ಪುಟ:ಸ್ವಾಮಿ ಅಪರಂಪಾರ.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸಾಮಿ ಅಪರ೦ಪಾರ {C) ೧೦೧

   "ಜಂಗಮರಿನ್ನು ವೀರ ಜಂಗಮರಾಗಬೇಕು–ಅನ್ನುತಾರೆ ಗುರುಗಳು.” 
   ಒಂದು ಕ್ಷಣದ ಮೌನದ ಬಳಿಕ ಅಪರಂಪಾರನೆಂದ:
  "ಸರಿ, ಅವರ ಅಪೇಕ್ಷೆ ಅಪ್ಪಣೆಗೆ ಸಮಾನ.”
   "ನಾವು ಮೈಸೂರಲ್ಲಿ ಇಂಗ್ರೇಜಿ ದಂಡಿನ ಹತ್ತಿರ ಇದ್ದರೆ ಹೆಚ್ಚಿನ ವಿಷಯ ತಿಳೀ
ಬಹುದು. ನಾವು ಅಂದರೆ, ನಾನು ಮತ್ತು ನೀವು. ಇನ್ನು ಮುಂದೆ ನಾನು ನಿಮ್ಮನ್ನು
ಬಿಟ್ಟಿರತಕ್ಕದ್ದಲ್ಲ ಅಂತ ಗುರುಗಳ ಆಜ್ಞೆಯಾಗಿದೆ.
   "ನನ್ನ ಮಟ್ಟಿಗೆ ಇದು ಅನುಗ್ರಹ.. ಒಬ್ಬನಿದ್ದೆ, ಇಬ್ಬರಾದೆವು."
   "ಇಬ್ಬರು ? ಹೊರಗೆ ನೋಡಿದೆನಲ್ಲಪ್ಪ ಅಷ್ಟೊಂದು ಜನರನ್ನ ? ಎಪ್ಪತ್ತೆ-

ಎ೦ಬತ್ತೆ ?" -

   "ಅದು ಶಿಷ್ಯಗಣ." 
   "ಓಹೋ, ನಾವು ಗಣಾಚಾರರು ಅನ್ನಿ, ಶಿವ ಶಿವ ಶಿವ!"
                                         
                                             ೩೨
   ಮದರಾಸಿನ ಗವರ್ನರನಿಗೂ ಕಲಕತ್ತೆಯಲ್ಲಿದ್ದ ಗವರ್ನರ್ ಜನರಲನಿಗೂ ಕಾಸ್ಸಾ
ಮೇಜರನ ವರದಿ ಕಂಡು ಸಮಾಧಾನವೆನಿಸಿತು.
   ಅಗ್ನಿ ಸಿದ್ಧವಾಗಿತು, ಕಬ್ಬಿಣದ ಕೊರಡನ್ನು ಅದಕ್ಕೆ ಹಾಕಿದ್ದರು. ಅದು ಕಾದು

ಕೆಂಪಾಗಬೇಕು, ಕೆಂಪು ಬಿಳಿಯಾಗಬೇಕು, ಆ ಬಳಿಕ ಹೊಡೆತ. ಆ ವರೆಗೂ ತಿದಿಯನೂದುತ ಇರಬೇಕು.

   ನಾಗಪುರದ ರೆಸಿಡೆಂಟನಾದ ಗ್ರಾಯೆಮ್ ಬೆಂಗಳೂರಿನ ಹಿತಕರ ಹವೆಯಲ್ಲಿ ಆಗ

ವಿಶಾಂತಿಪಡೆಯುತ್ತಿದ್ದ, ಮಾತುಕತೆಯ ನೆಪದಿಂದ ಆತನನ್ನು ಮಡಕೇರಿಗೆ ಕಳುಹಿಸಿ ದಂಡಯಾತ್ರೆಯ ಯೋಜನೆಯ ವಿವರಗಳನ್ನು ಸಿದ್ಧಪಡಿಸಲು ಕುಂಪನಿ ನಿರ್ಧರಿಸಿತು. ಗ್ರಾಯೆಮ್ ಮಾತುಕತೆಗೆ ಬರಲಿರುವುದಾಗಿ ಚಿಕವೀರರಾಜೇಂದ್ರನಿಗೆ ತಿಳಿಸಲಾಯಿತು.

  "ಇಂಥ ಭೇಟಿ ಅನಗತ್ಯ" ಎಂದ ರಾಜ.
   ಅಗತ್ಯ ಎಂದು ಮನಗಾಣಿಸುವುದಕ್ಕಾಗಿ ಕುಂಪನಿಯ ಇಬ್ಬರು ಚಾಕರರು-ದಾರಾ ಸೇಟ್

ಹಾಗೂ ಕುಲಪಟ್ಟಿ ಕರುಣಾಕರ ಮೆನೊನ್-ಮಡಕೇರಿಗೆ ಬಂದರು. ಒಬ್ಬ ಪಾರಸೀ ವರ್ತಕ; ಇನ್ನೂಬ್ಬ ತಲಚೇರಿಯಲ್ಲಿ ಮಲೆಯಾಳದ ಕಲೆಕ್ಟರರ ಶಿರಸ್ತೇದಾರ, ಗ್ರಾಯೆಮ್ ಮಾಡಲಾಗದಿದ್ದ ಗೂಢಚರ್ಯೆಯನ್ನು ಇವರಿಂದ ಮಾಡಿಸಲು ಇಂಗ್ಲಿಷರು ಯತ್ನಿಸಿ ದರು. ಆದರೆ ಕೊಡಗಿನಲ್ಲಿ ಇವರನ್ನು ಬಂಧಿಸಲಾಯಿತು.

   ಅರಸ ಗದರಿ ಕೇಳಿದ:
  "ಯಾರ ಅಪ್ಪಣೆ ಪಡೆದು ನಮ್ಮ ರಾಜ್ಯವನ್ನು ಹೊಕ್ಕಿರಿ?" 
   ಮೆನೊನ್ ಉತ್ತರಿಸಿದ: 
  "ಕುಂಪನಿಯವರ ಅಪ್ಪಣೆ ಚೀಟಿ ಅದೆ, ಮಹಾರಾಜರೇ.”
  “ಈ ರಾಜ್ಯದ ಒಳಗೆ ಕಾಲಿಡೋದಕ್ಕೆ ಅವರು ಚೀಟಿ ಕೊಡತಾರ? ಇದೇನು
ವಿಲಾಯಿತಿ ಅ೦ದುಕೊ೦ಡರಾ ಅವರು ?”