡುತ್ತಿರುವದೆಂದು ಹಿಂದೆ ಹೇಳಲ್ಪಟ್ಟಿರುತ್ತದೆ. ಉಗಿಯು ದೃಶ್ಯರೂಪಕ್ಕೆ ಬಂದಾಗ ಅದಕ್ಕೆ ಕೆಲವು ಇತರ ಹೆಸರುಗಳು ರೂಢಿಯಲ್ಲಿರುತ್ತವೆ, ಮಂಜು (Mist, Fog ಮಿಸ್ಸ, ಫಾಗ್):- ಚಳಿಗಾಲದಲ್ಲಿ ಭೂಮಿಗೆ ಸೂರ್ಯನಿಂದ ಬರುವ ಉಷ್ಣವು ಸ್ವಲ್ಪವಾಗಿದ್ದು ಭೂಮಿಯು ಅದನ್ನು ಸೂರ್ಯ ನು ಅಸ್ತಮಿಸಿದನಂತರ ತೀವ್ರವಾಗಿ ಹೊರಗೆ ಬಿಡುವದರಿಂದ ನೆಲವು ಅತಿ ಶೀತ ವಾಗುವದು. ಆದ್ದರಿಂದ ನೆಲದ ಸಮೀಪದಲ್ಲಿರುವ ಉಗಿಯು ತಣಿದು ಅತಿಸೂಕ್ಷ್ಮ ವಾದ ನೀರಿನ ಅಣುಗಳ ಸಮೂಹವಾಗಿ ನೆಲದಿಂದ ಸ್ವಲ್ಪ ಎತ್ತರದಲ್ಲೇ ಹೊಗೆಯು ರೂಪದಲ್ಲಿ ತೇಲಾಡುತ್ತಿರುವದು. ಇದನ್ನೇ ನಾವು ಮ೦ಜು ಎಂದು ಕರೆಯು ತೇವೆ. ಈ ಮಂಜು ಬಹಳ ದಟ್ಟವಾಗಿ ವ್ಯಾಪಿಸಿರುವ ಸ್ಥಳಗಳಲ್ಲಿ ಎರಡುಮೂರು. ಮಾರುಗಳ ದೂರದಲ್ಲಿರುವ ಮನುಷ್ಯನ ಮುಖವು ಕೂಡ ಕಾಣಿಸುವದಿಲ್ಲ. ಅನೇಕ ಸ್ಥಳಗಳಲ್ಲಿ ಚಳಿಯ ದಿನಗಳಲ್ಲಿ ಮಂಜು ಬೆಳಿಗ್ಗೆ ೯ ಘಂಟೆಯ ವರೆಗೂ ಇದ್ದು ಪುನ: ಸಂಜೆಯಲ್ಲಿ ಸೂರ್ಯನು ಅಸ್ತಮಿಸುವದರೊಳಗಾಗಿ