ಪುಟ:ಸ್ವಾಮಿ ಅಪರಂಪಾರ.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೦೪ ಸ್ವಾಮಿ ಅಪರ೦ಪಾರ

ರಾಜಧಾನಿಯಾಗಿದ್ದ ಪಟ್ಟಣ, ಕೋಟೆಕೊತ್ತಳಗಳ ಸೌಕರ್ಯ ದೇಶೀಯರಿಗೆ ಇರಬಾರ ದೆಂದು ಆಂಗ್ಲರು ಮೈಸೂರು ನಗರವನ್ನು ಆಡಳಿತದ ಕೇಂದ್ರವಾಗಿ ಮಾಡಿದ್ದರು. ಶ್ರೀರಂಗಪಟ್ಟಣ ಸೇನಾಬಲದ ಠಾಣ್ಯವಾಗಿ ಉಳಿದಿತು, ಅದನ್ನು ಪೂರ್ತಿಯಾಗಿ ಹಾಳು ಗೆಡವಿ, ಸೈನ್ಯವನ್ನು ಬೆಂಗಳೂರಿಗೆ ಒಯ್ಯಬೇಕೆಂಬುದು ಇಂಗ್ಲಿಷರ ಯೋಜನೆಯಾಗಿತು.

      ಕತ್ತಲಾದಾಗ ಪಟ್ಟಣವನ್ನು ತಲಪಿದ ಅಪರಂಪಾರನೂ ಸಿದ್ಧಲಿಂಗನೂ ಚನ್ನಬಸಪ್ಪ

ವಾಸವಾಗಿದ್ದ ಮನೆಯನ್ನು ಕಂಡುಹಿಡಿದರು. ಮನೆಯ ಮುಂದೆ ಸಶಸ್ತ್ಯ ಕಾವಲುಗಾರ ರಿದ್ದರು.

     "ಶಿವ ಶಂಭೋ ಶಂಕರ ಮಹಾದೇವ !
    -ಎರಡು ಕಂಠಗಳಿ೦ದ ಬ೦ದ ಉದಾರ.
     ಕಾವಲುಗಾರರಲ್ಲಿ ಒಬ್ಬನೆಂದ:
     "ಮುಂದಕ್ಕೆ ಓಗ್ರಿ, ಅಪ್ಪಗಳಾ, ಇದು ಧರ್ಮಛತ್ರ ಅಲ್ಲ.'
     ಸ್ವರವೇರಿಸಿ ಅಪರಂಪಾರನೆಂದ:
     "ಶಿವ,ಶಿವ,ಶಿವ. ಸ್ವಾಮಿಗಳನ್ನ ಮಾತನಾಡಿಸೋ ಧರ್ಮಿಷ್ಟರು ಇಲ್ಲವಾ ಈ 

ಮನೇಲಿ?"

      ಇದು, ಒಳಗಿದ್ದ ದೇವಮ್ಮಾಜಿಗೆ ಕೇಳಿಸಿತು. ಉಪ್ಪರಿಗೆಯಲ್ಲಿದ್ದ ಚನ್ನಬಸಪ್ಪನ
ಕಿವಿಗೂ ಅದು ಬಿದ್ದು , ಆತ ಇಳಿದುಬಂದ.
     "ಹೋಗಿ ನೋಡಬಾರದೆ?" ಎಂದಳು ದೇವಮ್ಮಾಜಿ.
     ಚನ್ನಬಸಪ್ಪ ತಲೆಬಾಗಿಲನ್ನು ಸಮಿಾಪಿಸಿದ, ಬೆಳೆದು ಕೂದಲು ಜಡೆಗಟ್ಟಿದವನೊಬ್ಬ ; 

ತಲೆಮುಖಗಳನ್ನು ನುಣ್ಣಗೆ ಬೋಳಿಸಿದವನೊಬ್ಬ. ಕಾವಿಯುಡುಗೆಯನ್ನು ಕಂಡೊಡನೆ ಚನ್ನಬಸಪ್ಪ ಕೈಗಳನ್ನು ಜೋಡಿಸಿದ.

     "ದಯಮಾಡಿಸಬೇಕು."
     "ಕೊಡಗಿನ ಅರಮನೆಯ ಅಳಿಯ ಇಲ್ಲಿದಾರೇಂತ ಕೇಳಿದೆವು."
     “ಹೌದು , ನಾನೇ."
      ಜಂಗಮರಿಬ್ಬರು ಒಳಗೆ ಕಾಲಿಡುತ್ತಿದ್ದಂತೆ ದೇವಮ್ಮಾಜಿ ಬಂದು ಅವರಿಗೆ ಪ್ರಣಾಮ

ಮಾಡಿದಳು, ಚನ್ನಬಸಪ್ಪನೂ ಆಕೆಯನ್ನು ಅನುಸರಿಸಿದ.

      ಅವಳನ್ನೂ ಬಲ್ಲವನೇ ಅಪರಂಪಾರ.
     "ದೊರೆಮಗಳಲ್ಲವೇ ?"
     "ಹೌದು. ತಮಗೆ ಎಲಾಯ್ತು?" -
     "ಹರಿವ ನದಿಗೆ ಮೈಯೆಲ್ಲ ಕಾಲು. ಉರಿವಗ್ನಿಗೆ ಮೈಯೆಲ್ಲ ನಾಲಗೆ, ಬೀಸುವಗಾಳಿಗೆ

ಮೈಯೆಲ್ಲ ಕೈ, ತಿರಿದುಂಬ ಜಂಗಮರಿಂಗೆ ಜಗವೆಲ್ಲ ಊರು."

      ದೇವಮ್ಮಾಜಿ ಅಂದಳು :
     "ಸತ್ಯರಿಸೋಣ ಅಂದರೆ ಇದು ಅರಮನೆಯಲ್ಲ, ಬಡವರ ಹಟ್ಟಿ, ಆದರೂ 

ದಾಸೋಹಕ್ಕೆ-"

     "ಬೇಡ, ತಾಯಿ, ಇನ್ನೊಮ್ಮೆ ತಪ್ಪದೆ ಬಂದೇವು, ಕಾವೇರಿತಟಕ್ಕೆ ಹೊರಟವರು ಎರಳು 

ಕ್ಷಣ ಇದು ಹೋಗೋಣ ಅಂತ ಹೊಕ್ಕೆವು."