“ಮೊದಲ ಸಲ ಎತ್ತಿದಾಗಲೇ ದೂರದಿಂದ ಬರುತ್ತಿದ್ದ ನಿಮ್ಮನ್ನು ಕಂಡೆವು. ಮತ್ತೆ ಪ್ರತಿ ಸಲವೂ ಕಣ್ಣಿಗೆ ಬಿದ್ದಿರಿ. ಬಾಹುಗಳಿಗೆ ಬಲ ಬಂತು. ಮರದ ದಿಮ್ಮಿ ಹೋಳಾಯಿತು !"
ಸ್ವಾಮಿಯೊಡನೆ ಅಪರಿಚಿತ ಜಂಗಮನ ಸಮಾಗಮನವನ್ನು ನೋಡುತ್ತ ಜನ ನಿಂತಿ ದ್ದರು. ಅವರನ್ನು ಉದ್ದೇಶಿಸಿ ಅಪರಂಪಾರನೆಂದ:
“ಅಯ್ಯನವರು ನಂಜರಾಜಪಟ್ಟಣದಿಂದ ಬಂದಿದಾರೆ. ಇವರು ಶಿವಾಚಾರ್ಯಸಾಮಿ ಗಳ ಶಿಷ್ಯರು."
ಅಲ್ಲಿದ್ದವರೆಲ್ಲ ಸಿದ್ಧಲಿಂಗನಿಗೆ ಬಾಗಿ ನಮಿಸುತ್ರ "ಶರಣು! ಶರಣು!" ಎಂದರು. ಸಿದ್ದಲಿಂಗ ಉತ್ತರಿಸಿದ:
"ಹ್ಮ, ಶರಣ್ರೇಪಾ."
ಅಪರ೦ಪಾರನೆ೦ದ :
"ಒಳಗೆ ಬನ್ನಿ, ಅಯ್ಯನವರೇ."
...ಅಪರಂಪಾರನ ಖಾತಿ ಶಿವಾಚಾರ್ಯರನ್ನು ಮುಟ್ಟಿತ್ತು, ಆತ ಅವರ್ತಿಯಲ್ಲಿರುವ ನೆಂಬ ಸುದ್ದಿಯೂ ಅವರ ಕಿವಿಗೆ ಬಿತ್ತು, ಶಿಷ್ಯ ಸಿದ್ಧಲಿಂಗನಿಗೆ, "ಹೋಗಿ ನೋಡಿಕೊಂಡು ಬಾ" ಎಂದರು.
ಅಪರ೦ಪಾರನೆ೦ದ:
“ಒಂದು ಪ್ರಶ್ನೆ ಕೇಳತೇವೆ. ಲೌಕಿಕ ಎನಬೇಡಿ. ನಂಜರಾಜಪಟ್ಟದಲ್ಲಿ ಸ್ವಾಮಿಗಳು, ಇನ್ನುಳಿದ ನಮ್ಮ ಕಳುಬಳ್ಳಿ, ಎಲ್ಲಾ ಕ್ಷೇಮ?"
"ಓ ಹೋ."
ಸ್ವರ ತಗ್ಗಿಸಿ, ಇದು ಬೇರೆ ಅಧಾಯ ಎನ್ನುವಂತೆ ಸಿದ್ದಲಿಂಗ ಆರಂಭಿಸಿದ:
"ಸ್ವಾಮಿಗಳು ಒಂದು ಮುಖ್ಯ ಸಂಗತಿ ನಿಮಗೆ ತಿಳಿಸಬೇಕೊ೦ತ ನನ್ನನ್ನು ಕಳಿಸಿದ್ದಾರೆ.
"ಹೌದೆ?ಏನದು?".
"ಇಂಗ್ರೇಜಿಯವರು ಕೊಡಗಿನ ಮೇಲೆ ದಂಡೆತ್ತಿ ಬರೋ ಸೂಚನೆಗಳವೆ, ಚನ್ನಬಸಪ್ಪ- ದೇವಮಾಜಿ ಶ್ರೀರಂಗಪಟ್ಟಣಕ್ಕೆ ಓಡಿಹೋಗಿದಾರೆ. ದೇಶ ಯುದ್ಧಕ್ಕೆ ಅಣಿಯಾಗತಾ ಆದೆ."
ಅವನತಶಿರನಾಗಿ ಅಪರಂಪಾರ ಕುಳಿತ. ಅವನ ಮನಸು ಚಿಂತಿಸಿತು:
ಕಾಲಕ್ರಮೇಣ ಈ ಸುದ್ದಿ ತನಗೆ ಗೊತ್ತಾಗಿಯೇ ಆಗುತ್ತಿತ್ತು, ಈಗಲೇ ತಿಳಿಸುವಂತೆ ಸಿದ್ದಲಿಂಗನನ್ನು ಶಿವಾಚಾರ್ಯ ಸ್ವಾಮಿಗಳು ಅಟ್ಟಿದ ಉದ್ದೇಶವೇನು? ತನ್ನಿಂದ ಅವರೇನನ್ನು ಅಪೇಕ್ಷಿಸುತಾರೆ?
"ಸ್ವಾಮಿಗಳು ಇನ್ನೇನಾದರೂ ಅಂದರೆ?"
“ಹ್ಮ, ಇಂಗ್ರೇಜರು ಗೆದ್ದರೆ ಹಾಲೇರಿ ವಂಶದ ಅವಸಾನವಾಗತದೆ; ಸ್ವಾತಂತ್ರ್ಯ ನಷ್ಟವಾಗತದೆ; ಧರ್ಮಗ್ಲಾನಿಯಾಗತದೆ."
“ಅದಕ್ಕೆ?”.
"ಇಂಗ್ರೇಜರ ವಿರುದ್ಧ ಜನರನ್ನು ನಾವು ಹುರಿದುಂಬಿಸಬೇಕು–ಅಂದಿದ್ದಾರೆ."
"ಇದು ಜಂಗಮರು ಮಾಡುವ ಕೆಲಸವಾ ?"