ಪುಟ:ಸ್ವಾಮಿ ಅಪರಂಪಾರ.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೦೬ ಸ್ವಾಮಿ ಅಪರoಪಾರ

   "ಮನೆ ಜಗಳ. ಮೂರನೆಯವರು ಬರಬಾರದಿತ್ತು."
   “ಇದೆಲ್ಲ ಪ್ರಾಪಂಚಿಕರಿಗೆ ಸೇರಿದ್ದು. ತಮ್ಮಂಥ ವಿರಕ್ತರು ಇದನ್ನು ಮನಸ್ಸಿಗೆ ತಕೋ 
ಬಾರದು."
   ಚನ್ನಬಸಪ್ಪನ ಧ್ವನಿಯಲ್ಲಿ ಕಾಠಿನ್ಯದ ಛಾಯೆ ಬೆರೆಯಿತು.
  "ಸಿಟ್ಟಾಗಬೇಡ, ಚನ್ನಬಸಪ್ಪ. ಸಹಜವ ದುಡಿದರೆ ಯಾರಿಗೂ ಸೇರದು; ಅಸಹಜ 
ಕಲ್ಲದೆ ಲೋಕ ಭಜಿಸದು. ರಾಜ್ಯ ಹಾಳಾಗತದೆ ಅಂತ ಸಂಕಟವಾಗಿ ಒಂದು ಮಾತು 
ಹೇಳೋಕೆ ಬಂದೆವು. ಇನ್ನು ಹೊರಡತೀವಿ."
   ಅಪರಂಪಾರ ಎದ್ದ.
   ಇಷ್ಟು ಬೇಗ ಸ್ವಾಮಿಗಳು ಹೊರಟರಲ್ಲ ಎಂದು ದೇವಮ್ಮಾಜಿ ಕಕ್ಕಾವಿಕ್ಕೆಯಾದಳು. 
ಅವಳು ఆంజಲೀಬದ್ಧ್ ఆంದಳು:
   “ಹಣ್ಣು ಹಂಪಲು ಏನಾದರೂ..."
   "ಈಗ ಬೇಡ, ತಾಯಿ" ಎಂದ ಅಪರಂಪಾರ.
   "ಹೋಗಲಿ, ಬಿಡು. ಇನ್ನೊಮ್ಮೆ ಬರತಾರೆ" ಎಂದು ಚನ್ನಬಸಪ್ಪ ನುಡಿದ.
   ಜಂಗಮರು ಅಂಗಳ ದಾಟುತ್ತಿದ್ದಂತೆ ಅವನೆಂದ:
   "ಸ್ವಾಮಿಗಳ ಹೆಸರು ತಿಳೀಲಿಲ್ಲ."
   "ನಮ್ಮ ಹೆಸರೆ? ನಾವು ಅಪರಂಪಾರರು...ಅಪರಂಪಾರರು!"
   ...ಮನೆಯೊಳಕ್ಕೆ ಮರಳಿದ ಚನ್ನಬಸಪ್ಪ ನಡುಮನೆಯ ಉಯ್ಯಾಲೆಯ ಮೇಲೆ 
ಕುಳಿತು, 'ಅಪರಂಪಾರ...ಈ ಹೆಸರು ಕೇಳಿರುವೆನಲ್ಲ? ವೀರಪ್ಪಾಜಿಯೇನು ಈತ?'
ಎಂದು ಗೊಂದಲಕ್ಕೀಡಾದ.
   "ಸೋಮಿಗಳು ಹಾಗಂದರೂಂತ ಬೇಜಾರಾಯಾತ?” ಎಂದು ಕೇಳಿದಳು ದೇವಮಾಜಿ, 
ನಿ೦ತು.
   "ಇವನು ಠಕ್ಕ ಸನ್ಯಾಸಿ ಅನಿಸತದೆ."
   "ಶ್ ! ಹಾಗನ್ನಬಾರದು."
   "ಸುಮ್ಮನಿರು!"
   ರಾತ್ರೆ ಬಹಳ ಹೊತ್ತು ಚನ್ನಬಸಪ್ಪನಿಗೆ ನಿದ್ರೆ ಹತ್ತಲಿಲ್ಲ.
   'ವೀರಪ್ಪಾಜಿಯೆಂಬುದು ನಿಜವಾದರೂ ಇವನೇನು ಅರಸನ ಸ್ನೇಹಿತ ಅಲ್ಲವಲ್ಲ' ಎಂದು 
ಕೊಂಡ ಆತ.
   'ಆದರೂ. ಚಳಿಗಾಲ ಕಳೆದ ಕೂಡಲೆ ದೌಡು ನಡೀತದೆ ಅಂತ ನಾನು ಹೇಳಬಾರ
ದಿತ್ತು' ಎಂದು ವ್ಯಥಿತನಾದ.
   ...ದಾರಿಯಲ್ಲಿ ಅಪರಂಪಾರನೆಂದ:
   "ಸಿದ್ಧಲಿ೦ಗ!"
   "ಏನಪ್ಪಣೆ?"
   "ನಾವೀಗ ಹೋಗೋದು ಕಾವೇರಿ ತಟಕ್ಕಲ್ಲ. ಇಲ್ಲಿಂದ ಪಾರಾಗಬೇಕು."
   "ಹ್ಞು."
   "ದಂಡಯಾತ್ರೆಯ ವಿಷಯ ಆತ ಹೇಳಿದನಲ್ಲ_?"