ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೇಳಬೇಕು. ಅಂಚಿನಿಂದ ಒಳಗೆ ಹೋದಹಾಗೆ ವೇಗವು ಕಡಿಮೆಯಾಗುತ್ತಾ ಬಂದು ಮಧ್ಯ ಸ್ಥಾನದಲ್ಲಿ ಅಥವಾ ಅಕ್ಷದಲ್ಲಿ ವೇಗವೇ ತೋರುವದಿಲ್ಲ. ಇದೇ ಪ್ರಕಾರ ವಿಷುವದ್ರೇಖೆಯ ಹತ್ತರ ಹೆಚ್ಚು ವೇಗವೆಂತಲೂ ಅದರ ಉತ್ತರಕ್ಕೂ ದಕ್ಷಿಣಕ್ಕೂ ಹೋಗಹಾಗೆ ವೇಗವು ಕಡಿಮೆಯಾಗುವದೆಂತಲೂ ಸ್ಪಷ್ಟವಾಗು ವದು. ಹನೆಯು ಪೃಥ್ವಿಯ ಸಂಗಡಲೆ ಸುತ್ತುತ್ತಿರುವದರಿಂದ ಧ್ರುವಗಳ ಸಮೀಪ ದಲ್ಲೂ ಸಮಶೀತೋಷ್ಣವಲಯಗಳಲ್ಲಿ ಚಲಿಸುವದಕ್ಕಿಂತ ವಿಷುವದ್ರೇಖೆಯ ಹತ್ತರ ಹೆಚ್ಚು ವೇಗದಿಂದ ಚಲಿಸುತ್ತದೆ. ಹೀಗೆ ವಿಷುವದ್ರೇಖೆಯ ಉತ್ತರದಿಂದ ಲೂ ದಕ್ಷಿಣದಿಂದಲೂ ಬರುವ ಗಾಳಿಗಳು ಕಡಿಮೆ ವೇಗವಿರುವ ಸ್ಥಳದಿಂದ ಹೆಚ್ಚು. ವೇಗವುಳ್ಳ ಸ್ಥಳಕ್ಕೆ ಬರುವದರಿಂದ ಅವು ಹಿಂದಕ್ಕೆ ಒಲಿಯುತ್ತವೆ; ಭೂಮಿಯು ಪಶ್ಚಿಮದಿಂದ ಪೂರ್ವಕ್ಕೆ ಸುತ್ತುತ್ತಿರುವದರಿಂದ ಇವು ಪಶ್ಚಿಮದ ಕಡೆಗೆ ತಿರುಗು ಇವೆ. ಆದ್ದರಿಂದ ಉತ್ತರದಿಂದ ಬೀಸುವ ಗಾಳಿಯು ನಮಗೆ ಈಶಾನ್ಯ ದಿಕ್ಕಿನಿಂದ ಬರುವಹಾಗೆ ತೋರುತ್ತದೆ; ವಿಷುವದ್ರೇಖೆಯ ದಕ್ಷಿಣದಿಕ್ಕಿನಿಂದ ಬೀಸು ವ ಗಾಳಿಯು ಆಗೈಯ ದಿಕ್ಕಿನಿಂದ ಬೀಸುವ ಹಾಗೆ ತೋರುವದು. ಈ ಈಶಾ ನ್ಯ ಮತ್ತು ಆಗ್ನೆಯ ಗಾಳಿಗಳಿಗೆ ವ್ಯಾಪಾರದ ಗಾಳಿಗಳೆಂಬ ಹೆಸರು ಪ್ರಸಿದ್ದ ವಾಗಿರುತ್ತದೆ. ಮನ್ನೂ ನ ಗಾಳಿಗಳು, ಮೇಲೆ ತಿಳಿಸಲ್ಪಟ್ಟ ಕಾರಣಗಳಿಂದ ನಾವು ವಾಸಮಾಡುವ ಪ್ರದೇಶ ದಲ್ಲಿ ಅಂದರೆ ದಕ್ಷಿಣ ಇಂಡಿಯಾದಲ್ಲಿ ಯಾವಾಗಲೂ ಈಶಾನ್ಯದಿಂದ ಬೀಸುವ ಗಾಳಿಯೇ ಬೀಸಬೇಕಾಯಿತು. ಆದರೆ ಏಳನೇ ಅಧ್ಯಾಯದಲ್ಲಿ ತಿಳಿಸಿರುವಂತೆ ಗಾಳಿಯು ಬರುವ ದಿಕ್ಕನ್ನು ಕ್ರಮವಾಗಿ ನಿರೀಕ್ಷಿಸುತ್ತಿದ್ದರೆ, ನಮ್ಮ ಪ್ರಾಂತದಲ್ಲಿ ಗಾಳಿಯು ಯಾವಾಗಲೂ ಒಂದೇ ದಿಕ್ಕಿನಿಂದ ಬೀಸುವದಿಲ್ಲವೆಂದು ಕಂಡುಬರುವದು, ಜೂನ ತಿಂಗಳಿಂದ ಅಕ್ಟೋಬರ ತಿಂಗಳ ವರೆಗೆ ನೈಋತ್ಯದ ಗಾಳಿಯೂ ನವಂಬರ ತಿಂಗಳಿಂದ ಮಾರ್ಚ ತಿಂಗಳವರೆಗೆ ಈಶಾನ್ಯದ ಗಾಳಿಯ ಬೀಸುತ್ತವೆ. ಹೀಗೆ ನಿಯಮಿತ ಕಾಲಗಳಲ್ಲಿ ಬೀಸುವ ಗಾಳಿಗಳಿಗೆ ಮ ನ್ ಗಾಳಿಗಳೆಂಬ ಹೆಸರು ರೂಢಿಯಲ್ಲಿರುತ್ತದೆ. ಇವು ಹೇಗೆ ಉಂಟಾಗುತ್ತವೆ?