ಪುಟ:ಸ್ವಾಮಿ ಅಪರಂಪಾರ.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರ೦ಪಾರ

 "ಮಹಾಸ್ವಾಮಿಯವರು ಅದನ್ನು ಮರೆತುಬಿಡಬೇಕು. ಒಂದು ವಿಷಘಳಿಗೆಯಲ್ಲಿ ಏನೋ ಹಾಗಂದೆ. ರಾಜ್ಯಕ್ಕೆ ಆಪತ್ತೊದಗಿದಾಗ ಕೈಕಟ್ಟಿ ಕೂರುತಾರೆಯೇ? ಪಟ್ಟಾಭೀಷೇಕ ವಾದ ಹೊಸತಿನಲ್ಲಿ ನಮ್ಮದೊಂದು ಗಾದೆ ನೆನಪು ಮಾಡಿಕೊಟ್ಟಿದ್ದಿರಿ. ಆಣ್ ಪೊತ್ತಿತ್ ಚಾವುಂಡು..." -
 ತನ್ನ ಭುಜಬಲದಲ್ಲೂ ಕೊಡವರ ಹಾಗೂ ಇತರ ಸೈನಿಕರ ನಿಷ್ಟೆಯಲ್ಲೂ ಅಚಲ ವಿಶ್ವಾಸವಿದ್ದ ಚಿಕವೀರರಾಜೇಂದ್ರ, ಬೋಪಣ್ಣನ ಬದಲಾದ ನಡವಳಿಕೆಗೆ ಕಾರಣ ಹುಡುಕು ವುದಕ್ಕಾಗಲೀ ಅರ್ಥಕಲ್ಪಿಸುವುದಕ್ಕಾಗಲೀ ಸಿದ್ಧನಿರಲಿಲ್ಲ, ಆಪತ್ತಿನ ನೆರಳು ಕಂಡಾಗ ಎಲ್ಲ ಭಿನಾಭಿಪ್ರಾಯಗಳನ್ನೂ ಮರೆತು ಜನ ಒಂದಾಗುವುದು ಸಹಜವಾಗಿತ್ತು. ಹೆಚ್ಚೆಂದರೆ ಬೋಪಣ್ಣ ಸ್ವತಃ ಯುದ್ಧರಂಗಕ್ಕೆ ಇಳಿಯದೆ ಇರಬಹುದು–ಎಂದು ಅರಸ ಭಾವಿಸಿದ್ದ. ಆತನಲ್ಲೂ ರಾಜಭಕ್ತಿ ಈಗ ಜಾಗೃತವಾದುದನ್ನು ಕಂಡು ಅವನು ಸಂತುಷ್ಟನಾದ.
 ಆದರೂ ತನ್ನ ಆತ್ಮ ಸಮಾಧಾನಕ್ಕಾಗಿ ಸಣ್ಣದೊಂದು ಪರೀಕ್ಷೆ ಇರಲೆಂದು, ಅವನೆಂದ:        "ಹೀಗೆ ನೀವು ಭಾವಿಸೋದು ವೀರೋಚಿತವಾಗಿದೆ. ಹಿಂದೆಯೇ ನಾವು ಎಚ್ಚರಿಕೆ ಕೊಟ್ಟೆವು. ನೀವು, ಇದೆಲ್ಲಾ ತಪಗ್ರಹಿಕೆಯಿಂದ ಆಗಿದೆ: ಸಂಧಾನದಿಂದ ಬಗೆಹರೀತದೆ –ಎಂದಿದ್ದಿರಿ. ಅದು ನಿಜವಾಗಲಿಲ್ಲ."
  "ನನ್ನ ಎಣಿಕೆ ತಪ್ಪಾಯಿತು, ಮಹಾಸ್ವಾಮಿಗಳೆ."
  "ಮೆನೊನ್ ಗೂಢಚಾರನಾಗಿ ಬಂದಿದ್ದ, ಬಿಟ್ಟಿದ್ದರೆ, ಎಸ್ತೊ ವಿಷಯ ವೈರಿಗೆ ಗೊತ್ತಾಗತಿತ್ತು."

"ಅದೂ ನಿಜವೆ." -

   "ಹಳೇ ಮಾತು ಇನ್ನು ಬಿಡುವಾ.. ಈಗ ಏನೇನಾಗಬೇಕು? ನಿಮ್ಮ ಸಲಹೆ ಕೊಡಿ ರ೦ತೆ."

“ರಸದು ದಾಸ್ತ್ತನು ಮಾಡಬೇಕು. ಜಮ್ಮ ಕೊಡವರಿಗೆಲ್ಲ ಹೊರಟುಬರುವ ಹಾಗೆ ನಿರೂಪ ಕಳಿಸಬೇಕು. ಎಲ್ಲ ತಕ್ಕರಿಗೂ ಕಾರ್ಯಕಾರರಿಗೂ ಆಜ್ಞೆ ಕೊಡಬೇಕು." "ಅಷ್ಟನ್ನು ಈಗಲೇ ಮಾಡಿದೇವೆ."

“ಗಡಿಪಹರೆ ಬಲಪದಡಿಸಬೇಕು." 
"ಅದಕ್ಕೆ ನಮ್ಮ ಕಾರ್ಯಕಾರರಿದ್ದಾರೆ. ಚೆಟ್ಟಿ ಮತ್ತು ಕರ್ತು ಅಮರಸುಳ್ಯ ಮಾಗಣೆಯ ರಕ್ಷಣೆ ಮಾಡತಾರೆ. ಉತ್ತಯ್ಯ ಪೆರಿಯಾಪಟ್ಟ ಗಡಿಯಲ್ಲಿರತಾನೆ. ಸುಲಕೊತ್ತು ಗಡಿಯಲ್ಲಿ ಕಾರ್ಯಕಾರ ಐಯಣ್ಣನನು ಇಡತೇವೆ ಹೆಗ್ಗಳ ಘಟ್ಟವನು ಕಳಿ೦ಗಯ್ಯ ಕಾಯುತ್ತಾನೆ.ಶನಿವಾರಸಂತೆ ಗಡಿಯಲ್ಲಿ ಮಾದಂಟ ಅಪ್ಪಚ್ಚು ಇರತಾನೆ...ಏನಂತೀರಿ?"
 ಬೋಪಣ್ಣ ಮೈಯೆಲ್ಲ ಕಿವಿಯಾಗಿ ಕೇಳಿದ. ಅಮರಸುಳ್ಳ ಮುಖ್ಯವಾಗಿರಲಿಲ್ಲ. ಉಳಿದದ್ದರಲ್ಲಿ ಐಯಣ್ಣನದೊಂದೇ ಅವನಿಗೆ ಚಿಂತೆ, ಅಪ್ಪಚ್ಚು, ಕಳಿಂಗಯ್ಯ, ಉತ್ತಯ್ಯ ರಂತೂ ಅಂತರಂಗದಲ್ಲಿ ಅವನ ಜನವೇ. 
 ಮುಖದ ಮೇಲೆ ಸ್ಥಿರ ಮುಗುಳುನಗೆಯೊಂದನ್ನು ಮೂಡಿಸಿ ಬೋಪಣ್ಣನೆಂದ:
"ಯಾವ ಶೂರ ಸೇನಾನಿಯೂ ಇದಕ್ಕಿಂತ ಉತ್ತಮವಾದ ಏರ್ಪಾಟು ಮಾಡಲಾರ, ಮಹಾಸ್ವಾಮಿ."

ಆ ನವುರು ಮಾತಿಗೆ ಚಿಕವೀರರಾಜ ಮಾರುಹೋದ.