ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಿರಂತರ (ಸತತು ಮಾರುತಗಳು, ಈ ವ್ಯಾಪಾರವೇ ಸೃಷ್ಟಿಯಲ್ಲಿ ವಿಶೇಷವಾಗಿ ಸಾಗುವದರಿಂದ ವಾತಾ ವರಣದಲ್ಲಿ ಚಲನೆಯನ್ನುಂಟುಮಾಡುತ್ತದೆ. ವಿಷುವದ್ರೇಖೆಯ ಸಮೀಪದಲ್ಲಿರುವ ಪ್ರದೇಶಗಳಲ್ಲಿ ಸೂರ್ಯನ ಕಿರಣಗಳು ನೆಟ್ಟಗೆ (ಲಂಬವಾಗಿ) ಬೀಳುವದರಿಂದ ಅಲ್ಲಿ ಯಾವಾಗಲೂ ಉಷ್ಣವು ಹೆಚ್ಚಾಗಿದ್ದು ಧ್ರುವಗಳ ಕಡೆಗೆ ಹೋಗುತ್ತಾ ಕಡಿಮೆ ಯಾಗುವದೆಂಬದನ್ನು ಮೊದಲನೇ ಭಾಗದಿಂದ ತಿಳಿದಿರುತ್ತೇವೆ, ವಿಷುವದ್ರೇಖೆ ಯ ಮೇಲಿರುವ ಪ್ರಾಂತಗಳನ್ನು ಉರಿಯುತ್ತಿರುವ ಬೆಂಕಿಗೆ ಹೋಲಿಸಿದರೆ, ಈ ರಿಯುವ ಬೆಂಕಿಯಿಂದ ಕಾಯಿಸಲ್ಪಟ್ಟ ಹವೆಯು ಮೇಲಕ್ಕೇರಿ ಸುತ್ತಲು ಇರುವ ಗಾಳಿ ಬೆಂಕಿಯ ಕಡೆಗೆ ಹೇಗೆ ಸೆಳೆಯಲ್ಪಡುವುದೋ, ಹಾಗೆಯೇ ವಿಷುವದ್ರೇ ಖೆಯ ಸಮೀಪದಲ್ಲಿರುವ ಪ್ರದೇಶಗಳಲ್ಲಿ ಸೂರ್ಯನ ಉಷ್ಣಾತಿಶಯದಿಂದ ಗಾಳಿಯು ಕಾದು ವಿರಳವಾಗಿ ಮೇಲಕ್ಕೇರಿ ಅದರ ಸ್ಥಳವನ್ನು ಆಕ್ರಮಿಸಿ ಕೊಳ್ಳುವದಕ್ಕೆ ಉತ್ತರ ಮತ್ತು ದಕ್ಷಿಣ ದಿಕ್ಕುಗಳಿಂದ ಗಾಳಿಯು ಆಕರ್ಷಿ ಸಲ್ಪಡುವದು. ಆದ್ದರಿಂದ ಉತ್ತರದಿಂದ ವಿಷುವದ್ರೇಖೆಯ ಕಡೆಗೆ ಒಂದು ಗಾಳಿಯ ಪ್ರವಾಹವು, ದಕ್ಷಿಣದಿಂದ ವಿಷುವದ್ರೇಖೆಯ ಕಡೆಗೆ ಒಂದು ಪ್ರವಾ ಹವು ಹೀಗೆ ಎರಡು ಗಾಳಿಯ ಪ್ರವಾಹಗಳಿರಬೇಕಾಯಿತು, ಪೃಥ್ವಿಯು ಚಲಿಸದೆ ಸ್ಥಿರವಾಗಿದ್ದಿದ್ದರೆ ಉತ್ತರದಿಂದ ದಕ್ಷಿಣದಿಂದಲೂ ಗಾಳಿಯ ಪ್ರವಾಹಗಳು ಇರುತ್ತಿದ್ದವು. ಆದರೆ ಪೃಥ್ವಿಯು ತನ್ನ ಅಕ್ಷದ ಮೇಲೆ ತಿರುಗುವಾಗ ಅದರ ಎಲ್ಲಾ ಭಾಗಗಳಲ್ಲಿ ಸಮವೇಗವಿರುವದಿಲ್ಲ. ವಿಷುವದ್ರೇಖೆಯ ಹತ್ತರ ವೇಗವು ಹೆಚ್ಚಾಗಿದ್ದು ಧ್ರುವಗಳು ಕಡೆಗೆ ಹೋದಂತೆ ಕಡಮೆಯಾಗುತ್ತಾ ಬರುವದು. ಪೃಥ್ವಿಯ ವೇಗವು ವಿಷುವದ್ರೇಖೆಯ ಹತ್ತರ ಹೆಚ್ಚಾಗಿದ್ದು ಧ್ರುವಗಳ ಹತ್ರ ಕಡಿಮೆಯಾಗಿರುವದೆಂಬುವದಕ್ಕೆ ಒಂದು ನಿದರ್ಶನ ವನ್ನು ಹೇಳಬಹುದು. ಗೋಲಾಕಾರದಲ್ಲಿರುವ ಭೂಮಿಯು ಧ್ರುವಗಳಲ್ಲಿ ಚಪ್ಪ ಟೆಯಾಗಿ ಒಂದು ಚಕ್ರಾಕಾರಕ್ಕೆ ಬಂದಿರುವದೆಂದು ತಿಳಿಯೋಣ. ಅದರಲ್ಲಿ ಧ್ರುವಗಳು ಚಕ್ರದ ಮಧ್ಯಸ್ಥಾನದಲ್ಲಿದ್ದು ವಿಷುವದ್ರೇಖೆಯು ಅಂಚಿನ ಸುತ್ತಲ ಇರುವದು. ಚಕ್ರವು ಒಂದು ಸುತ್ತು ಹೋದರೆ, ಅದರ ಎಲ್ಲಾ ಭಾಗಗಳು ಹಿಂದ ಸುತ್ತು ಹೋದಂತಾಗುವದಷ್ಟೇ. ಈ ನಿಯಮಿತ ವೇಳೆಯಲ್ಲಿ ಇತರ ಭಾಗಗಳ ಗಿಂತ ಅದರ ಅಂಚು ಹೆಚ್ಚು ದೂರ ಹೋಗುವದರಿಂದ ಅಲ್ಲಿ ವೇಗ ಹೆಚ್ಚೆಂದ