ಪುಟ:ಸ್ವಾಮಿ ಅಪರಂಪಾರ.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೧೪ ಸ್ವಾಮಿ ಅಪರ೦ಪಾರ

ದ೦ಡಿನೊಡನೆ ಸಹಕರಿಸಿ, ಸಿದ್ದಾಪುರದ ಮಾರ್ಗವಾಗಿ ಮೈಸೂರಿನೊಡನೆ ಸ೦ಪರ್ಕ ಬೆಳೆಸಲು ಅವನು ಆಜ್ಞಪ್ತನಾಗಿದ್ದ.

....ಉತ್ತರದ ಪಡೆಗೆ ಮುಖ್ಯಸ್ಥನಾಗಿದ್ದವನು ಕರ್ನಲ್ ವಾಫ್, ಏಪ್ರಿಲ್ ಮೊದಲ ದಿನವೇ ಹೊಸಕೋಟೆಯಿಂದ ಹೊರಟು, ಅಲ್ಲಿ ಕೊಡಗಿನ ಎಲ್ಲೆಯಾದ ಹೇಮಾವತಿ ಯನ್ನು ದಾಟಿ ಕೊಡ್ಲಿಪೇಟೆಯವರೆಗೂ ಯಾವ ಪ್ರತಿಭಟನೆಯೂ ಇಲ್ಲದೆ ಆ ತುಕ್ಕಡಿ ಮು೦ದುವರಿಯಿತು.

ಕೊಡ್ಲಿಪೇಟೆಯಲ್ಲಿ ನಡೆದುದು ಪ್ರತಿಭಟನೆಯ ನಾಟಕ ಮಾತ್ರ, ಮುಂದೆ ಮುದ್ರ ವಳ್ಳಿಯಲ್ಲರೂ ಅಷ್ಟೆ, ಇನ್ನೇನು, ಹಾರಂಗಿಯಲ್ಲಿ ಪೂರ್ವಪಡೆಯನ್ನು ವಾಫ್ ಸೇರಬೇಕು ಎನ್ನುವಷ್ಟರಲ್ಲೇ ಅನಿರೀಕ್ಷಿತವಾಗಿ ಕಾಳಗ ಸಂಭವಿಸಿತು. ಮಾದಂಟ ಅಪ್ಪಚ್ಚು ಉದ್ದೇಶ ಪೂರ್ವಕವಾಗಿಯೇ ಹಿಮ್ಮೆಟ್ಟುತ್ತಿದ್ದಾನೆ ಎಂಬ ಶಂಕೆ ಅನೇಕ ಚಾವಡಿಕಾರರಲ್ಲಿ ಮೂಡಿ. ಕೊಡಗಿನ ಪಡೆಯಲ್ಲಿ ಗದ್ದಲವಾಯಿತು. ತನ್ನ ಮಾನರಕ್ಷಣೆಗಾಗಿ ಅಪ್ಪಚ್ಚು ಹೋರಾಡಲು ನಿರ್ಧರಿಸಿದ.
 ಆಗ ನಡೆದ ಆರು ಘಳಿಗೆಗಳ ನಿಕರದ ಕಾಳಗ ಕೊಡಗಿನ ಸೈನಿಕರೆಂತಹ ವೀರರೆಂಬು ದನ್ನು ತೋರಿಸಿಕೊಟ್ಟಿತು. ಕರ್ನಲ್ ಮಿಲ್ ಎಂಬಾತ ಕೊಡವನೊಬ್ಬನ ಗುಂಡಿಗೆ ಆಹುತಿ ಯಾದ. ರಾಬರ್ಟ್ ಸನ್,ಬಾಲಿ೦ಗ್ಟಣನ್ . ಎಂಬವರು ಧರೆಗೆ ಉರುಳಿದರು. ಬಿಳಿಯ ಪಡೆಯ ನೂರಾರು ಜನ ಹತರಾದರು, ದಳ ಮೂರು ಹರದಾರಿಗಳ ದೂರಕ್ಕೆ ಹಿಂದೆ ಸರಿಯಿತು. ...ಪಶ್ಚಿಮದ ಪಡೆ ಕಣ್ಣಾನೂರಿನಿಂದ ಮಾರ್ಚ್ ತಿಂಗಳ ಕೊನೆಯ ದಿನವೇ ಕರ್ನಲ್ ಫಾಲ್ಸನ ನಾಯಕತ್ವದಲ್ಲಿ ಹೊರಟಿತು. ಹೆಗ್ಗಳ ಘಟ್ಟದ ಮೂಲಕ ವೀರರಾಜಪೇಟೆಯನ್ನು ತಲಪಿ ಮಡಕೇರಿಗೆ ಮುಂದುವರಿಯಬೇಕೆಂಬುದು ಆತನಿಗೆ ದೊರೆತಿದ್ದ ಆಙ.
ಸಾಧಾರಣ ಸಂವತ್ಸರದಲ್ಲಿ ಹೆಗ್ಗಳ ಘಟ್ಟದ ದಾರಿಯಾಗಿಯೇ ದೊಡ್ಡವೀರರಾಜೇಂದ್ರ ತಲಚೇರಿಗೆ ಇಳಿದುಹೋಗಿ. ಆಂಗ್ಲರೊಡನೆ ಸ್ನೇಹದ ಒಡಂಬಡಿಕೆಯನ್ನು ಮಾಡಿಕೊಂಡಿದ್ದ. ಇಂಗ್ಲಿಷರ ತೋಪುಗಳನ್ನು ಎಳೆಯುವುದಕ್ಕಾಗಿ ಆತ ನೀಡಿದ ಹೋರಿಗಳು ಆ ಘಟ್ಟದ ಮಾರ್ಗವಾಗಿಯೇ ಮಲೆಯಾಳದ ಬಯಲಿಗೆ ಇಳಿದಿದ್ದುವು. ಮುಂದೆ ಟೀಪುವನ್ನು ಸದೆಬಡಿ ಯುವುದಕ್ಕೋಸ್ಕರ ಆ ದಾರಿಯಾಗಿಯೇ ಇಂಗ್ಲಿಷ್ ದಂಡುಗಳು ಕೊಡಗಿಗೆ ಬಂದು ಮೈಸೂರಿಗೆ ಮುಂದುವರಿದಿದ್ದುವು.
 ಆ ಪರಿಚಿತ ಹಾದಿಯಲ್ಲಿ, ಅವರೀಗ ತಮ್ಮ ಹಳೆಯ ಮಿತ್ರನ ರಾಜ್ಯದ ಮೇಲೆ ದಾಳಿ ನಡೆಸಲು ಬ೦ದರು,
  ಆದರೆ ದಾರಿ ಸುಗಮವಾಗಿರಲಿಲ್ಲ. ಒಂದರ ಹಿಂದೆ ಒಂದಾಗಿ ಕಲ್ಲಿನ ಗೋಡೆಗಳು ಕಂಡುವು, ಭೀಮ ವೃಕ್ಷಗಳ ಕಾಂಡಗಳು ಹಾದಿಗಡ್ಡವಾಗಿ ಮಲಗಿದ್ದುವು. ಅವುಗಳ ಹಿಂದೆಯೂ ಕೊಡಗಿನ ಸೈನಿಕರಿದ್ದರು. ಇಕ್ಕೆಲಗಳಲ್ಲಿ ಕಾಡುಗಳಲ್ಲಾ ಅವರಿದ್ದರು.
 ವಾಸ್ತವವಾಗಿ ಕಾರ್ಯಕಾರ ಕಳಿಂಗಯ್ಯ ಅಡ್ಡಗೋಡೆಯ ಮೇಲೆ ಕುಳಿತಿದ್ದ: ಬೋಪಣ್ಣನ ಯೋಜನೆ ಕೈಗೂಡುವಂತಿದ್ದರೆ ಸಕಾಲದಲ್ಲಿ ತಾನು ಅವನ ಕಡೆಗೆ ಧುಮುಕಬೇಕು. ಅವನು ವಿಫಲನಾಗುವ ಹಾಗಿದ್ದರೆ, ಗಡಿ ರಕ್ಷಣೆಯನ್ನು ಮಾಡಿದ ವೀರ ಎಂದು ರಾಜನ ಹೊಗಳಿಕೆಗೆ ಪಾತ್ರನಾಗಬೇಕು.

ಇದೊಂದನ್ನೂ ತಿಳಿಯದ ಸೈನಿಕರು, ಸ್ಟೈರ್ಯದಿಂದ ಕಲಿಗಳಾಗಿ ಹೋರಾಟ ನಡೆಸಿ