ಪುಟ:ಸ್ವಾಮಿ ಅಪರಂಪಾರ.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೯೮ ಸ್ವಾಮಿ ಅಪರಂಪಾರ

 ಕೊಡಗಿನ ಸೇನಾಬಲವನ್ನು ಕುರಿತು ಮಾಹಿತಿ ಸಂಗ್ರಹಿಸಿದ.
   ಅರಸನೊಡನೆ ಕಾಸ್ಸಾಮೇಜರನ ಭೇಟಿ ಈ ಹಿನ್ನೆಲೆಯಲ್ಲಿ ನಡೆಯಿತು. ಹಿಂದೂಸ್ಥಾನಿ
 ಯಲ್ಲಿ ಆದ ಆ ಮಾತುಕತೆಯಲ್ಲಿ ರಾಜನೈತಿಕ ಕಟ್ಟುಗಳು ಸಡಿಲಿದುವು. ಅದುಮಿ ಹಿಡಿದ
 ಭಾವನೆಗಳು ಹೊರಕ್ಕೆ ಸಿಡಿದುವು.
   ಅರಸ :
   "ಇಷ್ಟು ದೂರ ಬರೋದಕ್ಕೆ ಬಹಳ ತೊಂದರೆ ತಗೊಂಡಿರಿ!"
   ಕಾಸ್ಸಾಮೇಜರ್:
   "ಸುಖದುಃಖ ವಿಚಾರಿಸಿಕೊಂಡು ಹೋಗೋಣ ಅಂತ ಬಂದೆವು."
   "ಸಾಧಾರಣ ಸಂವತ್ಸರದಲ್ಲಿ ಸ್ವತಂತ್ರ ರಾಜ್ಯವಾದ ಕೊಡಗಿನ ದೊರೆಗೊ ಕುಂಪನಿ
 ಯವರಿಗೂ ಒಡಂಬಡಿಕೆಯಾಗಿ ಭಾಷಾಪತ್ರಿಕೆ ಬರೆದರಲಾ__ಅದರಲ್ಲಿ ಸುಖದುಃಖ
 ವಿಚಾರಿಸಿಕೊಂಡು ಹೋಗೋದೂ ಒಂದು ಕಲಮೇನೋ ?"
   "ಮಹಾಸ್ವಾಮಿ ಹೇಳುತಿರೋದು ಹಳೆಯ ಮಾತು. ಕ್ರಿಸ್ತಶಕ ೧೭೯೦ನೇ ಇಸವೀದ್ದು.
 ಅದಾದ ಮೇಲೆ ಕಾವೇರಿಯಲ್ಲಿ ಬಹಳ ನೀರು ಹರಿದಿದೆ."
   "ಕಾವೇರಿಯಲ್ಲಿ ನೀರು ಯಾವಾಗಲೂ ಹರೀತಿರತದೆ. ನಿಮಗೆ ಗೊತ್ತಿಲ್ಲವೇನೋ,
 ಪಾಪ !"
   "ಇದೊಂದು ಹೇಳೋ ರೀತಿ ಬದಲಾಗಿದೆ ಅಂತ ಅರ್ಥ."
   "ಇಂಥ ನಿರರ್ಥಕ ಸಂಭಾಷಣೆ ನಮಗಿಷ್ಟವಿಲ್ಲ. ಸ್ಪಷ್ಟವಾಗಿ ಕೇಳತೀವಿ. ನನ್ನ ತಂಗಿ
 ಯನ್ನೂ ಭಾವನನ್ನೂ ಇನ್ನೂ ಶ್ರೀರಂಗಪಟ್ಟಣದಲ್ಲೇ ಯಾಕೆ ಮಡಗಿಕೊಂಡಿದೀರಿ?"
   "ರಕ್ಷಣೆ ಕೇಳಿ ಬಂದವರಿಗೆ ಆಶ್ರಯ ಕೊಡುವುದು ನಮ್ಮ ಧರ್ಮ."
   "ಅದನ್ನು ಕಟ್ಟಿಡಿ. ನಮ್ಮ ವಿರುದ್ಧ ಅವರನ್ನು ಉಪಯೋಗಿಸಬಹುದೂಂತ ಯೋಚಿಸಿ
 ದೀರೋ?"
   "ನೀವು ಯುವಕರು. ನಿಮಗೆ ರಾಜಕಾರಣ ತಿಳಿಯದು. ಕೊಡಗನ್ನು ಪೆಟ್ಟಿಗೆ
 ಹಾಗೆ ಮುಚ್ಚಿಡುವುದು ಸರಿಯಲ್ಲ."
   "ನಮ್ಮ ಮನೇನ ಭದ್ರಪಡಿಸಿಕೊಳ್ಳೋದಕ್ಕೆ ಇನ್ನೊಬ್ಬರ ಪರವಾನಿಗಿ ಬೇಕೇನು ?"
   "ಹ್ಞ ! ಏನು ಮಾಡಬೇಕಾದರೂ ನಮ್ಮ ಪರವಾನಿಗಿ ಬೇಕು."
   "ಸ್ವತಂತ್ರ ರಾಜ್ಯದ ಅರಸನ ಜತೆ ನೀವು ಮಾತಾಡತಾ ಇದೀರಿ, ನೆನಪಿರಲಿ!"
   "ಕೊಡಗು ಸ್ವತಂತ್ರ ರಾಜ್ಯ ಅಲ್ಲ, ಇದು ಟೀಪೂನ ಕೆಳಗಿತು, ಅವನನ್ನು ನಾವು
 ಸೋಲಿಸಿದೆವು. ಈಗ ನೀವು ನಮ್ಮ ಕೆಳಗೆ ಬಂದಿದೀರಿ."
   "ಟೀಪೂಗೆ ನಾವು ಆಶ್ರಿತರಾಗಿದ್ದೆವು ಅನ್ನೋದೇ ಸುಳ್ಳು."
   "ಸುಳ್ಳು ? ಕುಂಪನಿ ಸರಕಾರ ಯಾವತ್ತೂ ಸುಳಾಡುವುದಿಲ್ಲ. ನೀವು ನಮಗೆ ಅಪಮಾನ
 ಮಾಡತಿದೇರಿ."
   "ಹಾಗಾದರೆ ನೀವು ಇನ್ನು ಗಾಡಿಬಿಡಬಹುದಲ್ಲವೇ?”
   "ಏನೆಂದಿರಿ? ಗಾಡಿ ? ನಾವು ಮೇನೆಯಲ್ಲೇ ಹೋಗುತೇವೆ."
   ಚಿಕವೀರರಾಜ ನಕ್ಕು ನುಡಿದ:
   "ಪಾಪ, ನಿಮಗೆ ವಯಸ್ಸಾಗಿದೆ. ಮೇನೆಯಲ್ಲೇ ಹೋಗಿ."