ಪುಟ:ಸ್ವಾಮಿ ಅಪರಂಪಾರ.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Xలిమి ಅಪರ೦ಪಾರ "ಶವಗಳನ್ನ ಹೊರಕ್ಕಿಡಿ, ಲಾಯದಿಂದ ನನ್ನ ಕುದುರೆ ತದ್ದೀನಿ."

  • జాగే ఆగాలి." -

...ಮುಂದೆ ಸ್ವಲ್ಪ ಹೊತ್ತಿನಲ್ಲೇ ಕುದುರೆಗಳೂ ಸವಾರರೂ ದಿಡ್ಡಿ ಬಾಗಿಲಲ್ಲಿ ಸಜಾಗಿ ನಿಂತರು. ಸೆರೆಮನೆಯ ಕಾವಲುಗಾರರು ಶವಗಳನ್ನು ಹೊತು ತಂದರು, ಚಡಪಡಿಸಿ ಜೀವ ಬಿಟ್ಟ ಕೈದಿಯ ಶವವನ್ನು ಐಯಣ್ಣನ ಕುದುರೆಯ ಬೆನ್ನಮೇಲೇರಿಸಿ ಜೀನಿಗೆ ಬಿಗಿ ದರು. ನಿಶ್ಚಲವಾಗಿದ್ದ ಇನ್ನೊಂದನ್ನು ಶಂಕರಪ್ಪನ ಕುದುರೆಯ ಬೆನ್ನಿಗೇರಿಸಿದರು. ಕೃಷ್ಣ ಪಕ್ಷದ ಚಂದ್ರಬಿಂಬವೆಲ್ಲೋ ಮೂಡಿ ಮಬು ಬೆಳಕನ್ನು ಹರಡಿತು, ಐಯಣ್ಣ ಕುದುರೆಯನ್ನೇರಿದ, ಶಂಕರಪ್ಪ ಹಿಂಬಾಲಿಸಿದ, ಕೋಟೆಯ ತಪ್ಪಲಲ್ಲಿ ಇಳಿಜಾರು ದಾರಿ ಯಲ್ಲಿ ಮುಂದೆ ಸಾಗಿ, ಇಬ್ಬರೂ ಅಡವಿಯ ಹಾದಿ ಹಿಡಿದರು. ಇತ್ರ ದಿಡ್ಡಿ ಬಾಗಿಲು ಮುಚ್ಚಿಕೊಂಡಿತು. ಸೆರೆಮನೆಯ ಮುಖ್ಯಸ್ಥ ಸ್ವಸ್ಥಾನವನ್ನು ಸೇರಿದ, ಹೊರೆ ಇಳಿದ ಸಮಾಧಾನದಿಂದ ಎರಡು ಘಳಿಗೆಗಳ ನಿದ್ದೆಗಾಗಿ ಆತ ಮೈ జాబ$దా. ಎರಡು ಮೂರು ಹರದಾರಿಗಳ ದೂರ ಇಕ್ಕಟ್ಟಿನ ದಾರಿಯಲ್ಲಿ ಕುದುರೆಗಳು ವೇಗವಾಗಿ ಮಾರ್ಗ ಕ್ರಮಿಸಿದುವು. ಬಳಿಕ ಸವಾರರು ಇಳಿದು ಬಿಚ್ಚುಗತ್ತಿಗಳಿಂದ ದಾರಿ ಬಿಡಿಸಿ ಕೊಳ್ಳುತ್ತ, ಕುದುರೆಗಳನ್ನು ನಡೆಸಿಕೊಂಡು, ಮತ್ತೂ ಒಂದಿಷ್ಟು ದೂರ ಕಾಡಿನ ಒಳ ಹೋದರು. “ಸಾಕು ಅಲ್ಲವಾ, ಶಂಕರಪ್ಪ?” ಎಂದ ಐಯಣ್ಣ. "ಹಾ೦.' ಐಯಣ್ಣ ಕಟ್ಟುಗಳನ್ನು ಸಡಿಲಿಸಿ, ಶವವನ್ನು ಕೆಳಕ್ಕೆ ತಳ್ಳಿ, ನಾಲ್ಕು ಹೆಜ್ಜೆ ಎಳೆದು. ಕೈಗಳನ್ನು ಕೊಡವಿಕೊಂಡ. ಐಯಣ್ಣನೆಂದ : “ಇವನು ಚಿಕ್ಕವನು–ನಂಜುಂಡಪ್ಪ." - ಪ್ರತಿಕ್ರಿಯೆಯಾಗಿ ಯಾವ ಮಾತೂ ಶಂಕರಪ್ಪನಿಂದ ಬರಲಿಲ್ಲ, ಐಯಣ್ಣ ಹೊರಳಿ ನೋಡಿದ, ಅಲ್ಲಿ ಶಂಕರಪ್ಪ, ತನ್ನ ಕುದುರೆಯ ಮೇಲಿದುದನ್ನು ಹಗುರವಾಗಿ ಕೆಳಗಿಳಿಸುವ ಕಾರ್ಯದಲ್ಲಿ ನಿರತನಾಗಿದ್ದ, ದೂರದಿಂದಲೆ ಐಯಣ್ಣ ಕೇಳಿದ: "ಬದುಕಿದಾಗ ಇರದಿದ್ದ ಕನಿಕರ ಸತ್ತ ಮಾಕೆ ಬಂತೇನಪ್ಪ?" ಏನೋ ಹೇಳಲೆಂದು ಹೊರಟ ಶಂಕರಪ್ಪ, ಮಾತನ್ನು ಹಿಂದಕ್ಕೆ ನೂಕಿ ಹೆ-ಹೈ ಎಂದು ನಕ್ಕ, ಧ್ವನಿ ಒಡೆದಿತು, ತನ್ನ ಕಾಲ ಸಪ್ಪಳವನ್ನು ತೀವ್ರಗೊಳಿಸಿ, ದೇಹವನ್ನು ತುಸು ದೂರ ಪೊದೆಯ ಮೇಲೆ ಎಳೆದಂತೆ ಮಾಡಿ, ಮರಳಿ ಕುದುರೆಯ ಬಳಿಗೆ ಆತ ಬಂದ. “ಓಗಾನ ಕಾರಕಾರರೇ." “ನಡಿ.” ಅಶ್ವಗಳನ್ನು ಕಿರುದಾರಿಯ ತನಕ ನಡೆಸಿ, ಪುನಃ ಅವುಗಳನ್ನೇರಿ, ಐಯಣ್ಣ ಮತು ಶಂಕರಪ್ಪ ಮಡಕೇರಿಗೆ ಅಭಿಮುಖರಾದರು. - ಬರುತ್ತ, ಚಾವಡಿಕಾರನೊಡನೆ ಕಾರಕಾರನೆಂದ: