ಪುಟ:ಸ್ವಾಮಿ ಅಪರಂಪಾರ.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೦೨ ಸಾಮಿ ಆಪರ೦ಪಾರ

    "ಹೀಗೆ ಮಾತಾಡಬಾರದು ಮಹಾರಾಜರೆ, ನಾವು ಸಂಧಾನಕ್ಕೆ ಬಂದಿದೇವೆ."
    "ಸಂಧಾನ ನಿನ್ನ ತಲೆ, ಪರದೇಶಿಗಳ ಎಂಜಲು ತಿಂದು ಬದುಕೋ ಕ್ಷುದ್ರ ಜಂತು!

ನಮಗೆ ಸರಿಸಮನಾಗಿ ಮಾತಾಡತೀಯ? ಏ ಸೇಟ್ ನಿನ್ನದೇನು ಕಾರಭಾರ?"

    ತನ್ನ ವರ್ತನೆ ಹೇಗಿರಬೇಕೆಂದು ಆಗಲೇ ನಿರ್ಧರಿಸಿದ್ದ ದಾರಾ ಸೇಟ್ ವಿನಮ್ರನಾಗಿ 

ಅ೦ದ :

    "ನಾನೊಬ್ಬ ಬಡ ವರ್ತಕ ವ್ಯಾಪಾರಕ್ಕೆ ಬಂದೆ."
    “ಎಲ್ಲರೂ ವ್ಯಾಪಾರಕ್ಕೆಂತಲೇ ಬರತಾರೆ! ಕಾರಕಾರ ಐಯಣ್ಣ! ಈ ಬೇಪಾರಿಯನ್ನು

ಗಡಿಯಾಚೆಗೆ ಮೈಸೂರಿಗೋ ಮಲೆಯಾಳಕ್ಕೋ ದಾಟಿಸು. ತನ್ನ ಯಜಮಾನರ ಹತ್ತಿರ ದೂರು ಕೊಡಲಿ, ಈ ಮೆನೊನ್, ಶಿರಸ್ತೇದಾರನಂತೆ-ಶಿರಸ್ತೇದಾರ, ಇವನ ಶಿರಸ್ಸನ್ನು ಚೆ೦ಡಾಡೋಣ ಅನ್ನಿಸತದೆ.ಆದರೂ ಬಿಟ್ಟಿರತೀವಿ.ಒಯ್ದು ಬ೦ದೀಖಾನೆಯಲ್ಲಿಡಿ. ಚನ್ನಬಸಪ್ಪನನ್ನು ಫರಂಗಿಯವರು ನಮಗೊಪ್ಪಿಸಿದ ಮೇಲೆ ಈತನನ್ನು ಹೊರಗೆ ಬಿಡೋಣ."

    ಮೆನೊನ್ ಕೂಗಾಡಿದ :
     "ನಾನು ರಾಯಭಾರಕ್ಕೆ ಬಂದವನು. ನನ್ನ ಮೇಲೆ ಕೈಮಾಡಿದರೆ ನಿಮಗೆ ಶಾಸ್ತಿ 

ಯಾಗತದೆ."

     ರಾಜ ಗರ್ಜಿಸಿದ: 
    "ಕಂಡಿದೀನಿ, ಕಂಡಿದೀನಿ. ಇವನ ಕೆಟ್ಟ ಮುಸುಡು ನೋಡಲಾರೆ ಎಳಕೊಂಡು 

ಹೋಗರೋ ಈ ಮುಂಡೇದನ್ನ ಆಚೆಗೆ."

    ...ಇದಾದ ಸ್ವಲ್ಪ ಹೊತ್ತಿನಲ್ಲೇ ಬೋಪು ದಿವಾನ ಅರಸನ ಭೇಟಿಗೆ ಬಂದ.
    ಪಡೆವಳ ಆ ಸುದ್ದಿಯನ್ನು ತಿಳಿಸಿದಾಗ ಚಿಕವೀರರಾಜನ ಹುಬ್ಬು ಗಂಟಿಕ್ಕಿತು. ಬಿಡು 

ವಿಲ್ಲ. ಸಂಜೆ ಬರಲಿ–ಎಂದು ಹೇಳೋಣವೆನ್ನಿಸಿತು ಮೊದಲು.

     ಬೋಪಣ್ಣ ಹೊರಗೆ ಕಾಯುತ್ತಿದ್ದುದನ್ನು ಅರಿತ ರಾಣಿ ಗೌರಮ್ಮ, ರಾಜನ ಬಳಿಗೆ 

ಬ೦ದು. “ಏನು ತೊ೦ದರೆಯೋ ಏನೋ, ಮಾತಾಡಿ ಕಳಿಸಬಾರದು ? " ಎ೦ದಳು.

     "ಸ್ವಂತದ ತೊಂದರೆ ಅವನಿಗೆ ಯಾವುದೂ ಇಲ್ಲ, ಇನ್ನೊಬ್ಬರಿಗೆ ತೊಂದರೆ ಕೊಡೋ 

ದೊಂದೇ ಆತನಿಗೆ ಗೊತ್ತಿರೋದು. ಹುಂ. ಬರಲಿ" ಎಂದ ಚಿಕವೀರರಾಜೇಂದ್ರ,

     ರಾಣಿ ಒಳಕ್ಕೆ ಹೊರಟುಹೋದಳು. ಬೋಪಣ್ಣ ಬಂದು ಯಾಂತ್ರಿಕವಾಗಿ ನಮಿಸಿದ. 
     ಅರಸನೆ೦ದ : 
     "ನಮಗೆ ತಲೆನೋವು, ಈ ಬಿಸಿಲಲ್ಲಿ ಬಂದಿದೀರಲ್ಲ ? ಚುಟುಕಾಗಿ ಹೇಳಿಬಿಡಿ, ಏನು 

ಸಮಾಚಾರ ?"

     "ಕುಂಪನಿಯ ಇಬ್ಬರು ದೂತರು ಬಂದದು ತಿಳೇತು."
      "ಅವರಿಗೆ ಶಿಕ್ಷೆಯಾದದ್ದೂ ತಿಳಿತೊ ?
      "ಅದೂ ತಿಳೀತು." 
       "ಪರವಾಗಿಲ್ಲ! ದಿವಾನರು ಸುದ್ದಿ ತರಿಸೋಕೆ ಸಮರ್ಪಕ ವ್ಯವಸ್ಥೆ ಮಡಗಿದೀರಿ." 
       "ನನ್ನನ್ನು ಕರೆಸಿದ್ದರೆ ಚೆನಾಗಿತು. ತಾವು ಹಾಗೆ ಮಾಡಿದು ಸರಿಯಲ್ಲ. ಇದರಿಂದ 
ಇಂಗ್ರೇಜಿಯವರು ಸಿಟಾಗತಾರೆ."