ಪುಟ:ಸ್ವಾಮಿ ಅಪರಂಪಾರ.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರ೦ಪಾರ ೧೧೩ ಕಾರಸ್ಥಾನದಿಂದಾಗಿ, ರಾಜ್ಯದ ಅಗಸೆ ಬಾಗಿಲಿನಿಂದ ರಾಜಧಾನಿಯ ದಿಡ್ಡಿ ಬಾಗಿಲಿನವರೆಗೂ ರಕ್ಷಣೆಯ ದುರ್ಗ ಬಿರುಕುಬಿಟ್ಟಿತು. - ಬೋಪಣ್ಣ ಆತ್ಮವಿಸ್ವಾಸದಿಂದ ದಾಳಿಕಾರರಿಗೆ ಸ೦ದೇಶ ಕಳುಹಿದ್ದ:

“ಮುನ್ನುಗ್ಗಿ ಬನ್ನಿ. ನಮ್ಮವರು ಹೋರಾಡುವುದಿಲ್ಲ. ಶರಣಾಗುತ್ತಾರೆ.” 

...ಪೂರ್ವಪಡೆ ಸ್ವತಃ ಲಿಂಡ್ಸೆಯ ನಾಯಕತ್ವದಲ್ಲಿ ಏಪ್ರಿಲ್ ೨ರಂದು ಬೆಟ್ಟದಪುರ ದಿಂದ ಹೊರಟು ಸುಲಕೊತ್ತಿಗೆ ಬಂದಿತು. ಕಾವೇರಿಯ ದಂಡೆಯನ್ನು ತಲಪಿತು. ಅದರ ಈಚೆಯ ದಡದಲ್ಲಿತು ಹೆಬ್ಬಾಲೆ. ಆ ದಡದುದ್ದಕ್ಕೂ ಐಯಣ್ಣನ ನೇತೃತ್ವದಲ್ಲಿ ಕೊಡಗಿನ ಸೈನಿಕರು ಮಣ್ಣಿನ ಗೋಡೆಯನ್ನೇರಿಸಿದ್ದರು. ಆ ಗೋಡೆಯಲ್ಲಿ ಗುಂಡು ಹಾರಿಸುವುದ ಕ್ಕೋಸ್ಕರ ರಂಧ್ರಗಳಿದ್ದುವು. ಗೋಡೆಯ ಮರೆಯಲ್ಲಿ ಬಂದೂಕು, ಭರ್ಚಿ, ಬಿಲ್ಲು ಬಾಣ ಗಳನ್ನು ಧರಿಸಿದ್ದ ಯೋಧರಿದ್ದರು.

  ಲಿಂಡ್ಸೆ ಆಕಾಶಕ್ಕೊಂದು ಗುಂಡು ಹಾರಿಸಿ, 'ನಾವು ಬಂದಿದೇವೆ' ಎಂದು ಸಾರಿದ. ಐಯಣ್ಣ ತಾನೊ೦ದು ಗುಂಡು ಹಾರಿಸಿ, 'ನಾವು ಸಿದ್ಧರಿದ್ದೇವೆ' ಎ೦ದ.
  ಬೋಪಣ್ಣ ಹೇಳಿಕಳುಹಿದ್ದನಲ್ಲ, ಕದನವಾಗದು ಎಂದು ?
ತಮ್ಮ ದಂಡೆಯ ಮೇಲೆ ಆಂಗ್ಲರು ಬಿಳಿಯ ಬಾವುಟವನ್ನೇರಿಸಿದರು. ಒಬ್ಬ ಸೈನಿಕ ಅದನ್ನೆತ್ತಿಕೊಂಡು ನದಿಯನ್ನು ದಾಟಲೆತ್ನಿಸಿದ.ಸುಂಯ್ ಎಂದು ಒಂದು ಗುಂಡು ಬಾವುಟದಲ್ಲಿ ತೂತು ಕೊರೆಯಿತು.

“ಫೈರ್!"

 ತೋಪುಗಳು ಮಾತನಾಡಿದುವು, ಸಿಡಿಗುಂಡುಗಳು ಸೀಮೋಲ್ಲಂಘನ ಮಾಡಿದುವು. ಹೂಂಕಾರ ಚೀತ್ಕಾರಗಳು ಶ್ರುತಿ ಹಿಡಿದುವು. ಮದ್ದುಗುಂಡುಗಳು ಕೆಡವಿದ ಗೋಡೆಯ ಮಣ್ಣು, ಕಾವೇರಿಯ ನೀರನ್ನು ಕಲಕಿತು. ನದಿ ದಾಟತೊಡಗಿದ್ದ ಆಂಗ್ಲ ಪಡೆಯ ಸೈನಿಕರ ರಕ್ತ ಮಲಿನ ನೀರಿನಲ್ಲಿ ಬೆರೆಯಿತು. -
 ಕೊಡಗಿನ ಸೈನಿಕರು ರಾಮಸ್ವಾಮಿ ಕಣಿವೆಯತ್ತ ಹಿಂದಕ್ಕೆ ಸರಿದರು.
  ಮಾರನೆಯ ದಿನ ರಾಮಸ್ವಾಮಿ ದೇವಾಲಯದ ಆಯಕಟ್ಟಿನ ಸ್ಥಳದಿಂದ ಕೊಡಗು ದಳ ಪ್ರತಿಭಟಿಸಿತು. ಆದರೆ, ದೇಗುಲ ಪುಡಿಯಾದೀತೆಂಬ ಭಯವೆ ನುಗುತ್ತಿದ್ದವರಿಗೆ ?
  ಮುಂದೆ ಹಾರಂಗಿ ಇಂಗ್ಲಿಷರಿಗೆ ತಡೆಬಂಡೆಯಾಯಿತು. ಸಾವು ನೋವುಗಳನ್ನು ಗಮನಿಸದೆ ಅಲ್ಲಿಂದಲೂ ಕೊಡಗು ಸೈನಿಕರನ್ನು ಹಿಂದಕ್ಕೆ ಅಟ್ಟಲು ಬಿಳಿಯರ ದಂಡು ಪದೇ ಪದೇ ಯತ್ನಿಸಿತು. 

....ಪೂರ್ವಪಡೆಯ ಇನ್ನೊಂದು ಶಾಖೆ ಕರ್ನಲ್ ಸುಆರ್ಟ್ನನ ಹಿರಿತನದಲ್ಲಿ ದಾಳಿಯ ದಿನ ಪೆರಿಯಾಪಟ್ಟಣದಿಂದ ಹೊರಟುಬಂತು. ಕಾವೇರಿಯ ಈಚೆಯ ದಡದಲ್ಲಿ, ರಂಗಸಮುದ್ರದಲ್ಲಿ, ಕೊಡಗು ಸೈನ್ಯದ ತುಕ್ಕಡಿ ಇತ್ತು. ಅದರ ನಾಯಕ ಉತ್ತಯ್ಯ. ಬೋಪಣ್ಣನ ಪ್ರಭಾವಕ್ಕೊಳಗಾಗಿ ಆತನ ಮನಸ್ಸು ಕಲುಷಿತವಾಗಿತ್ತು, ಅವನು ನೀಡಿದ್ದು ನಾಮಮಾತ್ರ ಪ್ರತಿಭಟನೆ. ಆಚೆಯ ದಡದಿಂದ ತೋಪುಗಳು ಗರ್ಜಿಸತೊಡಗಿದಂತೆ ಉತ್ತಯ್ಯ ತನ್ನ ತುಕ್ಕಡಿಯೊಡನೆ ಒಳಪ್ರದೇಶಕ್ಕೆ ನಿರ್ಗಮಿಸಿದ. ಸುಅರ್ಟ್ ಕೊಂಡಗೇರಿಯಲ್ಲಿ ಕಾವೇರಿ ನದಿಯನ್ನುದಾಟಿ ವೀರರಾಜಪೇಟೆಯವರೆಗೂ ಯಾವ ತಡೆಯೂ ಇಲ್ಲದೆ ಮುಂದುವರಿದು ಬೀಡುಬಿಟ್ಟ, ಅಲ್ಲಿ ಪಶ್ಚಿಮದಿಂದ ಬರುವ 8