ಪುಟ:ಸ್ವಾಮಿ ಅಪರಂಪಾರ.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೧೨ ಸ್ವಾಮಿ ಅಪರ೦ಪಾರ "ಅಬ್ಯಾಸ್ ಅಲಿ ಶಸ್ತ್ರಸಾಮಗ್ರಿಗಳ ಪೂರೈಕೆಯ ಉಸ್ತುವಾರಿ ನೋಡತಾನೆ. ಬಸವ ಸರ್ವಕಾರ್ಯಕಾರನಾಗಿ ನನ್ನ ಬಳಿ ಇರತಾನೆ." "ನನ್ನನ್ನು ಮರೆತಿರಿ!" "ನೀವು ಸಲಹೆಗಾರರಾಗಿ ರಾಜಧಾನಿಯಲ್ಲಿರತೀರಿ. ಲಕ್ಷ್ಮಿನಾರಾಣಪ್ಪನವರಂತೂ ರಣಚಂಡಿಯ ಭಕ್ತರಲ್ಲವಲ್ಲ, ನೀವೂ ನಾನೂ ಪ್ರಸಂಗ ಬಂದಾಗ ಕಣಕ್ಕಿಳಿಯೋವಾ." "ಬೋಪು ಹೋರಾಡಿ ಸತ್ತ ಅಂತ ಜನರ ಬಾಯಿಂದ ಅನ್ನಿಸಿಕೊಳ್ಳತೇನೆ." "ಸಾಯೋದಲ್ಲ–ಗೆಲ್ಲೋದು ಮುಖ್ಯ ಬೋಪಣ್ಣನವರೆ." “ಆ ಬಗ್ಗೆ ಮಹಾಸ್ವಾಮಿಗಳಿಗೆ ಸಂಶಯವೇ ಬೇಡ.” ಮುಂದೇನು ಹೇಳಬೇಕೆoದು ತೋಚದೆ, ಮುಗ್ಧ ಭಾವದಿಂದ, ಬೋಪಣ್ಣ ಕುಳಿತ. "ಕೆಟ್ಟ ಮಾತು ಆಡಬಾರದು ಅಂತ ಸುಮ್ಮನಿದೀರೋ? ಯಾವುದಾದರೊ೦ದು. ರಂಗದಲ್ಲಿ ಸೋಲಾಯಿತು ಅನ್ನಿ. ಅದಕ್ಕೆ ಗೋಳಾಡಬೇಕಾದ್ದಿಲ್ಲ. ನಮ್ಮ ದೊಡ್ಡ ತ೦ದೆ ಯವರ ಕಾಲದಲ್ಲಿ ಏನಾಯಿತು ? ಮಡಕೇರಿಯನ್ನು ಹೈದರ್-ಟೀಪುಗಳು ಹಿಡಿಕೊ೦ಡ ಮೇಲೂ ನಾಲ್ಕುನಾಡು ಅರಮನೆಯಲ್ಲಿದ್ದುಕೊಂಡು ಅವರು ಹೋರಾಟ ಮುಂದುವರಿಸ ಲಿಲ್ಲ? ರಾಜ್ಯ ಆಳಲಿಲ್ಲ?" "ನಾನೂ ಅದನ್ನೇ ಹೇಳೋಣಾಂತಿದ್ದೆ, ಮಹಾರಾಣಿಯವರನ್ನೂ ರಾಜಕುಮಾರಿ ಯವರನ್ನೂ ನಾಲ್ಕುನಾಡು ಅರಮನೆಯಲ್ಲಿ ಮಡಗೋದು ಮೇಲು." "ಆ ವ್ಯವಸ್ಥೆ ನಾವು ಮಾಡಿಯೇ ಮಾಡತೇವೆ ." ಬೋಪಣ್ಣ ಏಳುವ ಸೂಚನೆ ಕಂಡಿತು. "ದಿನಾಗಲೂ ಬೆಳಿಗ್ಗೆ ಬಂದು ಹೋಗುತ್ತಿರಿ. ದಿವಾನರೆ" ಎಂದ ಅರಸ. "ಅಪ್ಪಣೆ." "ರಾಜಕಾರ್ಯನಿಮಿತ್ತ ಮಧ್ಯರಾತ್ರಿಯಾದರೂ ಸರಿ ನಿಮ್ಮನ್ನೆಬ್ಬಿಸಿ ನಾವು ತೊಂದರೆ ಕೊಡಬಹುದು !" "ಮಹಾಸ್ವಾಮಿಯವರು ಪರಿಹಾಸ್ಯ ಮಾಡುತಾರೆ!"

ಚಿಕವೀರರಾಜೇಂದ್ರ ನಗುತ್ತ ಎದ್ದ. ಆಗಲೆ ಎದ್ದು ನಿಂತಿದ್ದ ದಿವಾನನ ಬಳಿ ಸಾರಿ,

ಆತನ ಭುಜಗಳನ್ನು ಹಿಡಿದು. ಭಾವೋದ್ವೇಗದಿಂದ ಅವನೆಂದ: "ಆಗಲಿ. ಬೋಪಣ್ಣ. ಹೋಗಿ ಬನ್ನಿ."

                                 ೨೭  

ಕೊಡಗನ್ನು ನುಗ್ಗಲು ಬಂದುದು ಆರು ಸಾವಿರ ಯೋಧರ ಸುಸಜ್ಜಿತ ಸೇನೆ. ರಾಜ್ಯದ ಮೇಲೆ ಅದು ದಾಳಿ ನಡೆಸಿದ್ದು ಐದು ದಿಕ್ಕುಗಳಿಂದ, ಕರ್ನಲ್ ಲಿಂಡ್ಸೆ ದಾಳಿಕಾರರ ಸರ್ವ ಸೇನಾಪತಿ, ಅವನ ಜತೆಗಾರನಾಗಿ ಬಂದವನು, ಕೊಡಗಿನ ವ್ಯವಹಾರಗಳಿಗಾಗಿ ಗವರ್ನರ್ ಜನರಲನ ರಾಜಕೀಯ ಏಜೆಂಟನೆಂದು ನೇಮಕಗೊಂಡ ಕರ್ನಲ್ ಫ್ರೇಸರ್. ಕೊಡಗಿನಲ್ಲಿ ವೀರ ಯೋಧರಿಗೆ ಅಭಾವವಿರಲಿಲ್ಲ. ಅಲ್ಲಿದ್ದುದೊ೦ದೇ ಕೊರತೆ. ಏಕಮತ್ಯದು. ರಾಜ್ಯದ ಶಕ್ತಿಯನ್ನೆಲ್ಲ ಒಂದುಗೂಡಿಸಿ, ಹೋರಾಡಿ, ಆಂಗ್ಲರನ್ನು ಸೋಲಿಸ ಬಹುದು–ಎಂದು ನಂಬಿದ್ದ ಚಿಕವೀರರಾಜೇಂದ್ರ. ಆದರೆ, ಬೋಪಣ್ಣ-ಪೊನ್ನಪ್ಪರ