ಪುಟ:ಸ್ವಾಮಿ ಅಪರಂಪಾರ.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



                                                ಸಾಮಿ ಅಪರಂಪಾರ                                             ೧೦೩
      "ಅವರನ್ನು ಸಂತೋಷಪಡಿಸುವುದೊಂದೇ ನಿಮ್ಮ ಕರ್ತವ್ಯ ಅನ್ನೋ ಹಾಗೆ ಮಾತಾಡ

ತೀರಲ್ಲ!”

      "ನನ್ನ ಸಾಮಿನಿಷ್ಟೆಯ ವಿಷಯದಲ್ಲಿ ಮಹಾರಾಜರು ಶಂಕೆ ತೋರಿಸತಾ ಇದಾರೆ."
      "ನಿಮ್ಮ ಇತ್ತೀಚಿನ ನಡವಳಿಕೆ ಒಂದೂ ಅರ್ಥವಾಗದೆ ಆಶ್ಚರ್ಯಪಡತಾ ಇದೀವಿ."
      "ಸಿಂಹಾಸನದ ಸೇವೆಯಲ್ಲೇ ನನ್ನ ಕೂದಲು ನೆರೆಯೋಕೆ ಶುರುವಾಗದೆ.  ಇದಕ್ಕಿಂತ

ಹೆಚ್ಚು ನಾ ಹೇಳೋದಿಲ್ಲ."

      "ನಮಗಿಂತ ನೀವು ವಯಸ್ಸಿನಲ್ಲಿ ದೊಡ್ಡವರು. ನಿಮಗೆ ಗೌರವ ಕೊಡಬೇಕು ಅಂತ

ಮನಸ್ಸು, ಆ ಅರ್ಹತೆ ನೀವು ಉಳಿಸಿಕೋಬೇಕು."

       "ನನ್ನ ಕರ್ತವ್ಯ ನಾನು ಮಾಡತೇನೆ. ಇಂಗ್ರೇಜಿಯವರ ದ್ವೇಷ ಕಟ್ಟಿಕೊಳ್ಳೋದು

ಕ್ಷೇಮ అల్ల."

      "ವೈರ ಸಾಧಿಸಬೇಕೂಂತ ನಮಗೇನು ತೀಟೆಯೇ? ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು 

ಬಿಡಿ–ಅಂತ ಅವರಿಗೆ ಹೇಳತೀವಿ. ಅದರ ಬದಲು, ಆಶ್ರಿತ ರಾಜನಾಗು, ಮಾಂಡಲಿಕ

ನಾಗು ಅಂದರೆ ನಾವು ಒಪ್ಪಿಕೋಬೇಕಾ?"
      ಇದನ್ನೆಲಾ ಸಂಧಾನದ ಮೂಲಕ ಬಗೆಹರಿಸಬೇಕು." 
      "ನೇರ ಸಂಧಾನವೊ? ಚದಿ ಸಂಧಾನವೊ ?”
       ಬೋಪಣ್ಣ ಥಟ್ಟನದ್ದ. 
       "ಇನ್ನು ನಾನಾ ಬರುವುದಿಲ್ಲ, ಮಹಾಸಾಮಿಗಳೆ, ನನ್ನ ಕೂಡೆ ಮಾತಾಡಬೇಕು

ಅನಿಸಿದರೆ ತಾವು ಕರೆಕಳಿಸಬಹುದು.'

       ರಾಜನೆಂದ: 
      ಈ ಸುಬುದ್ಧಿ ನಿಮಗೆ ಮೊದಲೇ ಇದ್ದಿದ್ದರೆ, ಈ ವ್ಯರ್ಥ ಮಾತುಕತೇನ ತಪ್ಪಿಸ 

ಬಹುದಾಗಿತು."

      ಬೋಪಣ್ಣ ಹೊರಟುಹೋದ ಮೇಲೆ, ಚಿಕವೀರರಾಜನ ಮಗಳು ಒಳಬಾಗಿಲಲ್ಲಿ

ಕಾಣಿಸಿಕೊಂಡಳು. ಋತುಮತಿಯಾಗಿ ಕೌಮಾರ್ರ್ಯದ ಕಳೆಯಿಂದ ಶೋಭಿಸುತ್ತಿದ್ದ ಹುಡುಗಿ.

     ಆಕೆ ಕೇಳಿದಳು:
     "ಉಣ್ಣೇಕೆ ಬರದತೀರಾ,ಅಪ್ಪಾಜಿ?"
      ತನ್ನೆದರ ಕವಿದ ಕರಿ ಮೋಡಗಳನ್ನು ಸರಿಸಿ,ಏಳುತ್ತ.ಚಿಕವೀರ

ರಾಜನೆ೦ದ:

     ಬದೆ, ಮರಿ."
                                                  ೩೩
      ಶ್ರೀರಂಗಪಟ್ಟಣದ ರಂಗನಾಥ ದೇವಾಲಯದಲ್ಲಿ ಘಂಟಾರವ ಕೇಳಿಸುತ್ತಿತು, ಅದು 
  ಸಂಜೆಯ ದೀಪಾರಾಧನೆಯ ಹೊತ್ತು,      ತುಸು ದೂರದ ಮಸೀದಿಯಿಂದ ಇರುಳಿನ 
 ಪಾರ್ಥನೆಗಾಗಿ ಕರೆ ಕೇಳಿಬರುತ್ತಿತು,   ಆಂಗ್ಲರ ಸೈನಿಕ ಶಿಬಿರಗಳಲ್ಲಿ ಗಾಯನ ನರ್ತನ 
 ಗಳಗುತ್ತಿದ್ದುವು. -
     ಅದು, ಸುಮಾರು ಮೂರು ದಶಕಗಳಿಗೆ ಹಿಂದೆ ವಿಸ್ತುತವಾದೊಂದು ಬಲಿಷ್ಟ ರಾಜ್ಯದ