ಪುಟ:ಸ್ವಾಮಿ ಅಪರಂಪಾರ.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಾಮಿ ఆురించిణరి ౧శీ ಸರಿಯಲು ಆತ ಯತ್ನಿಸಿರಬೇಕು ; ನಾಲು ಮಾರು ಹೋಗುವುದರೊಳಗೆ ಶಕ್ತಿ ಸಾಲದೆ ಸುಮ್ಮನಾಗಿರಬೇಕು. - ಬಿಚ್ಚುಗತ್ತಿಯನ್ನು ಉಡಿಗೆ ಸೇರಿಸಿ ಶಂಕರಪ್ಪ, ವೀರಪ್ಪನ ಶರೀರದ ಬಳಿ ಮಂಡಿ ಯೂರಿದ. ಉಸಿರಾಟವಿತು, ಕಣ್ಣವೆಗಳು ಮಾತ್ರ, ಮುಚ್ಚಿದರೆ ತೆರೆಯಲಾಗದಷ್ಟು ತೆರೆದರೆ ಮುಚ್ಚಲಾಗದಷ್ಟು, ಬಸವಳಿದಿದ್ದುವು. - ಲಗುಬಗೆಯಿಂದ ಶಂಕರಪ್ಪ, ವೀರಪ್ಪನನ್ನೆತ್ತಿ ಜೀನಿನ ಮುಂಭಾಗದಲ್ಲಿ ಕುದುರೆಯ ಕೊರಳಿಗೆ ಅಡ್ಡಲಾಗಿ ಇರಿಸಿದ. ತನ್ನ ರುಮಾಲನ್ನು ಬಿಚ್ಚಿ, ದೇಹ ಜಾರಿ ಬೀಳದಂತೆ ಕುದುರೆಯ ಕತ್ರನ್ನು ಬಳಸಿ ಅದನ್ನು ಕಟ್ಟಿದ. ಅವನ ಒಳದನಿ ನುಡಿಯಿತು : 'ನಂಜುಂಡಪ್ಪನ ಶವ ಅಲ್ಲೇ ಬಿದ್ದಿದೆ. ಒಂದಷ್ಟು ಟೊಂಗೆಗಳನ್ನು ಕಡಿದು ಹಾಕಿ ಅದನ್ನು ಮರೆಮಾಡಬಾರದೆ?' ಆ ಯೋಚನೆಗೆ ಉತ್ತರವೆನ್ನುವಂತೆ ಶಂಕರಪ್ಪ ತನ್ನಷ್ಟಕ್ಕೆ ಗೊಣಗಿದ : ಅದೇನೋ ಸರಿ. ಆದರೆ ತಡವಾಯ್ತುದೆ, ಸತ್ರವನ್ನು ಹಾಗೋ ಸತ್ರ, ಬದುಕಿರುವವನಿ ಗಾಗಿ ನನ್ನ ಕೈಲಾದಷ್ಟು ಮಾಡ್ರೀನಿ." ಕುದುರೆ ಕೆನೆದು, ಶಂಕರಪ್ಪನ ಗೊಣಗಾಟವನ್ನು ಕೊನೆಗಾಣಿಸಿತು. ಕಡಿವಾಣವನ್ನು ಕೈಯಲ್ಲಿ ಹಿಡಿದು ಶಂಕರಪ್ಪ, ದಾರಿಯತನಕ ಕುದುರೆಯನ್ನು ನಡೆಸಿ ಕೊಂಡು ಬಂದು ಅದನ್ನೇರಿದ. ಅಲ್ಲಿಗೆ ಬರುತ್ತಿದ್ದಾಗಲೇ ತಾನಿಡಬೇಕಾದ ಮುಂದಿನ ಹೆಜ್ಜೆಯನ್ನು ಆತ ನಿರ್ಧರಿಸಿದ್ದ. ಅದಕ್ಕೆ ಅನುಗುಣವಾಗಿ, ಮಡಕೇರಿಯ ದಾರಿಯಿಂದ ಬಲಕ್ಕೆ ಹೊರಳಿ, ಒಂದು ಹರದಾರಿ ದೂರದಲ್ಲಿದ್ದ ಹೊಸಳ್ಳಿಗೆ ಆತ ಕುದುರೆಯನ್ನೋಡಿಸಿದ. ಹೊಸಳ್ಳಿಯ ಮಲ್ಲಪ್ಪಗೌಡ, ಶಂಕರಪ್ಪನ ಬಂಧು. ಅವನು ಜಮ್ಮದ ರೈತ, ಊಳಿಗಕ್ಕೆ ಉಂಬಳಿಯಾಗಿ ಅರಮನೆಯಿಂದ ಪಡೆದ ಹೊಲ ಅವನದು.. ಅರಸನ ಕರೆ ಬಂದಾಗ ಖಡ್ಡ ಧಾರಿಯಾಗಿ, ಸರ್ವಕಾರಕಾರನ ಮುಂದೆ ಆತ ಉಪಸ್ಥಿತನಾಗುವ: ಹೋರಾಟವಿಲ್ಲದ ವೇಳೆಯಲ್ಲಿ ಹಳ್ಳಿಯಲ್ಲೇ ಇರುವ. - ಈಗ ಆತನ ನೆರವನ್ನು ಶಂಕರಪ್ಪ ಪಡೆಯಬೇಕು. ಬೆಳಕು ಹರಿಯಲು ಇನ್ನೂ ಎರಡು ಘಳಿಗೆ ಇದ್ದಂತೆ ಶಂಕರಪ್ಪ ಹೊಸಳ್ಳಿಯನ್ನು -ತಲಪಿದ. ಅಷ್ಟು ಹೊತ್ತಿನಲ್ಲೇ ಎದು ಒಬ್ಬಿಬ್ಬರು ರೈತರು ದೂರದ ಹೊಲಗಳಲ್ಲಿ ರೆಂಟೆ ಹೊಡೆಯತೊಡಗಿದ್ದರು. ಬೇಗ ಬೇಗನೆ ಶಂಕರಪ್ಪ, ತನ್ನ ಬಂಧುವಿನ ಸೋಗೆ ಮಾಡದ ಮನೆಯನ್ನು ಸಮಿಾಪಿಸಿದ, - ಅಡುಗೆ ಮನೆಯ ಗವಾಕ್ಷಿಯಲ್ಲಿ ಬೆಳಕು ಕಾಣಿಸುತ್ತಿತು, ಹಾಡಿನ ಸಾಲುಗಳು ಮಧುರ ಕಂಠದಿಂದ ಹೊರಟು ಮನೆಯ ಹೊರಕ್ಕೆ ನುಸುಳುತ್ತಿದ್ದುವು. ಆಡೂ ಮಕ್ಕಳ ಕಂಡು ಬೇಡಿತ್ತ ನನ ಜೀವ ! ಕೇಳಿದ್ದನೇನ ಶಿವರಾಯ ! ಕೇಳಿದ್ದನೇನ ಶಿವರಾಯ-ಹೊಟಾಗ ! ಮೂಡಿದ್ದನೇನ ಮಗ ರಾಮ I