ಪುಟ:ಸ್ವಾಮಿ ಅಪರಂಪಾರ.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(),3 న్నావి) ಅಪರ೦ಪಾ ರ ಮಾತನಾಡಬೇಕು. ನಿಸ್ಸಂದೇಹವಾಗಿಯೂ ಅವಳು ಒಪ್ಪವವಳೇ, ಆದರೆ ಕಾಲಹರಣ. ದೀರ್ಘನಿದ್ರೆಯಿಂದ ಎದ್ದವನ ಲವಲವಿಕೆಯಿಂದ, ಶಂಕರಪ್ಪ ಕಡಿವಾಣವನ್ನು ತುಸು ಎಡಕ್ಕೆ ಜಗ್ಗಿ ಕುದುರೆಯನ್ನು ಹಿಮ್ಮಖವಾಗಿಸಿದ ಹಿಂಗಾಲುಗಳಿಂದ ಅದರ ಪಕ್ಕೆಗಳನ್ನು ತಿವಿದು, ಅವನೆಂದ : “sa!" ಎಲ್ಲಿಗೆ ಎಂಬುದನ್ನು ಬಲ್ಲುದೇನೋ ಎಂಬಂತೆ, ಬಂದ ದಾರಿಯಲ್ಲೇ ಹಿಂದಕ್ಕೆ ವೇಗ వావిగి ఓడాకే డాగిలేు శుదాురి. ಶಂಕರಪ್ಪ ಅಂದುಕೊಂಡ : "ಬೆಳಗಾತ ಐಯಣ್ಣ ಕರೆ ಕಳಿಸಬಹುದು. ಮಹಾಸಾಮಿಯವರಿಂದ ಇನಾಮು ಪಡೆ ಯೋದಿರತದೆ. ಅದಕ್ಕೂ ಮೊದಲು ಮಹಾದೇವ ಮೆಚ್ಚುವ ಈ ಕೆಲಸ ಮಾಡಿ ಮುಗಿಸ బgశు." ಕಾಡಿನೆಡೆಗೆ ನಾಗಾಲೋಟದಿಂದ ಅಶ್ವ ಓಡಿದಾಗ ಮತ್ತೆ ಮತ್ತೆ ಶಂಕರಪ್ಪನಿಗೆ ಅನಿಸಿತು: "ಇದೆಲ್ಲ ಮೇಲಿರುವವನ ಆಟ. ಆ ಸೂತ್ರಧಾರನ ಕೈಯಲ್ಲಿ ನಾನೊಂದು ಆಟಿಗೆ." & ಅರಣ್ಯ ಪ್ರದೇಶವನ್ನು ಹೊಕು ತಾಣವನ್ನು ತಲಪಿದಾಗ, ವೀರಪ್ಪನ ದೇಹವನ್ನು ಕಾಣದೆ ಶಂಕರಪ್ಪ ಕಕಾವಿಕ್ಕಿಯಾದ. ನಂಜುಂಡಪ್ಪನ ಶವವೊಂದೇ ಅಲ್ಲಿ ಬಿದ್ದಿತು. ಘಾತವಾಯಿತು ಎಂದುಕೊಂಡ ಶಂಕರಪ್ಪ, ತಾನು ಈ ಮೊದಲೇ ಬರಬೇಕಾಗಿತು ; ತಡಮಾಡಿ ತಪಾಯಿತು. ಯಾವುದೋ ಕೂನ್ರಿರ ಮುಗ ರಾಜಕುಮಾರನ ಶರೀರವನ್ನು ಎಳೆದೊಯ್ದಿರಬೇಕು. ಆ ಸಾಧ್ಯತೆ ಆತ್ಮರಕ್ಷಣೆಯ ಎಚ್ಚರಕ್ಕೆ ಶಂಕರಪ್ಪನನ್ನು ಕುಲುಕಿತು. ಚಿರತೆಯೋ ಹುಲಿಯೊ ! ತನ್ನ ಮೇಲೂ ಕುದುರೆಯ ಮೇಲೂ ಅದು ಎರಗಬಹುದು... ಶಂಕರಪ್ಪನ ಕೈ ಬಿಚ್ಚುಗತ್ತಿಯನ್ನು &ంరిదా3 కిందియమితెు. ಕುದುರೆಯನ್ನೆಳೆದುಕೊಂಡು ಇಲ್ಲಿಂದ ತಾನು ಪಾರಾಗಿ ಹೋಗಲೆತ್ನಿಸುವುದಲ್ಲವೆ ವಿಹಿತ? ಒಳದನಿ ನುಡಿಯಿತು : ಅವಸಾನವೇನಾಯಿತೆಂದು ಕಣಾರೆ ಕಂಡು ಹೋಗು... ಕ್ಷಣವೊಂದು ಯುಗ... ಸದ್ದೇ ಇಲ್ಲವಲ್ಲ ವಾಘ್ರನದು? ಅಷ್ಟರಲ್ಲಿ ಮನುಷ್ಯ ಜೀವದ ಕ್ಷೀಣ ಧ್ವನಿ ಶಂಕರಪ್ಪನಿಗೆ ಕೇಳಿಸಿತು. ಆರ್ತನಾದವಲ್ಲ-ನರಳಾಟ. ಒಂದೇ ಉಸಿರಿಗೆ ಶಂಕರಪ್ಪ ಅತ್ರ ನೆಗೆದ. ಅಲ್ಲಿ ವೀರಪ್ಪ ಬೋರಲಾಗಿ ಬಿದ್ದಿದ್ದ.. ಆ ಗಂಟಲಿನಿಂದ ಧ್ವನಿ ಹೊರಟಿತು, ನರಭಕ್ಷಕನ ಸುಳಿವೇ ಅಲ್ಲಿರಲಿಲ್ಲ. ಶಂಕರಪ್ಪನಿಗೆ ಸ್ಪಷ್ಟವಾಯಿತು. ವೀರಪ್ಪನಿಗೆ ಪ್ರಜ್ಞೆ ಬಂದು, ತೆವಳುತ್ತಾ ಅತ್ತಿತ್ತ