ಪುಟ:ಸ್ವಾಮಿ ಅಪರಂಪಾರ.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರ೦ಪಾರ ತಕ್ಕ ದಂಡನೆ ಕೊಡಲಾಗುವುದು. ಚಿತ್ರದುರ್ಗ, ರಾಯದುರ್ಗ, ಮೈಸೂರು, ಬಳ್ಳಾರಿ, ಮಲಬಾರ್. ಕನ್ನಡ ಜಿಲ್ಲೆ ಮತ್ತಿತರ ಕೊಡಗಿನ ಸುತ್ತಮುತ್ತಲ ನಮ್ಮ ಪ್ರಜೆಗಳ ಸಂಬಂಧಿಕರು ಆ ರಾಜನಲ್ಲಿ ಊಳಿಗಕ್ಕಿದಾರೆ. ಅವರಿಗೆ ತಿಳಿಯಹೇಳುವುದಕ್ಕೋಸ್ಕರ ಹಾಗೂ ಅವರ ಹಿತರಕ್ಷಣೆಯ ದೃಷ್ಟಿಯಿಂದ ಮೇಲ್ಕನ ಪ್ರದೇಶಗಳಲ್ಲು. ಈ ಜಾಹಿರುನಾಮೆಯನ್ನು ಪ್ರಕಟಗೊಳಿಸಲಾಗುತ್ತಿದೆ."

     ಇದಕ್ಕೊಂದು ಪ್ರತುತ್ತರವನ್ನು ಚಿಕವೀರರಾಜೇಂದ್ರ ರಾಜ್ಯದಾದ್ಯಂತ ಡಂಗುರ ಹೊಡೆಸಿದ :
  "ತೊತ್ತಿನ ಮಕ್ಕಳಾದ ಇಂಗ್ರೇಜಿಯವರು ಹೊರಡಿಸಿರುವ ಜಾಹೀರುನಾಮೆಯೊಂದು ಘನತೆವೆತ್ತ ಹಾಲೇರಿ ಸಂಸ್ಥಾನದ ಮಹಾಸ್ವಾಮಿಯವರ ಗಮನಕ್ಕೆ ಬಂದಿದೆ. ಅವರು ಮಹಾದೇವನನ್ನು ಮರೆತು, ದುರಹಂಕಾರದಿಂದ ಮನಸ್ಸಿಗೆ ತೋಚಿದ್ದನ್ನೆಲಾ ಕಾಗದದ ಮೇಲೆ ಬರೆದು, ಹಾಲೇರಿ ಸಂಸ್ಥಾನದ ನಿವಾಸಿಗಳ ತಿಳಿವಳಿಕೆಗಾಗಿ ಗಡಿಯಲ್ಲಿ ಅಂಟಿಸಿದ್ದಾರೆ. ದುಷ್ಟರಾದ ಇಂಗ್ರೇಜಿಯವರ ಆ ಜಾಹೀರುನಾಮೆಯ ವಿವರ ಮಹಾದೇವನ ಕಿಂಕರರಾದ ನಾವು ಕಣ್ಣಿನಿಂದ ನೋಡುವುದಕ್ಕಾಗಲೀ ಕಿವಿಯಿ೦ದ ಕೆಳುವುದಕ್ಕಾಗಲೀ ಅರ್ಹವಾಗಿಲ್ಲ. ಅದನ್ನು ಬರೆದಂಥಾ ಮನುಷ್ಯನನ್ನು ಹಿಡಿದು ತಲೆ ಕಡಿದು ನಾವು ಶಾಸ್ತಿ ಮಾಡೇವು.
ಸಂಶಯವಿಲ್ಲಾ,
"ಕಾಫರರಾದ ಪರಂಗಿಯರು ಹಿಂದೂಸ್ಥಾನವನ್ನು ನಾಶಮಾಡುತ್ತಿದ್ದಾರೆ. ಈಗ ಅವರಿಗೆ ಸಾವು ಸನ್ನಿಹಿತವಾಗಿರುವಾಗ ಯಾವ ಔಷಧಿಯಿಂದೇನು ಪ್ರಯೋಜನ ? ದೇವರು ನಮ್ಮ ಬೆ೦ಬಲಕ್ಕಿದ್ದಾನೆ..
        "ನಮ್ಮ ಕೂಡೆ ಯುದ್ಧ ನಡೆಸಲು ತೀರ್ಮಾನಿಸಿರುವ ಇಂಗ್ರೇಜಿಯವರು. ಯಾವಾಗಲೂ ತಮ್ಮ ಸೈನ್ಯದ ಮುಂದುಗಡೆ ಹಿಂದೂಸ್ಥಾನದ ಕೆಲವು ಕರಿಯ ಜನರನ್ನು ಕಳಿಸುತಾರೆ, ಲಡಾಯಿಯಲ್ಲಿ ಈ ಕರಿ ಜನರು ಮೊದಲು ಸಾಯಬೇಕೆಂಬುದೇ ಅವರ ಹಂಚಿಕೆಯಾಗಿರುತ್ತದೆ. ಆ ಧೂರ್ತರ ವಿರುದ್ಧ ಶಸಾಸ್ತ್ತು ಹಿಡಿದು ಹೋರಾಡಲು ನಾವು ದ್ರುಢಸ೦ಕಲ್ಪ ಮಾಡಿದ್ದೇವೆ. ಯಾರೇ ಆದರೂ ನಮ್ಮ ಬೆಂಬಲಕ್ಕೆ ಬರದೆ ತಟಸ್ಥವಾಗಿ ಉಳಿದರೆ, ಅದು ದೈವದ್ರೋಹವಾಗುವುದು. ಮುಂದೆ ಇಂಗ್ರೇಜಿಯವರ ಕೈಯಲ್ಲಿ ಅವರು ನಾಶವಾಗುವರು. ಈಗ ನಮ್ಮ ವೈರಿಗಳು ಆಮಿಷ ತೋರಿಸುತಾರೆ, ಒಂದು ಸಲ್ಲಬೇಕಾ ದಲ್ಲಿ ಹತು ಕೊಡುತ್ತೇವೆನ್ನುತಾರೆ. ಅವರ ಕಾರ್ಯಸಾಧನೆಯಾದ ಮೇಲೆ ಮಾತ್ರ ಪ್ರಜೆ ಗಳ ಪಾಡು ಕತ್ತೇ ಪಾಡಾಗುತ್ತದೆ. ಮರುಳು ಮಾತಿನ ಬಲೆಗೆ ಯಾರೂ ಬೀಳದಿರಲಿ ! ಸತ್ಯಮೇವ ಜಯತೇ, ಸತ್ಯಕ್ಕೆ ಜಯವಾಗುವುದಲ್ಲದೆ, ಅಸತ್ಯ ಅನಾಯಗಳಿಗಲ್ಲ! ಮಹಾ ದೇವನಿಗೆ ಮೆಚ್ಚುಗೆಯಾಗುವಂತೆ ಸ್ವಾತಂತ್ರ, ರಕ್ಷಣೆಗಾಗಿ ನಮ್ಮಪ್ರಜೆಗಳೆಲ್ಲ ಹೋರಾಡಲಿ!"
   ರಣನಿನಾದವಾಗಿತ್ತು, ಚಿಕವೀರರಾಜೇಂದ್ರನ ಪ್ರತಿಘೋಷಣೆ.
                               ೩೬
ಬೋಪಣ್ಣ ಭೇಟಿಗೆ ಬಂದಾಗ ಚಿಕವೀರರಾಜೇಂದ್ರನಿಗೆ ಆಶ್ಚರ್ಯವಾಯಿತು.
"ನಾವಾಗಿ ಕರೆಸದೆ ಬರುವುದಿಲ್ಲ ಎಂದಿದ್ದಿರಿ, ಅಲ್ಲವೆ ದಿವಾನರೆ?"
ಈ ಬೋಪಣ್ಣ ಹೊಸಬ. ಔದ್ಧತ್ಯದ ಸೋಂಕಿರಲಿಲ್ಲ, ಹೆಜ್ಜೆ ಹೆಜ್ಜೆಗೂ ವಿನಯ.