ಪುಟ:ಸ್ವಾಮಿ ಅಪರಂಪಾರ.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೧೮ ಸ್ವಾಮಿ ಅಪರಂಪಾರ

               "ಕೊಡಗು ದೇಶದ  ನಿವಾಸಿಗಳು,  ಬ್ರಿಟಿಷ್  ಸರಕಾರದ  ಅಧೀನದಲ್ಲಿರಬೇಕೆಂದು
                ಏಕಮತಸ್ಥರಾಗಿ ಇಷ್ಟಪಡುವುದರಿಂದ, ಚಿಕವೀರರಾಜೇಂದ್ರ ಒಡೆಯರಿಂದ ಆಳಲ್ಪಡು
                ತ್ತಿದ್ದ  ಈ ದೇಶವನ್ನು  ಘನವುಳ್ಳ  ಕುಂಪಣಿ  ಸರಕಾರದ  ತಾಬೆಗೆ  ವರ್ಗಮಾಡಾಲು 
                ಇಂಡಿಯಾ ದೇಶದ ಗವರ್ನರ್ ಜನರಲ್ ಸಾಹೇಬರವರು ಸಂತೋಷಪಡುತ್ತರೆ.
                    "ಈ ದೇಶದ ನಿವಾಸಿಗಳನ್ನು ಪುನಃ ಸ್ವದೇಶೀ ರಾಜರ ಆಳ್ವಿಕೆಗೆ ಬಿಟ್ಟುಕೊಡೂವು
                ದಿಲ್ಲವಾಗಿಯೂ  ಇವರ  ಮುಲ್ಕಿ  ಮತ್ತು  ಮತಸಂಬಂಧವಾದ  ಎಲ್ಲಾ   ಪದ್ದತಿಗಳು
               ಬಹುಮಾನದಿಂದ ಅಂಗೀಕರಿಸಲ್ಪಡುವುಹದಾಗಿಯೂ ಮತ್ತು ಇವರ ಭದ್ರತೆ ಸುಖಕ್ಷೇಮ
               ಗಳನ್ನು ಹೆಚ್ಚಿಸಲು  ಬ್ರಿಟೀಷ್  ಸರಕಾರದವರು  ಯಾವಾಗಲೂ  ಸಂತೋಷಪಡುವ
               ರಾಗಿಯೂ ಇದರ ಮೂಲಕ ಖಂಡಿತವಾಗಿ ತಿಳಿಸಲ್ಪಟ್ಟಿದೆ."
               ಪ್ರೇಸರ್, ಕೊಡಗಿನ ಪ್ರಮುಖರ ಸಭೆಯೊಂದನ್ನು ಕರೆಸಿ, ಅವರ ಅಪೇಕ್ಷೆಯಂತೆಯೇ
         ಆ ಇಸ್ತಿಹಾರನ್ನು  ತಾನು   ಹೊರಡಿಸುತ್ತಿರುವೆನೆಂದು   ನಂಬಿರುವ  ಒಂದು  ನಾಟಕವನ್ನು
         ಆಡಿದ.
              ಅನಂತರ ಅರಸನ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳಲು ಆತ ಉದ್ಯುಕ್ತನಾದ.
                                                      ೪೦
              ಆಂಗ್ಲರ ವಿಜಯದ ದಾರುಣ ವಾರ್ತೆ  ಮಡಕೇರಿಯಿಂದ ಬಂದಾಗ, ಕುಡಿಯ ಸೋದರ
         ರಿಗೆ  ಆಕಾಶವೇ ಕಳಚಿಬಿದ್ದಂತಾಯಿತು.   ಅವರು ಸಂಪಾಜೆ ಘಟ್ಟವನ್ನೇರಿ, ನಾಲ್ಕುನಾಡು
         ಅರಮನೆಗೆ ಧಾವಿಸಿದರು.  ಐಯಣ್ಣನಾಗಲೇ  ಅಲ್ಲಿಗೆ  ಬಂದಿದ್ದ. ಅವನ  ಜತೆಗಾರರಾಗಿದ್ದ
         ಹುಲಿಕುಂದ  ನಂಜಯ್ಯನೂ   ಪುಟ್ಟಬಸವನೂ   ಬಂದು   ತಲುಪಿದರು.   ಅಬ್ಬಾಸ್   ಅಲಿ
         ಯೊಬ್ಬನದೇ ಸುಳಿವಿರಲಿಲ್ಲ.
              ನಡೆದುದು  ದುಃಸ್ವಪ್ಪ  ಎಂದೇ  ಅವರ  ನಂಬಿಕೆ.  ಎಚ್ಚರಗೊಳ್ಳಬೇಕು.   ಹೋರಾಡ
         ಬೇಕು.
              ಆದರೆ  ಹೇಗೆ?  ಸೇನೆ  ಗಡಿಗಳಲ್ಲಿ  ಹಂಚಿಹೋಗಿರುವಾಗ.  ನಾಲ್ಕು  ಕಡೆ  ದಳಗಳು
         ಶರಣಾಗತವಾಗಿರುವಾಗ. ಯುದ್ಧ ಮುಂದುವರಿಸುವುದೆಂತು ?
              ಬಸವನೆಂದ :
              "ದುಖಃಪಟ್ಟುಕೊಂಡು  ಹೇಳತಾ  ಇದೀನಿ.   ಬೇಕಿದ್ದರೆ   ಇಲ್ಲೇ   ನಿಂತು  ಹೋರಾಡಿ
         ಸಾಯೋಣ, ಇಲ್ಲವಾದರೆ, ಸಂಧಾನದ ಸೋಗು ಹಾಕಿ  ಸಮಯ  ಕಾಯೋಣ.  ಸೈನಿಕರೆಲ್ಲ
         ಒಟ್ಟಾಗೋದಕ್ಕೆ ಕಾಲಾವಕಾಶ ಸಿಕ್ಕರೆ, ಮುಂದೆ ವೈರಿಗಳ ಮೇಲೆ ಎರಗಬೌದು."
               ಅಭಿಮಾನಧನನಾದ  ಚಿಕವೀರರಾಜ  ಈಗ  ಅಸಹಾಯ. ತನಗೆ ತಟ್ಟಿದ ಕಳಂಕವನ್ನು
         ತಾನು ನಿವಾರಿಸಬೇಕು. ಯಶಸ್ವಿಯಾಗಿ ನಿವಾರಿಸಬೇಕು. ಯಾವ ಬಗೆಯಾಗಿ?
               ಆತನೆಂದ :
               "ಸಂಧಾನ ಅನಿವಾರ್ಯ ಎಂದಾದರೇ ಆಗಲಿ."
                ಫ್ರೇಸರನ  ಅಪ್ಪಣೆಯಂತೆ  ಮಹಾರಾಜನನ್ನೂ ಅವನ ಪರಿವಾರವನ್ನೂ ಕರೆತರುವುದ
         ಕ್ಕೋಸ್ಕರ ಆಂಗ್ಲ ದಳದ ತುಕಡಿಯೊಂದು ನಾಲ್ಕುನಾಡು ಅರಮನೆಗೆ ಬಂದಿತು. ಅರಸನ 
         ಅಂಗರಕ್ಷಕರು, ಸಂಗಡಿಗರಾದ ಇತರ ಶೂರರು, ಕೈದುಗಳನ್ನು ಕೆಳಗಿಟ್ಟರು.