ಪುಟ:ಸ್ವಾಮಿ ಅಪರಂಪಾರ.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ೯೯

   ಅಷ್ಟು ಹೇಳಿ, ಒಮ್ಮೆಲೆ ಧ್ವನಿ ಏರಿಸಿ. ಆತ ನುಡಿದ:
   "ಹೋದ ತಕ್ಷಣ ಚನ್ನಬಸಪ್ಪನನ್ನೂ ಅವನ ಹೆಂಡತಿಯನ್ನೂ ಕಳಿಸಿಕೊಡಿ."
   ಎದ್ದು ನಿಂತ ಕಾಸ್ಸಾಮೇಜರನೆಂದ:
   "ಇಲ್ಲ, ಸರ್ವಥಾ ಇಲ್ಲ."
   ಸಿಂಹಾಸನದ ಹಸ್ತವನ್ನು ಮುಷ್ಟಿಯಿಂದ ಗುದ್ದಿ ಅರಸನೆಂದ:
   "ಇದರ ಪರಿಣಾಮ ನೆಟ್ಟಗಾಗದು!"
   "ನಾವು ನೆಟ್ಟಗಾ ಮಾಡತೇವೆ."
   “ಆಗಲೇ ಅಂದೆ ಹೊರಡಿ ಅಂಸತ!”
   ಕ್ರುದ್ಧನಾದ ಕಾಸ್ಸಾಮೇಜರ್, ರಾಜನಿಗೆ ವಂದಿಸದೆಯೇ ಅಲ್ಲಿಂದ ಹೊರಬಿದ್ದ.
   ಮುಂದೆ ನಿಮಿಷವೂ ಮಡಕೇರಿಯಲ್ಲಿ ನಿಲ್ಲದೆ, ಆತ ಶ್ರೀರಂಗಪಟ್ಟಣಕ್ಕೆ ಪಯಣ
 ಬೆಳಸೆದ.
                          ೩೧
   ಆವರ್ತಿಯಲ್ಲಿ ತನ್ನ ಕುಟೀರದೆದುರು ಅಂಗಳದಲ್ಲಿ ಅಪರಂಪಾರಸ್ವಾಮಿ ಸೌದೆಯೊಡೆ
 ಯುತ್ತಲಿದ್ದ. ಕೊಡಲಿ ಎತ್ತರಕ್ಕೆ ಹಾರಿ ಭರದಿಂದ ಕೆಳಕ್ಕೆ ಬಂದು ದಿಮ್ಮಿಯಲ್ಲಿನ ಸೀಳು
 ಗುರುತನ್ನು ನೀಳಗೊಳಿಸುತ್ತಿತು, ಪುನಃ ಲೀಲಾಜಾಲವಾಗಿ ಸೀಳಿನಿಂದೆದು, ಮೇಲಕ್ಕೆ
 ನೆಗೆದು ಕೆಳಬಂದು, ಸರಿಯಾದ ಜಾಗದಲ್ಲೇ ದಿಮ್ಮಿಯನ್ನು ಹೊಗುತ್ತಿತ್ತು.
   ಕಾವಿಯುಡುಗೆಯ ಕೆಲ ಜಂಗಮರೂ ಇತರ ಕೆಲ ಭಕ್ತಾದಿಗಳೂ ಅರ್ಧವೃತ್ತಾಕಾರ
 ವಾಗಿ, ದೂರದಲ್ಲಿ, ಬೆರಗಾಗಿ నింತಿದ್ದರು.
   ಮತ್ತೂ ನಾಲ್ಕೇಟು ಬಿದ್ದ ಬಳಿಕ ಮನುಷ್ಯಗಾತ್ರದ ದಿಮ್ಮಿ ಎರಡು ಹೋಳಾಯಿತು.
   ನೆರೆದವರಿಂದ ಮೆಚ್ಚುಗೆಯ ಉದ್ಗಾರ ಹೊರಟಿತು.
   ಹಿಂದಿನಿಂದೊಬ್ಬನು ನಡೆದುಬಂದು ತಮ್ಮನ್ನು ಸೇರಿಕೊಂಡುದನ್ನು ಅವರು ಯಾರೂ
 ಕಾಣರು. ತಾರಕ ಸ್ವರದಲ್ಲಿ ಆ ವ್ಯಕ್ತಿಯೆಂದಿತು :
   "ಕಾಯಕವೇ ಕೈಲಾಸ ಕಾಣಿರೋ!"
   ಕೊಡಲಿಯನ್ನು ಕೆಳಕ್ಕೆಸೆದು, ತೋಳುಗಳನ್ನು ಅಗಲವಾಗಿ ಚಾಚಿ, ಅಪರಂಪಾರನೆಂದ:
   "ಬಂದೆಯಾ? ಬಾ, ಶಿವ! ಬನ್ನಿ ಸಿದ್ಧಲಿಂಗ!"
   ವ್ಯಕ್ತಿ, ಸಿದ್ಧಲಿಂಗ. ಗುಂಪು ಸೀಳಾಯಿತು. ಸಿದ್ಧಲಿಂಗ ಮುಂದೆ ಬಂದು ಅಪರಂಪಾರ
 ನನ್ನು ತಬ್ಬಿಕೊಂಡ.
   "ಶರಣು! ಸ್ವಾಮಿ ಅಪರಂಪಾರ, ಶರಣು !"
   ಮಿಲನದ ಉದ್ವೇಗವಿಳಿದಾಗ ಸಿದ್ಧಲಿಂಗ ಕೇಳಿದ:
   "ಇದೇನು ನಡೆಸಿದ್ದಿರಿ ಸ್ವಾಮಿಯೋರು?"
   ಅಪರಂಪಾರ ನಸುನಕ್ಕು ನುಡಿದ:
   "ಇದನ್ನು ಯಾರು ಒಡೀಬಲ್ಲಿರಿ ಅಂತ ಕೇಳಿದೆವು. ಒಬ್ಬರಾದರೂ ಬೇಡವೆ! ನೋಡಿ,
 ಶಿವ ಒಡೀತಾನೆ,ಅಂದೆವು.ಕೊಡಲಿ ಕೈಗೆತ್ತಿಕೊಂಡೆವು."
   "ಭಳಿರೆ !"