ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೬೦ - ಪ್ರಾರಂಭಿಸುವದು. ಮಂಜು ನೆಲದಿಂದ ಎರಡು ಆಳಿನ ಎತ್ತರಕ್ಕಿಂತ ಹೆಚ್ಚಾಗಿ ರುವದಿಲ್ಲ. ಮಂಜು ಸಮುದ್ರ, ನದಿ, ಕೆರೆ ಮೊದಲಾದ ಜಲಾಶಯಗಳ ಸಮಿ ಪದಲ್ಲಿ ವಿಶೇಷವಾಗಿಯೂ ದಟ್ಟವಾಗಿಯೂ ಇರುವದು. ತಣ್ಣಗಿರುವ ಪರ್ವ ತದ ತಲೆಯ ಮೇಲೆ ಆದ್ರ್ರತೆಯುಳ್ಳ ಗಾಳಿಯು ಬೀಸಿದರೆ, ಆ ಗಾಳಿಯಲ್ಲಿರುವ 'ಉಗಿಯು ತಣಿದು ಮಂಜಿನ ರೂಪಕ್ಕೆ ಬರುವದು. ಆದ್ದರಿಂದ ಪರ್ವತಗಳ ಎತ್ತರವಾದ ಪ್ರದೇಶಗಳಲ್ಲಿ ಒಂದು ಬಿಳೇ ಮುಸುಕು ಇರುವಂತೆ ಕಾಣಿಸುತ್ತದೆ. ಇಬ್ಬನಿ ( Dewಡೂ )ಗೆ:-ಚಳಿಗಾಲದಲ್ಲಿ ಬೆಳಿಗ್ಗೆ ಮತ್ತು ಸಂಜೆಗೆ ಹುಲ್ಲು, ಎಲೆ ಮೊದಲಾದವುಗಳ ಮೇಲೆ ಮುತ್ತುಗಳ ಹಾಗೆ ಇರುವ ನೀರಿನ ಹನಿ ಗಳು ಕಾಣುತ್ತವಷ್ಟೇ. ಕಲ್ಲುಗಳಮೇಲೂ ಈ ನೀರಿನ ಹನಿಗಳು ಕೂಡಿರು ಇವೆ, ಈ ನೀರಿನ ಹನಿಗಳು ಹುಲ್ಲಿನಿಂದಾಗಲಿ ಕಲ್ಲಿನಿಂದಾಗಲಿ ಬಂದವುಗಳಲ್ಲ. ಹವೆಯಲ್ಲಿರುವ ಉಗಿಯು ಶೀತವಾಗಿರುವ ಹುಲ್ಲನ್ನು ಅಥವಾ ಕಲ್ಲನ್ನು ಸೋಕಿ ತಣಿಯುವದರಿಂದ ನೀರಿನ ಬಿಂದುಗಳ ರೂಪಕ್ಕೆ ಬರುತ್ತದೆ. ಈ ನೀರಿನ ಹನಿಗಳಿಗೆ ಇಬ್ಬನಿ ಎಂಬ ಹೆಸರು ರೂಢಿಯಾಗಿರುತ್ತದೆ. ಆಕಾಶವು ನಿರ್ಮಲವಾಗಿ ನಕ್ಷತ್ರಗಳು ಕಾಣುವ ರಾತ್ರಿಯಲ್ಲೇ ಈ ಇಬ್ಬನಿಯು ಹುಲ್ಲಿನ ಮೇಲೂ ಕಲ್ಲಿನ ಮೇಲೂ ಕಾಣುತ್ತದೆ*, ಆಕಾಶದಲ್ಲಿ ಮೇಘಗಳಿರುವ ರಾತ್ರಿ ಯಲ್ಲಿ ಭೂಮಿಯಿಂದ ಹೊರಡುವ ಉಷ್ಣವು ಮೇಘಗಳ ಹೊದ್ದಿಕೆಯಿಂದ ತಡೆ ಯಲ್ಪಟ್ಟು ಪುನಃ ಭೂಮಿಗೆ ಬರುವದರಿಂದ ಹವೆಯು ತಂಪಾಗುವದಿಲ್ಲ, ಆದ್ದ ರಿಂದ ಅಂಥ ರಾತ್ರಿಯಲ್ಲಿ ಉಗಿಯು ಇಬ್ಬನಿಯ ರೂಪಕ್ಕೆ ಬರುವದಿಲ್ಲ. ಅಂಥ ರಾತ್ರಿಯಲ್ಲಿ ನಮಗೆ ಚಳಿಯೂ ಕಡಿಮೆಯಾಗಿರುವದು.

  • ಸಿಮ್ಮ, ನೀಲಗಿರಿ, ಮೊದಲಾದ ಉನ್ನತ ಪ್ರದೇಶಗಳಲ್ಲಿಯೂ ವಿಷುವದ್ರೇಖೆಯಿಂದ ದೂರವಾಗಿರುವ ರಾಷ್ಟ್ರಗಳಲ್ಲಿಯೂ ಈ ಇಬ್ಬನಿಯು ಗಡ್ಡೆ ಕಟ್ಟ ಬಿಳೇ ಗಾಜಿನ ತುಂಡಿನ ( Frost - ಫ್ರಾಸ) ಹಾಗೆ ಗಟ್ಟಿಯಾಗಿರುವದು.