ಪುಟ:ಸ್ವಾಮಿ ಅಪರಂಪಾರ.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೧೬ ಸ್ವಾಮಿ ಅಪರಂಪಾರ

            "ಎಲಾ ಘಾತಕಿ! ಹೀಗೂ ವಂಚಿಸಿದನಾ ? ಇನ್ನು-ಇನ್ನೇನಾಗತದೆ ಬಸವ?"
            "ನಮ್ಮ ಪಡೆಗಳೆಲ್ಲ ಶರಣಾಗತವೆ! ವೈರಿಗಳ ದಂಡು ಇಲ್ಲಿಗೆ ಬರತದೆ !"
            ಚಿಕವೀರರಾಜನ ಜಂಘಾಬಲ ಉಡುಗಿತು. ಅವನ ಕಣ್ಣುಗಳನ್ನು ಕತ್ತಲು ಕವಿಯಿತು.
            ಆ ಸ್ಥಿತಿಯಲ್ಲೂ ಅವನು ಆಕ್ರೋಶ ಮಾಡಿದ :
            "ಎಲ್ಲಿ ಬೋಪಣ್ಣ! ಅವನನ್ನು ಹಿಡಕೊಂಡು ಬನ್ನಿ. ಅವನ ಎದೆ ಬಗೀತೀನಿ!"
            ಮುಂದಿನ ಕ್ರಮಗಳನ್ನು ಕುರಿತು ಚಿಂತೆಗೀಡಾಗಿದ್ದ ಬಸವ, ರಾಜನನ್ನು  ಸಂತೈಸ
         ಲೆತ್ನಿಸಿದ:
            "ಇನ್ನೂ ಹೋರಾಟ ಸಾಧ್ಯ.  ಮಹಾಸ್ವಾಮಿ.   ಈ  ಕ್ಷಣವೆ  ನಾವು  ನಾಲ್ಕುನಾಡು
         ಅರಮನೆಗೆ ತೆರಳಬೇಕು. ಅಲ್ಲಿ  ಸೈನ್ಯವನ್ನು  ಒಟ್ಟುಗೂಡಿಸಬೇಕು. ಇಲ್ಲಿ ಇರೋದು
         ಅಪಾಯ! ನಾವು ತಡಮಾಡಬಾರದು!"
             ಅರಸ ಶಿಲೆಯಂತೆ  ನಿಂತ.  ಅವನ  ಮುಖದಲ್ಲಿ  ಕ್ರೋಧ  ಹೆಪ್ಪುಗಟ್ಟಿತ್ತು.  ಧ್ವನಿ.
         ಹೊರಡಲಾರದೆ ಗಂಟಲಲ್ಲೆ ಒರಲುತ್ತಿತ್ತು.
             ಈ ಮಾತುಕತೆಯನ್ನು ರಾಣಿ ಕೇಳಿಸಿಕೊಂಡಿದ್ದಳು.ಆಕೆ ಶಾಂತವಾಗಿ ಹೆಜ್ಜೆ ಇರಿಸುತ್ತ 
        ತೆರೆಯಿಂದ ಹೊರಬಂದಳು.
               ಬಸವನೆಂದ :
              "ಮಹಾರಾಣಿಯವರು ಶೋಕಿಸಬಾರದು."
              ಯಾವ ಕಂಪನವೂ ಇಲ್ಲದ ಸ್ವರದಲ್ಲಿ ರಾಣಿ ಅಂದಳು :
              "ನಾಲ್ಕುನಾಡಿಗೆ ಈಗಲೆ ಹೊರಡೋದೇ ಹ್ಯಾಗೆ ಅಂತ ಕೇಳೋಕೆ ಬಂದೆ."
              "ಹೌದು ತಾಯೀ."
              "ರಾಜಕುಮಾರಿ ಬಿಸಿಲ ಮಹಡೀಲಿದಾಳೆ. ಕರೀತೇನೆ."
              ಕರ್ಕಶವಾಗಿ ಅರಸನೆಂದ :
              "ಆಗಲೀ ಬಸವ, ನಾಲ್ಕುನಾಡಿಗೆ ಹೋಗೋಣ."
                                                     ೩೯
              ಐದು ಗಡಿಗಳಲ್ಲೂ ಕದನ ಆರಂಭವಾದೊಡನೆಯೇ, 'ಶರಣಾಗತಿಯ ಕೆಲಸ ಸುಲಭ
        ವಾಗುವುದಿಲ್ಲ'- ಎಂಬುದು  ಬೋಪಣ್ಣನಿಗೆ  ಮನದಟ್ಟಾಯಿತು.  ಸ್ವತಃ ಚಿಕವೀರರಾಜನೂ
        ರಣರಂಗಕ್ಕಿಳಿದರೆ  ವಿಜಯಶ್ರೀ  ಇಂಗ್ಲಿಷರಿಗೆ  ಒಲಿಯದಿರಲೂ  ಬಹುದು-ಎಂದು ಅವನು
        ಚಿಂತೆಗೀಡಾದ.
             ಇದ್ದ ಪರಿಹಾರವೊಂದೇ : ಯುದ್ಧದ ಕ್ಷಿಪ್ರ ಮುಕ್ತಾಯ.
             ಅದಕ್ಕೆ ಉಪಾಯ : ದಾಳಿಕಾರರಿಗೆ ಶರಣಾಗಿರೆಂದು ರಾಜನ ಹೆಸರಲ್ಲಿ ಅನುಜ್ಞೆ.
             ಅಪ್ಪಚ್ಚು  ಮತ್ತು   ಉತ್ತಯ್ಯ  ಅದಕ್ಕಾಗಿಯೇ  ಕಾದಿದ್ದರು.  ಕಳಿಂಗಯ್ಯನೂ  ಸಮಾ
        ಧಾನದ ನಿಟ್ಟುಸಿರು ಬಿಟ್ಟ. ಕುಡಿಯ ಸೋದರರಿಗೇನೋ ಅದು ತಲಪಲಿಲ್ಲ.
             ಅರಸನ ನಂಬಿಗೆಯ ಕಾರ್ಯಕಾರನಾದ ಐಯಣ್ಣ ಮಾತ್ರ, ಹೀಗೂ ಉಂಟೆ ?-ಎಂದು
        ವಿಸ್ಮಿತನಾದ.
              ಕ್ರಮಕ್ರಮವಾಗಿ  ವೈರಿಯನ್ನು  ಹಣ್ಣುಮಾಡುವ  ಅವನ  ಸಮರ  ನೀತಿ  ಆವರೆಗೂ