ಪುಟ:ಸ್ವಾಮಿ ಅಪರಂಪಾರ.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ೧೧೭

       ಯಶಸ್ವಿಯಾಗಿತ್ತು. ಯುದ್ಧದ ಮೂರನೆಯ ದಿನ ಒಂದು ಹರದಾರಿ ಮುಂದುವರಿಯು
       ವುದಕ್ಕೂ ಇಂಗ್ಲೀಷರು ಶಕ್ತರಾಗಿರಲಿಲ್ಲ.  ಹೀಗಿದ್ದೂ  ಅವರಿಗೆ ಈಗ ತಾನು ಶರಣಾಗ
       ಬೇಕೆ ?
          ಮಾನಸಿಕ ತೊಳಲಾಟದಲ್ಲಿ ಆತ ಸಿಲುಕಿದ್ದಾಗಲೇ ಬೊಪು ದಿವಾನ,ನಾಲ್ಕುನೂರು
       ಜನ ಕೊಡವ ಯೋಧರೊಡನೆ ಅಲ್ಲಿಗೆ ಆಗಮಿಸಿದ. ಅವನ  ಪಕ್ಕದಲ್ಲಿ ಪೊನ್ನಪ್ಪನಿದ್ದ.
       ಲಕ್ಷ್ಮೀನಾರಾಯಣನನ್ನೂ ಒತ್ತಾಯಪಡಿಸಿ ಕರಕೊಂಡು ಬಂದಿದ್ದ ಆತ.
          ಹೋರಾಡುತ್ತಲಿದ್ದ ಸೈನಿಕರು ತಮಗೆ ಸಹಾಯ ಬಂತು ಎಂದುಕೊಂಡರು.
          ಈ ಬೋಪುದಿವಾನನ್ನು ನಂಬಿ ಕೆಟ್ಟೆವೋ ಹೇಗೆ-ಎಂದು ಫ್ರೇಸರನ್ನೂ ಲಿಂಡ್ಸೆಯೂ
       ಕಾತರಗೊಳ್ಳತೊಡಗಿದ್ದ ವೇಳೆಯಲ್ಲೇ. ಬೋಪಣ್ಣ ಯುದ್ಧರಂಗಕ್ಕೆ ಬಂದಿರುವ ವಾರ್ತೆ
       ಅವರಿಗೆ ಮುಟ್ಟಿತು.
            ಐಯ್ಯಣ್ಣನನ್ನು ಬೋಪಣ್ಣ ಕೇಳಿದ :
            "ಲಡಾಯಿ ನಿಲ್ಲಿಸೂಂತ ಆಜ್ಞೆ ಬರಲಿಲ್ಲವಾ ?"
            "ಬಂತು" ಎಂದ ಐಯಣ್ಣ.
            "ಮತ್ಯಾಕೆ ಇನ್ನೂ ಗುಂಡಿನ ಶಬ್ದ ಕೇಳತಾ ಇದೆ ?"
            "ಆಜ್ಞೆ ಈಗಷ್ಟೇ ಮುಟ್ಟಿತು."
            "ಏನ್ಮಾಡೋಣಾಂತ ತಲೆ ತುರಿಸ್ಕೊಂಡು ನಿಂತಿದೀಯಾ? ರಾಜದ್ರೋಹಿಯಾಗ
        ತಿಯ? ನಿನ್ನನ್ನು ಬರ್ತರ್ಫ್ ಮಾಡಿದೀನಿ! ದಳದ ನಾಯಕತ್ವ ನಾನೇ ವಹಿಸಿಕೊಂಡಿ
        ದೀನಿ !"
          ಐಯ್ಯಣ್ಣ ಮರುಮಾತನಾಡದೆ,ತನ್ನ ಕೊಂಬು ಟೊಪ್ಪಿಗೆಯನ್ನು ತೆಗೆದು ಕೆಳಗಿರಿಸಿ
        ಬದಿಗೆ ಸರಿದು ನಿಂತ...
           ...ತಮ್ಮ ಶಿಬಿರದ ಕಡೆಗೆ ಬರತೊಡಗಿದ ಬಿಳಿಯ ಬಾವುಟ ಕಂಡು ಫ್ರೇಸರ್ ಹರ್ಷಿತ
        ನಾದ.
          'ಕೃತಾರ್ಥನಾದೆ' ಎಂದುಕೊಂಡ ಬೋಪಣ್ಣ , ಫ್ರೇಸರನಿಂದ ತಾನು ಹಸ್ತಲಾಘವವನ್ನು
        ಪಡೆದಾಗ.
          ...ಪಶ್ಚಿಮದಲ್ಲಿ ಹೆಗ್ಗಳಘಟ್ಟದ ದಾರಿಯಾಗಿ ಕೊಡಗನ್ನು ಪ್ರವೇಶಿಸುವುದು ಸುಲಭ
        ಸಾಧ್ಯವಲ್ಲ-ಎಂದು ಕರ್ನಲ್ ಫಾಲ್ಸ್ ಭಾವಿಸತೊಡಗಿದ್ದ. ಅಷ್ಟರಲ್ಲಿ ಮೇಲಿನಿಂದ
        ಶರಣಾಗತಿಯ ಬಿಳಿಯ ಬಾವುಟ ಕಾಣಿಸಿತು. 
           ಪಶ್ಚಿಮದ ಪಡೆ ಮೇಲೇರಿ ಉಕ್ಕಡವನ್ನು ದಾಟಿತು.
           ಇಲ್ಲಿಯೂ ಉಳಿದ ಮೂರು ಕಡೆಗಳಲ್ಲಿಯೂ ಎಲ್ಲ ಪಡೆಗಳು ನಿಯೋಜಿತ ರೀತಿಯಲ್ಲೇ
        ಮುಂದೆ ಸಾಗಿ ಮಡಕೇರಿಯನ್ನು  ತಲಪಿದುವು.
           ಏಪ್ರಿಲ್ ಆರನೆಯ ದಿನ ಇಂಗ್ಲೀಷರು ಮಡಕೇರಿಯ ಕೋಟೆಯನ್ನು ಪ್ರವೇಶಿಸಿದರು.
        ರಾಜಮನೆತನದ   ಕೇತುಪಟ  ಕೆಳಕ್ಕಿಳಿದು, ಅದರ ಸ್ಥಾನದಲ್ಲಿ ಯೂನಿಯನ್ ಜಾಕ್
        ಹಾರಾಡಿತು.
           ಅದಾದ  ಐದನೆಯ  ದಿನ  ತಾನು  ಸಹಿ  ಹಾಕಿದ  ಇಸ್ತಿಹಾರೊಂದನ್ನು  ಫ್ರೇಸರ್
        ಹೊರಡಿಸಿದ. ಅದು ಸಾರಿತು :