ಪುಟ:ಸ್ವಾಮಿ ಅಪರಂಪಾರ.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

న్మామి ಅಪರ೦ಪಾರ &J ಕುದುರೆಗೆ ಕಡಿವಾಣ ಹಾಕಿ ಆ ಮರದ ಕರಿನೆರಳಲ್ಲಿ ಶಂಕರಪ್ಪ ನಿಂತ. ತನ್ನ ತಂದೆ ಈಗ ಇದ್ದಿದ್ದರೆ ಯಾವ ರೀತಿ ವರ್ತಿಸುತ್ತಿದ್ದ? - ಐಯಣ್ಣನಿಗೆ ತಾನು ಹೇಳಿದ್ದೆ ಎಂದರೆ, ಕತು ಹಿಸುಕಿ ಅರಸುಮಗನ ಕತೆಯನ್ನು ಆಗಲೇ ಆತ ಮುಗಿಸಿಬಿಡುತ್ತಿದ್ದ, 'ಬದುಕಿದಾಗ ಇರದಿದ್ದ ಕನಿಕರ ಸತ್ರ ಮಾಕೆ ಬಂತೇನಪ್ಪ ? ಎಂದು ಪರಿಹಾಸ್ಯದ. ಧ್ವನಿಯಲ್ಲಿ ಐಯಣ್ಣ ಕೇಳಿದಾಗ ತಾನು ಉತ್ತರವಿತ್ತಿರಲಿಲ್ಲ. ಯಾಕೆ? ಕೆಳಕ್ಕಿಳಿಸುತ್ತಿದ್ದ ವೀರಪ್ಪನ ದೇಹದಲ್ಲಿ ಕಾವಿದುದನ್ನು ತಾನು ಗಮನಿಸಿದಾಗ, ಐಯಣ್ಣನಿಗೆ ಕೂಗಿ ಹೇಳ ಬೇಕೆಂದು ಒಂದು ಕ್ಷಣವೇನೋ ಅನಿಸಿತು. ಆದರೂ ತನಗರಿಯದಂತೆಯೇ ಆ ಯೋಚನೆ ಯನ್ನು ಹತ್ತಿಕ್ಕಿದ್ದ. ಯಾಕೆ? ಈಗ ತಾನು ಆ ತಾಣಕ್ಕೆ ಮರಳಿ ನೆರವು ನೀಡದೆ ಇದ್ದರೆ, ವೀರಪ್ಪಾಜಿಯ ಅವಸಾನ ವಾಗುವುದು ಖಂಡಿತ, ಶುಶೂಷೆಯಿಲ್ಲದೆ ಬದುಕುವ ಸ್ಥಿತಿಯಲ್ಲಿ ಆತನಿರಲಿಲ್ಲ, ಆಗ ವಾಸ್ತವವಾಗಿ ತಾನೇ ಆತನ ಕೊಲೆಗಡುಕನಾಗುವೆನಲ್ಲ? - ಅದರ ಬದಲು ಅಲ್ಲಿಗೆ ಧಾವಿಸಿದೆನೋ–ಅದು ರಾಜದ್ರೋಹವೆನ್ನಿಸಲಾರದೆ? ಹೇಗೆ ? - ವೀರಪ್ಪ ಪರಕೀಯನಲ್ಲ, ರಾಜಮನೆತನದವನೇ, ಅರಮನೆಯ ಉಪುಂಡ ತಾನು ಆತನನ್ನು ಉಳಿಸುವುದು ತಪ್ಪಲ್ಲ. ಚಿಕವೀರರಾಜನ ಬದಲು ಆತ ಅರಸನಾಗಲಿ ಎನ್ನುತ್ತಿದೆಯೇನು ತನ್ನ ಮನಸ್ಸು ? ಛೆ ! ಎಂದಿಗೂ ಇಲ್ಲ, ಅಂಥ ವಿಚಾರವಿದ್ದರೆ ಅದು ರಾಜದ್ರೋಹ ಎನಿಸಬಹುದು. ತಾನು ತೋರಿಸುವುದು ದಯೆಯನ್ನು, ಮಾನವ ಸಹಜವಾದ ದಯೆಯನ್ನು. ದಯೆಯೇ ಧರ್ಮದ ಮೂಲವಯ್ಯ– - ನಂಜರಾಜ ಪಟ್ಟಣದ ಸಾಮಿಗಳು ಒಮ್ಮೆ ಅಂದಿರಲಿಲ್ಲವೆ ಆ ಮಾತನ್ನು? ತನ್ನ ಒಳತೋಟಿ ಕುದುರೆಗೂ ಅರ್ಥವಾಗಿದೆಯೇನೊ. ಕೆನೆಯದೆ ನಿಂತಿದೆ, ಪಾಪ. ...ಶಂಕರಪ್ಪನ ತಲೆ ಚೂರು ಚೂರಾಗುವಂತೆ ಸಿಡಿಮಿಡಿಗುಟ್ಟಿತು. ಎಲ್ಲಿಯೋ ಏನೋ ತೊಡಕು ಎಂಬಂತೆ ಎದೆಗುಂಡಿಗೆ ಹೊಯಾಡಿತು. ತಲೆಯೆತ್ತಿ ಶಂಕರಪ್ಪ ಆಲದೆಲೆಗಳ ದಟ್ಟನೆಯ ಛಾವಣಿಯನ್ನು ನೋಡಿದ. ಇದೊಂದು ಅದ್ಭುತ ಶಕ್ತಿ, ತಾನೊಂದು ಕೀಲುಗೊಂಬೆ–ಎನಿಸಿತು ಅವನಿಗೆ. ಮನಸ್ಸಿನಲ್ಲೆ ಆತ ಕೇಳಿದ: అబ్చెనెచారె, నిరిచిద్విద్గారి ఈగేలను వాూడాుత్త్కిదిరి ? ಮುಂಜಾವದ ಬರುವಿಕೆಯನ್ನು ಸಾರುತ್ತ ತಂಗಾಳಿ ಒಯ್ಯನೊಯ್ಯನೆ ಬೀಸಿಬಂತು. ಮರದೆಲೆಗಳಿಂದ ಚಳಿ ಚಳಿ ಎಂಬ ಇಂಚರ ಹೊರಟಿತು. ಆ ಕ್ಷಣದಲ್ಲಿ ಎಲ್ಲವೂ ಸ್ಪಷ್ಟವಾದಂತೆ, ಹೃದಯ ಹಗುರಗೊಂಡಂತೆ, ಶರೀರ ಚುರುಕಾ। ದಂತೆ ಶಂಕರಪ್ಪನಿಗೆ ಅನಿಸಿತು. ತನ್ನ ಮುಂದಿನ ದಾರಿಯನ್ನು ನಿಚ್ಚಳವಾಗಿ ಆತ ಕಂಡ. ವೇಳೆ ಇರಲಿಲ್ಲ, ತಡಮಾಡುವಂತಿರಲಿಲ್ಲ ಆತ, ಮನೆಗೆ ಹೋದನೋ ಮಡದಿಯೊಡನೆ