ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೬೧ - ಹತ್ತನೇ ಅಧ್ಯಾಯ. ಹವೆಯ ಒತ್ತುವಿಕೆಯು ಮತ್ತು ಹವೆಯ ಚಲನೆಯು (ಸೂಚನೆ-ಈ ಅಧ್ಯಾಯದ ವಿಷಯವನ್ನು ವಿಚಾರಮಾಡುವಾಗ ಶಾಲೆಯಲ್ಲಿ ಹನೆಯ ಭಾರಮಾಪಕಯಂತ್ರವು (Barometer' ಬ್ಯಾರೋಮೀಟರ) ಇರ ಬೇಕು, ಶಾಲೆಯಲ್ಲಿ ಗಾಳಿಯ ಸಂಚಾರವಿರುವ ಸ್ಥಳದಲ್ಲಿ ಗೋಡೆಯ ಮೇಲೆ ನೆಲದಿಂದ ೪. ಅಡಿಗಳ ಎತ್ತರದಲ್ಲಿ ಇದನ್ನು ತೂಗಹಾಕಬೇಕು.] ಹವೆಯು ಒಂದು ಪದಾರ್ಥ ಅಥವಾ ವಸ್ತುವಷ್ಟೇ. ಆದ್ದರಿಂದ ಭೂಮಿಯ ಮೇಲಿರುವ ಇತರ ವಸ್ತುಗಳಂತೆಯೇ ಹವೆಗೂ ಭಾರವಿರುತ್ತದೆ. ವಾತಾವರಣದಲ್ಲಿ ಹವೆಯ ಅಣುಗಳು ಭೂಮಿಗೆ ತಾಗಿರುವಲ್ಲಿ ಅತಿ ದಟ್ಟವಾಗಿಯೂ ಮೇಲೆ ಮೇಲೆ ಹೋದಂತ ವಿರಳವಾಗಿಯೂ ತೆಳುವಾಗಿಯೂ ಇರುತ್ತವೆ. ಭೂಮಿಗೆ ತಾಗಿರುವ ದ ಟ್ರವಾಗಿರುವಹವೆಯೇ ನಮ್ಮ ಶ್ವಾಸೋಚ್ಛಾಸಕ್ಕೆ ಯೋಗ್ಯವಾಗಿರುತ್ತದೆ. ನಾವು ಎತ್ತರವಾದ ಪರ್ವತವನ್ನು ಹತ್ತುವಾಗ ಎತ್ತರಕ್ಕೆ ಹೋದಂತೆ ಉಸುರಾಡಿಸುವದರಲ್ಲಿ ಸ್ವಲ್ಪ ಶ್ರಮವುಂಟಾಗಿ ಬೇಗನೇ ಆಯಾಸಪಡುವವು. ಬಹಳ ಎತ್ತರಕ್ಕೆ ಹೋದರೆ ನಮಗೆ ಉಸುರಾಡಿಸುವದಕ್ಕೆ ಅಸಾಧ್ಯವೇ ಆಗಬಹುದು. ಹವೆಯು ಭೂಮಿಗೆ ತಾಗಿರುವಲ್ಲಿ ದಟ್ಟವಾಗಿಯೂ ಮೇಲೆ ಹೋದಂತೆ ತೆಳುವಾಗಿಯೂ ಇರುವದಕ್ಕೆ ಕಾರಣವೇನೆಂದು ಕೇಳಬಹುದು. ಇದನ್ನು ತಿಳಕೊಳ್ಳಬೇಕಾದರೆ ಹವೆಯ ಒಂದು ವಿಶೇಷ ಗುಣವನ್ನು ಲಕ್ಷಕ್ಕೆ ತಂದುಕೊಳ್ಳಬೇಕು. ಹವೆಯು ಆದಷ್ಟು ಹೆಚ್ಚು ಸ್ಥಳವನ್ನು ಆಕ್ರಮಿಸುವ ಸ್ವಭಾವವುಳ್ಳದ್ದಾದರೂ ಅದನ್ನು ಬಹಳ ಸ್ವಲ್ಪ ಸ್ಥಳದಲ್ಲಿ ಅಡಗಿಸಬಹುದು. ಅಂದರೆ ಒಂದು ಕೋಣೆಯಲ್ಲಿ ವ್ಯಾಪಿಸಿರುವ ಹವೆಯನ್ನು ಒಂದು ಸಣ್ಣ ಸೀಸೆಯಲ್ಲಿ ಅಡಗಿಸಬಹುದು. ಇದೇ ರೀತಿಯಲ್ಲಿ ಒಂದು ಸಣ್ಣ ಪಾತ್ರೆಯಲ್ಲಿ ಅಥವಾ ಸೀಸೆಯಲ್ಲಿರುವ ಹವೆಯನ್ನು ಒಂದು ದೊಡ್ಡ ಕೋಣೆಯಲ್ಲಿ ವ್ಯಾಪಿಸುವಹಾಗೆ ಮಾಡಬಹುದು. ಹೀಗೆ ಸಂಕೋಚವಾಗುವ ಮತ್ತು ವಿಸ್ತಾರವಾಗುವ ಗುಣಗಳು ನೀರಿಗೆ ಇರುವದಿಲ್ಲ. ಆದ್ದರಿಂದ ಒಂದು