ಪುಟ:ಸ್ವಾಮಿ ಅಪರಂಪಾರ.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

౧ళీ ಸಾಮಿ ಅಪರ೦ಪಾರ ಕುದುರೆಯಿಂದಿಳಿದ ಶಂಕರಪ್ಪನಿಗೆ ಹಾಡಿನ ಉತ್ತರಾರ್ಧ ಸ್ಪಷ್ಟವಾಗಿ ಕೇಳಿಸಿತು. ಹೊಸಳ್ಳಿ ಹತ್ತಿರವಾದಂತೆ, ತನ್ನ ಬಂಧು ಏನನ್ನುವನೋ ಎಂದು ಕಾಡಿದ್ದ ಚಿಂತೆ ಈಗ ದೂರವಾಗಿ, ಶಂಕರಪ್ಪನ ಮನಸ್ಸು ಪ್ರಸನ್ನವಾಯಿತು. ಅವನು ಮನೆಯ ಕದವನ್ನು ತಟ್ಟಿದ. "ಮಲ್ಲಪ್ಪಣ್ಣ, ಮಲ್ಲಪ್ಪಣ್ಣ !" ಒಳಗಿನಿಂದ ಪ್ರಶ್ನೆ ಕೇಳಿ ಬಂತು : "? סססכסס" ಆವರೆಗೂ ಹಾಡುತ್ತಲಿದ್ದ ಕಂಠ, ಮನೆಯೊಡತಿ ಅಕ್ಕವ್ವ, "ನಾನು ಶಂಕರಪ್ಪ, ಅತ್ತಿಗೇ.” “ఓ ! ణరి, బంది." ಮಲ್ಲಪ್ಪಗೌಡನನ್ನು ಎಬ್ಬಿಸಿ ಬಂದೇ ಅಕ್ಕವ್ವ ಹೊರಬಾಗಿಲಿನ ಅಗಣಿ ತೆಗೆದಳು. "ಬನ್ನಿ ಒಳಕ್ಕೆ, ಇದೇನು ಇಷ್ಟೊತ್ನಲ್ಲಿ ? ಕಾಲಿಗೆ ನೀರು ತರಲಾ?” "ಅಗತ್ಯದ ಜಂಬ್ರ, ಮಲ್ಲಪ್ಪಣ್ಣ ಎದ್ದರಾ?" ಮಲ್ಲಪ್ಪಗೌಡನ ಮಡದಿ ಮಬು ಬೆಳಕಿನಲ್ಲಿ ಕುದುರೆಯನ್ನು ನೋಡಿದಳು. ಅದು ಹೊತ್ತಿದ್ದ ಹೇರನ್ನು ಗಮನಿಸಿದಳು. ಯೋಚನೆ ಗಂಟಿಕ್ಕಿ ಅವಳ ಹುಬ್ಬಗಳು ಮೇಲಕ್ಕೆ ಸರಿದುವು, ಆಕೆ ಸರಕ್ಕನೆ ಒಳಹೋದಳು. ಎದ್ದ ಮಲ್ಲಪ್ಪಗೌಡನಿಗೆ 'ಅಗತ್ಯದ ಜಂಬ್ರ' ಎಂಬ ಮಾತು ಕೇಳಿಸಿತು, ಆತ, ಪಂಚೆ ಯನ್ನು ನಡುವಿಗೆ ಬಿಗಿದು, ಅಂಗವಸ್ತ್ರವನ್ನು ಭುಜದ ಮೇಲೆ ಹಾಕಿಕೊಂಡು, "ಬಾ, ಶಂಕರಪ್ಪ" ಎನ್ನುತ್ರ ಹೊಸ್ತಿಲನ್ನು ದಾಟಿ ಬಂದ. ಪಿಸುದನಿಯ ಕೆಲವೇ ಮಾತುಗಳಲ್ಲಿ ಶಂಕರಪ್ಪ ತನ್ನ ಬಂಧುವಿಗೆ ವಿಷಯವನ್ನು ತಿಳಿಸಿದ. ಮಲ್ಲಪ್ಪನ ಮುಖವನ್ನು ಮೋಡ ಕವಿದುದನಾಗಲೀ ಒಂದು ಕ್ಷಣ ಆತ ಅಧೀರ ನಾದುದನಾಗಲೀ ಶಂಕರಪ್ಪ ಗಮನಿಸಲಿಲ್ಲ, ಗಮನಿಸುವ ಸ್ಥಿತಿಯಲ್ಲೇ ಅವನಿರಲಿಲ್ಲ. ಶಂಕರಪ್ಪನೆಂದ: "ನಿನ್ನನ್ನೇ ನೆಚೊಂಡು ಬಂದೆ, ಮಲ್ಲಪ್ಪಣ್ಣ." ಮಲ್ಲಪ್ಪ ಉಗುಳುನುಂಗಿ ಪ್ರಯತ್ನಪೂರ್ವಕವಾಗಿ ಧ್ವನಿ ಹೊರಡಿಸುತ್ತ ಅಂದ : "ಹಿಡಕೊ.. ಒಳಕ್ಕೆ ಒಯಾನ." - ర్చేన్నే బిట్జ్మీ, ವೀರಪ್ಪನನ್ನು ಅವರಿಬ್ಬರೂ ಮನೆಯೊಳಕ್ಕೆ–ಒಳ ಕೊಠಡಿಗೆ-- ఒయ్చరు. ఆర్మేచె ದೀಪ ತಂದಿರಿಸಿದಳು. ವೀರಪ್ಪನಿಗೆ ಮತ್ತೆ ಪ್ರಜ್ಞೆ ತಪ್ಪಿತು, ತೀರಿಯೇ ಹೋದನೇನೋ ಎಂಬ ಶಂಕೆ ಶಂಕರಪ್ಪನಿಗೆ. .ಇಷ್ಟು ಪ್ರಯಾಸಪಟ್ಟದಷ್ಟೂ ಯರ್ಥ ಆಯಿತೇ..." ಮಲ್ಲಪ್ಪನೆ೦ದ : "ಇರು, ನೋಡಾನ." ಪತ್ನಿಯನ್ನುದ್ದೇಶಿಸಿ ಆತ ನುಡಿದ: