ಪುಟ:ಸ್ವಾಮಿ ಅಪರಂಪಾರ.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರ೦ಪಾರ ೧೦೭

   'ಹ್ಮ, ಮಡಕೇರಿಗೆ ಈ ಸಂಗತಿ ಗೊತಾಗಬೇಕಾ ?" 
   "ಹೌದು, ನೋಡು, ನೀನೀಗಲೇ ಹೊರಡಬೇಕು. ಮತ್ತೆ ಕೂಡೋಣ."
   ...ಚನ್ನಬಸಪ್ಪ ನಸುಕಿನಲ್ಲೆದು ಕಾವೇರಿನದಿಯತ್ತ ನಡೆದ. ಆ ಇಬ್ಬರು ಜಂಗಮರು 
ಎಲ್ಲಾದರೂ ಮಲಗಿರುವರೇನೋ ಎಂದು ದಂಡೆಯಗುಂಟ ಓಡಾಡಿದ. ಕಣ್ಣಿಗೆ ಬೀಳ 
ದಿರಲು, 'ಕೈಕೊಟ್ಟರು' ಎಂದುಕೊಂಡ. ರೆಸಿಡೆಂಟನಿಗೆ ಹೇಳಬೇಕು, ಸೈನಿಕರನ್ನು ನಾಲೂ
ದಿಕ್ಕಿಗೆ ಅಟ್ಟಬೇಕು-ಎನಿಸಿತು. 'ನಿನ್ನೆ ರಾತ್ರೆಯೇ ಯಾಕೆ ತಿಳಿಸಲಿಲ್ಲ? ನೀನು 
ನಾಲಾಯಕು' ಎಂದು ಆತ ಬಯ್ದರೆ? ಅದನ್ನು ಯೋಚಿಸಿ ಚನ್ನಬಸಪ್ಪ ಬೆವರಿದ.
ತೆಪ್ಪಗೆ, ಬಂದ ದಾರಿ ಹಿಡಿದು ತನ್ನ ಬಿಡಾರಕ್ಕೆ ನಡೆದ.
   ಎಚ್ಚರಗೊಂಡು ಗಂಡನನ್ನು ಕಾಣದೆ, ತನ್ನಲ್ಲೆ, ತರ್ಕಿಸಿದ್ದ ದೇಮಾಜಿ ಕೇಳಿದಳು : 
   "ಸೋಮಿಗಳನ್ನು ಕರಕೊಂಡು ಬರೋಕೆ ಓಗಿದ್ದಾ?" 
   "ಹೂಂ. ಸಿಕಲಿಲ್ಲ" ಎಂದ ಚನ್ನಬಸಪ್ಪ.
                          ೩೪
   ಕರುಣಾಕರ ಮೆನೊನ್ ಕೈಸೆರೆ ಹಿಡಿಯಲ್ಪಟ್ಟ ಬಳಿಕ ದಿವಾನ ಬೋಪಣ್ಣ ರಹಸ್ಯ
ಕಾರಾಚರಣೆಯಲ್ಲಿ ನಿರತನಾದ. ವಿವಿಧ ನಾಡುಗಳಲ್ಲಿ ತನ್ನ ವಿಶ್ವಾಸಕ್ಕೆ ಪಾತ್ರರಾಗಿದ್ದ 
ಕೆಲ ತಕ್ಕರೆಡೆಗೆ ನಂಬುಗೆಯ ಬಂಟರನ್ನು ಕಳುಹಿಸಿದ. ಕೆಲ ಕಾರಕಾರರೆದುರಿನಲ್ಲಿ ದ್ರೋಹದ 
ಪುಂಗಿಯನೂದಿದ. ರಾಜಧಾನಿಯ ಪ್ರಮುಖಿ ವರ್ತಕರಿಬ್ಬರು ತನ್ನ ಸಂಚಿನಲ್ಲಿ ಭಾಗಿಯಾಗು 
ವಂತೆ ಮಾಡಿದ.
   ಹಿಂದಿನ ದಿವಾನ ಪೊನ್ನಪ್ಪನ ಪೂರ್ಣ ಬೆಂಬಲ ಅವನಿಗಿತ್ತು. ಲಕ್ಷ್ಮಿನಾರಾಯಣ 
ನೊಬ್ಬನೇ ವಿಮನಸ್ಕನಾಗಿದ್ದ.
   ಯುದ್ಧ ವೇರ್ಪಟ್ಟು ಇಂಗ್ಲಿಷರ ದಂಡು ಬಂದಾಗ ಪ್ರತಿಭಟನೆಯನ್ನು ಕುಂಠಿತಗೊಳಿಸಿ
ಶರಣಾಗತಿಯನ್ನು ಆಗಮಾಡುವುದು ಬೋಪಣ್ಣನ ಹಂಚಿಕೆಯಾಗಿತ್ತು.
...ಶ್ರೀರಂಗಪಟ್ಟಣದಿಂದ ಹೊರಟ ಸಿದ್ಧಲಿಂಗ ಒಂದಿಷ್ಟು ದೂರ ನಡೆದ. ಇದು
ವಾಯುವೇಗವೂ ಆಗಲಿಲ್ಲ, ಶರವೇಗವೂ ಆಗಲಿಲ್ಲ–ಎಂದು ಚಿಂತಿಸಿದ. ರಾಜಧಾನಿಗೆ 
ಹೊರಟಿದ್ದ ಹೇರುಬಂಡಿಯಲ್ಲಿ ಮತ್ತೆ ಒಂದಷ್ಟು ದೂರ ಪ್ರಯಾಣ ಬೆಳೆಸಿದ. ಇದಕ್ಕ 
ನಿದ್ದರೂ ಕುದುರೆ ರಾವುತರೇ ಸರಿ ಎಂದು ಗೊಣಗಿದ ದಾರಿ. ಕವಲೊಡೆಯುವಲ್ಲಿ ಇಳಿದು 
ಹೊಸಳ್ಳಿಗೆ ಸಾಗಿದ.
   ಮಲ್ಲಪ್ಪಗೌಡರನ್ನು ತಾನು ಕಾಣಬೇಕೆಂದು ಸಿದ್ದಲಿಂಗನಿಗೆ ಹೊಳೆದುದು ಆತ ಹೇರು
ಬಂಡಿಯಲ್ಲಿದ್ದಾಗ. ಮಲ್ಲಪ್ಪನನ್ನು ಜತೆಯಲ್ಲಿ ಕರೆದೊಯ್ದರೆ ಮಡಕೇರಿಯಲ್ಲಿ ಕೆಲಸ
ಸುಲಭಾವಾಗುತ್ತದೆ ಎ೦ದು ಅವನ ಎಣಕೆ.
  ಹದಿಮೂರು ವರ್ಷಗಳಿಗೂ ಮೇಲಾಗಿತು ಆ ಇಬ್ಬರು ಪರಸ್ಪರರನ್ನು ಕಂಡು.
ಆದರೂ ಸುಲಭವಾಗಿ ಸಿದ್ದಲಿಂಗನ ಗುರುತು ಹಿಡಿದ, ಮಲ್ಲಪ್ಪ.
  "ಅಯ್ಯನವರು ರವಷ್ಟೂ ಬದಲಾಗಿಲ್ಲ."
  "ಯಾಕಾದೇನು? ನನಗೇನು ಮುಪ್ಪೆ, ಸಾವೆ?"

ಇಸ್ಕಾಂತಿ ತಗೊಳ್ಳಿ.'