ಪುಟ:ಸ್ವಾಮಿ ಅಪರಂಪಾರ.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦

ಸ್ವಾಮಿ ಅಪರ೦ಪಾರ



ತನ್ನ ಮನೆಯನ್ನು ಸಮಿಾಪಿಸುತ್ತಲಿದ್ದಂತೆ ಚಾವಡಿಕಾರ ಶಂಕರಪ್ಪನಿಗೆನಿಸಿತು:
"ಇದೆಲ್ಲ ವಿಧಿಯ ಆಟ."

ಶಂಕರಪ್ಪನ ಮನೆತನ ಅವನ ತಂದೆ ಶಿವಬಸಪ್ಪನ ಕಾಲದಿಂದಲೂ ಅರಸರ ಊಳಿಗ ದಲ್ಲಿತು, ಸುಮಾರು ಹನ್ನೆರಡು ವರ್ಷಗಳಿಗೆ ಹಿಂದಿನ ಮಾತು. ಚಿಕವೀರರಾಜನ ದೊಡ್ಡಪ್ಪ ದೊಡ್ಡವೀರರಾಜ ಆಳುತ್ತಲಿದ್ದ ಕಾಲ, ಸುದೀರ್ಘವೂ ಸುಭದ್ರವೂ ಆದ ಅವನ ಆಳ್ವಿಕೆಯ ಕೊನೆಯ ದಿನಗಳು ಮಾತ್ರಆತನಿಗೂ ಕೊಡಗಿಗೂ ಯಾತನಾಮಯವಾಗಿದ್ದುವು. ಪ್ರೀತಿಯ ಮಡದಿ ಮಹದೇವಮಾಜಿ ಸತ್ತಂದಿನಿಂದ ಅರಸನಿಗೆ ಮತಿಭ್ರಮಣೆಯುಂಟಾ ಯಿತು. ಅವನಿಗೆ ಪುತ್ರಸಂತತಿ ಇರಲಿಲ್ಲ, ತನ್ನ ಬಳಿಕ ತನ್ನ ಮಗಳು ಪಟ್ಟವನ್ನೇರ ಬೇಕೆಂಬುದು ಅವನ ಆಸೆಯಾಗಿತು, ಆದರೆ ಆ ಆಸೆಯನ್ನು ವಿಫಲಗೊಳಿಸಲು ತನ್ನ ಬಂಧುಗಳೂ ಪ್ರಜೆಗಳೂ ಹೊಂಚು ಹಾಕುತ್ತಿರುವರು; ತನ್ನನ್ನು ಕೊಲ್ಲಲು ಸಂಚು ನಡೆಸುತ್ತಿರುವರು –ಎಂದು ದೊರೆ ಆಗಾಗ್ಗೆ ಭ್ರಮಿಸಿದ. ಮಾನಸಿಕ ರೋಗದಿಂದ ನರಳುತ್ತಿದ್ದ ಅಂಥದೊಂದು ಘಳಿಗೆಯಲ್ಲಿ ತನ್ನ ಒಡಹುಟ್ಟಿದವರಿಬ್ಬರನ್ನು, ಅಪಾಜಿಲಿಂಗರಾಜರನ್ನು ಕೊಲೆ ಮಾಡಲು ಹಂತಕರನ್ನು ಆತ ಕಳುಹಿದ. ಒಂದು ತಂಡ ಅಪ್ಪಂಗಳಕ್ಕೂ ಇನ್ನೊಂದು ತಂಡ ಹಾಲೇರಿಗೂ ಹೋದುವು. ಹಾಗೆ ಕಳುಹಿದ ಹೊತ್ತಿನಲ್ಲಿ ಅರಸನ ಬುದ್ದಿ ಸ್ತ್ರಿಮಿತಕ್ಕೆ ಬಂತು. ತನ್ನ ಒಡಹುಟ್ಟಿದವರನ್ನು ಕೊಲೆ ಮಾಡ ಬಾರದೆಂದು ಆಜ್ಞಾಪಿಸಿ ಪುನಃ ದೂತರನ್ನು ಅಟ್ಟಿದ. ಆದರೆ ಅಪ್ಪಂಗಳ ಜಹಗೀರಿಗೆ ತೆರಳಿದ ದೂತರು ಅಲ್ಲಿಗೆ ತಲಪುವುದಕ್ಕೆ ಮುಂಚೆಯೇ ಅಪಾಜಿಯ ಕೊಲೆಯಾಗಿತು. ಹಾಲೇರಿಗೆ ಧಾವಿಸಿದ ದೂತರು ಲಿಂಗರಾಜನ ಪಾಣ ಉಳಿಸಲು ಸಮರ್ಥರಾದರು. ಆ ತಂಡದ ನಾಯಕನಾಗಿದ್ದವನು ಹಿರಿಯ ಚಾವಡಿಕಾರ ಶಿವಬಸಪ್ಪ, ಈಗ ? ದೊರೆ ಮಗನೊಬ್ಬನ ಜೀವ ಉಳಿಸುವ ಅವಕಾಶ ಶಿವಬಸಪ್ಪನ ಮಗನಿಗೆ ಲಭ್ಯ ವಾಗಿದೆ... ಅಪಾಜಿಯ ಮರಣದ ಬಳಿಕ ಅವನ ಸಂಸಾರವನ್ನು ಸಲಹುವ ಭಾರವನ್ನು ಲಿಂಗ ರಾಜನ ಮೇಲೆ ಹೊರಿಸಲಾಗಿತು, ಅಣ್ಣ ಅರಸನ ಅಪೇಕ್ಷೆಯಂತೆ ಲಿಂಗರಾಜ ಅಪ್ಪಂಗಳದ ಅರಮನೆಯಲ್ಲಿ ವಾಸಿಸತೊಡಗಿದ್ದ. - ಆದರೆ, ಲಿಂಗರಾಜನ ಮಗ ಚಿಕವೀರರಾಜ ತಾನು ಅರಸನಾದಾಗ, ತನ್ನ ಬಾಲ್ಯದ ಒಡನಾಡಿಗಳಾದ ದಾಯಾದಿ ಸೋದರರ–ಅಪಾಜಿಯ ಮಕ್ಕಳ ಸಾವನ್ನು ಬಯಸುವ ನೆಂದು ಯಾರು ಭಾವಿಸಿದ್ದರು? ಶಂಕರಪ್ಪ ಕೇಳಿ ಬಲ್ಲ, ಅರಸೊತ್ತಿಗೆಗಳ ಕಥೆಯೇ ಹೀಗೆ. ಒಬ್ಬ ಪಟ್ಟವೇರಬೇಕಾದರೆ నాల్కు ಜನ ಇತರ ಹಕ್ಕುದಾರರ ಇಲ್ಲವೆ ಸಮಿಾಪ ಸಂಬಂಧಿಗಳ ತಲೆಗಳುರುಳಬೇಕು. ಅರಸು ದುಷ್ಟ ಎಂದು ಇದರ ಅರ್ಥವಲ್ಲ, ಇದೊಂದು ರಾಜನೀತಿ, ರಾಜ್ಯಭಾರ ಸುಗಮ ವಾಗಲು ಹಲವರು ಕೈಗೊಳ್ಳುವ ಮೊದಲ ಕ್ರಮ. ಮನೆ ಸಮಿಾಪಿಸಿತು, ಮುಂದುಗಡೆ, ಹಲವು ಸಂಭವಗಳಿಗೆ ಸಾಕ್ಷಿಯಾದ ನೂರಾರು