ಪುಟ:ಸ್ವಾಮಿ ಅಪರಂಪಾರ.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಆಪರಂಪಾರ ೧೦೯

   "ಹ ಮಹಾರಾಜ. ಸ್ವಾಮಿ ಅಪರಂಪಾರರ ಆದೇಶದಂತೆ ಇಲ್ಲಿಗೆ ಬಂದೆವು."
   ಅರಸ ವಿಸ್ಮಿತನಾದ. ಮೂರು ವರ್ಷಗಳಿಗೆ ಹಿಂದೆ ಸುಳಿಗಾಳಿಯಂತೆ ಬೀಸಿ ಹೋದ. 
ಅಪರಂಪಾರನ ಪ್ರಸ್ತಾಪ ಇಂತಹ ಹೊತ್ತಿನಲ್ಲಿ ಬರುವುದೆಂದು ಆತ ನಿರೀಕ್ಷಿಸಿರಲಿಲ್ಲ.
   ಚಳಿಗಾಲ ಕಳೆದೊಡನೆಯೇ ಆಂಗ್ಲರ ದಂಡಯಾತ್ರೆ...
   "ಇದನ್ನ ಸ್ವಾಮಿಯವರೆಲ್ಲಿ ಕೇಳಿದರು? ಹ್ಯಾಗೆ ತಿಳಿದರು?"
   "ಆ ವಿವರದ ಬಗ್ಗೆ ನಾನು ಆಜ್ಞಪ್ತನಾಗಿಲ್ಲ, ಮಹಾರಾಜ."
   "ಒಳ್ಳೇದು. ಈ ರಾಜ್ಯದ ಹಿತಚಿಂತನೆ ಸ್ವಾಮಿಯವರು ಮಾಡುತಿದಾರಲ್ಲಾ–ನಾವು
ಧನ್ಯರು."
   ...ಸಿದ್ಧಲಿಂಗ ಆ ರಾತ್ರೆ ಶಂಕರಪ್ಪನಲ್ಲಿ ತಂಗಿದ.
   ವೀರಪ್ಪಾಜಿಯೇ ಅಪರಂಪಾರ ಎಂಬುದನ್ನು ಕಡೆಗೊಮ್ಮೆ ಖಚಿತವಾಗಿ ತಿಳಿದ ಶಂಕರಪ್ಪ 
ಈಗ ಪರಮ ಸುಖಿ.
   "ಬಿಸಿನೀರು ತರ್ರಿ. ಅದರಿಂದ ಪಾದಪೂಜೆ ಮಾಡಿದರೆ ಶಿವನಿಗೆ ಈಗ ಹಿತವಾಗತದೆ" 
ಎಂದು ಜಂಗಮ.
   ಆ ಸೇವೆಯನ್ನು ಶಂಕರಪ್ಪ ಸಂತೋಷದಿಂದ ಮಾಡಿದ.
   ವಿರಕ್ತನ ವೇಷದಲ್ಲಿ ಗೂಢಚಾರನೊಬ್ಬ ಮೈಸೂರು ರಾಜ್ಯದಿಂದ ಬಂದಿರುವನೆಂಬ
ವಾರ್ತೆ ಬೋಪಣ್ಣನಿಗೆ ಮುಟ್ಟಿತು.
   ಅದರ ಬೆನ್ನಲ್ಲೆ, ಆತ ಗೂಢಚಾರನಲ್ಲ, ನಿಜವಾದ ವಿರಕ್ತನೇ ಎಂಬ ಸ್ಪಷ್ಟೀಕರಣವೂ ಬಂತು.
   ಬೋಪಣ್ಣನೆಂದ:
   "ಈ ಜಂಗಮರು ಸೊಕ್ಕಿದರು. ಅವನೆಲ್ಲೇ ಇರಲಿ, ಯಾರಿಗೂ ಸಂಶಯ ಬರದ ಹಾಗೆ ಹಿಡಿದು ತನ್ನಿ."
   ಆದರೆ, ಬೋಪಣ್ಣನ ಸೇವಕರ ಕೈಗೆ ಸಿದ್ಧಲಿಂಗ ಸಿಗಲಿಲ್ಲ.
                                                          ೩೫
   ಒಂದು ವಾರದ ಅವಧಿಯೊಳಗಾಗಿ ಕರುಣಾಕರ ಮೆನೊನನ್ನು ಬಿಟ್ಟುಕೊಡಬೇಕು
ಇಲ್ಲದೆ ಹೋದರೆ ಪ್ರತಿಫಲ ಅನುಭವಿಸಲು ಸಿದ್ಧನಾಗಬೇಕು.
   -ಇದು ಕಾಸ್ಸಾಮೇಜರ್ ಚಿಕವೀರರಾಜೇಂದ್ರನಿಗೆ ಕಳುಹಿದ ಅಂತಿಮ ನಿರೂಪ.
   ಅರಸ ಅದನ್ನು ತುಚ್ಛೀಕಾರದಿಂದ ಕಂಡ. ಉತ್ತರಿಸುವ ಗೊಡವೆಗೆ ಹೋಗಲಿಲ್ಲ.
   ೧೮೩೪ ಮಾರ್ಚ್ ೧೫ರ ಅಂಕಿತವಿದ್ದ ಘೋಷಣೆಯೊಂದನ್ನು ಮದರಾಸಿನ ಗವರ್ನರ್
ಹೊರಡಿಸಿದ:
   "ಚಿಕವೀರರಾಜ ತನ್ನ ಹೇಯ ಕೃತ್ಯಗಳಿಂದ ಕಂಪನಿ ಸರಕಾರದ ಸ್ನೇಹವನ್ನೂ ರಕ್ಷಣೆ
ಯನ್ನೂ ಕಳೆದುಕೊಂಡಿದ್ದಾನೆ. ಬ್ರಿಟಿಷರ ಸೈನ್ಯವು ಕೊಡಗಿನ ಮೇಲೆ ದಂಡಯಾತ್ರೆ
ಕೈಗೊಳ್ಳುವುದು. ಶಾಂತಿಯಿಂದ ನಡೆದುಕೊಳ್ಳುವವರ ಹಾಗೂ ಬ್ರಿಟಿಷ್ ಪಡೆಗಳಿಗೆ
ಸಹಾಯಮಾಡುವವರ ಆಸ್ತಿಪಾಸ್ತಿಗಳನ್ನು  ಕಾಪಾಡಲಾಗುವುದು. ವೈರಿಯಾದ ರಾಜನಿಗೆ
ಸಹಾಯ ಮಾಡುವವರನ್ನು ದ್ರೋಹಿಗಳೆಂದು ಬಗೆಯಲಾಗುವುದು, ಹಾಗೂ ಅವರಿಗೆ