ಪುಟ:ಸ್ವಾಮಿ ಅಪರಂಪಾರ.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಸ್ವಾಮಿ ಅಪರಂಪಾರ ೧೩೩ ಅದು, ವೇಲೂರಿನ ಕಲೆಕ್ಟರ್ ಮದರಾಸಿನ ಗವರ್ನರನಿಗೆ ಕಳುಹಿಸಿದ ವರದಿಯ 'ತಾಜಾ ನಕಲು.'

"ಇದನ್ನು ಕುರಿತು ವಿಚಾರಿಸಿ ಬರೆ” ಎಂದು ಷರಾ ಬರೆದಿದ್ದ, ಮದರಾಸಿನ ಗವರ್ನರ್.ವರದಿಯಲ್ಲಿ ಕಾಸ್ಸಾಮೇಜರನಿಗೆ ಸಂಬಂಧಿಸಿ ಇದ್ದ ಅಂಶವಿದು;                                 "ಇಬ್ಬರು ಫಕೀರರು-ಇವರನ್ನು ಜಂಗಮರೆಂತಲೂ ದಾಸರೆಂತಲೂ ಕರೆಯುತ್ತಾರೆ –ನಿನ್ನೆ ದಿವಸ ಇಲ್ಲಿಗೆ ಬಂದರೆಂದೂ ಭಿಕ್ಷುಕರಾದ್ದರಿಂದ ಕೋಟೆಯನ್ನು ಪ್ರವೇಶಿಸಲು ಅವರಿಗೆ ಪರವಾನಿಗಿ ಕೊಡಲಾಯಿತೆಂದೂ ಕೊಡಗಿನ ಮಾಜೀ ಅರಸ ಹಾಗೂ ಪ್ರಸ್ತುತ ನಮ್ಮ ಕೈದಿಯಾಗಿರುವ ಚಿಕವೀರರಾಜೇಂದ್ರನ ಜತೆ ಆ ಇಬ್ಬರು ಒಂದು ದಿನ ಇದ್ದರೆಂದೂ ತಿಳಿದುಬಂದಿದೆ. ಸಂಶಯ ಬಂದು ವಿಚಾರಿಸಲಾಯಿತು. ಒಬ್ಬ ಅಪರಂಪಾರಸ್ವಾಮಿಯೆಂದೂ ಇನ್ನೊಬ್ಬ ಅವನ ಶಿಷ್ಯನೆಂದೂ ಇಬ್ಬರೂ ಕೊಡಗಿನವರೆಂದೂ ತಿಳಿದುಬಂತು. ಇವರು ಲಯಕರ್ತನಾದ ಶಿವನ ಭಕ್ತರೆಂದೂ ಯಾವುದಾದರೂ ಮನೆ ಹೊಕ್ಕರೆ ಪೂಜೆಗೆ ನಿಂತುಹೋಗುವುದು ಪದ್ಧತಿಯೆಂದೂ ತಿಳಿಯಿತು. ಚಿಕವೀರರಾಜನ ಜತೆ ನಡೆದಿರಬಹುದುದಾದ ಮಾತುಕತೆಯ ಬಗ್ಗೆ ಏನೂ ಗೊತ್ತಾಗಲಿಲ್ಲ. ರಾಜನ ಪರಿವಾರದವರು 'ನಾವು ಯಾವ ಪಾಪವನ್ನೂ ಕಾಣದವರು, ಕೇಳದವರು, ಆಡದವರು' ಎಂಬಂತೆ ವರ್ತಿಸುತ್ತಾರೆ. ಸದ್ಯಕ್ಕೆ ಗೊತ್ತಾಗಿರುವುದು ಇಷ್ಟೇ ಆದರೂ, ಖಾವಂದರ ಗಮನಕ್ಕೆ ತರುವುದು ಉಚಿತವೆಂದು ಇಲ್ಲಿ ಬರೆಯಲಾಗಿದೆ.”
ಕಾಸ್ಸಾಮೇಜರ್ ಮುಖ್ಯ ಕಾರಕೂನನನ್ನು ಕರೆದು ಆಜ್ಞಾಪಿಸಿದ :
"ಇದರದೊಂದು ತಾಜಾ ನಕಲನ್ನು ಮಡಕೇರಿಗೆ ರವಾನಿಸಬೇಕು. ಇದನ್ನು ಕುರಿತು ವಿಚಾರಿಸಿ ತಿಳಿಸುವಂತೆ - ಎಂದು ಷರಾ ಬರೆಯಬೇಕು." 
ಮಡಕೇರಿಯಲ್ಲಿ ಫ್ರೇಸರನ ಬದಲು ಕ್ಯಾಪ್ಟನ್ ಲೀಹಾರ್ಡಿ ಕಮಿಾಷನರಾಗಿ ಅಧಿಕಾರ ಸ್ವೀಕರಿಸಿದ್ದ. ಕೊಡಗಿನಲ್ಲಿ ತಮಗೆ ನಿಷ್ಪರಾಗಿರುವ ಪ್ರಮುಖರ ಬಗೆಗೆ ಫ್ರೇಸರ್ ಸಾಕಷ್ಟು ತಿಳಿವಳಿಕೆ ಕೊಟ್ಟಿದ್ದನಾದರೂ ಲೀಹಾರ್ಡಿಗೆ ಹೆಜ್ಜೆ ಹೆಜ್ಜೆಗೂ ಅಳುಕು. ಚೆಪ್ಪುದೀರ ಪೊನ್ನಪ್ಪ ಮತ್ತು ಅಪ್ಪಾರಂಡ ಬೋಪಣ್ಣ ಲೀಹಾರ್ಡಿಯ ದಿವಾನರು. ಸಾತ್ವಿಕನಾದ ಲಕ್ಷ್ಮೀನಾರಾಯಣನನ್ನು ನಂಬಿಕೆಗೆ ಅರ್ಹನಲ್ಲವೆಂದು ಫ್ರೇಸರ್ ಆಗಲೇ ಮೂಲೆಗೆ ತಳ್ಳಿದ್ದ. ಲೀಹಾರ್ಡಿಗೆ ತನ್ನ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಭಡತಿಗೆ ಪಾತ್ರನಾಗಬೇಕೆಂಬ ಆಸೆ. ಆದರೆ ದೇಶೀಯರ ಮೋಸದ ಯಾವ ಕಂದಕದಲ್ಲಿ ಬಿದ್ದು ತಾನು ಹೆಳವನಾಗುವೆನೋ ಎಂಬ ದಿಗಿಲು. 
'ಇದನ್ನು ಕುರಿತು ವಿಚಾರಿಸಿ ತಿಳಿಸು.'

–ಕಾಸ್ಸಾಮೇಜರನ ಆದೇಶ.

'ಯಾರಿವನು ಈ ಸ್ವಾಮಿ ?'

ಬೋಪಣ್ಣನೆಂದ:

"ಅಪರಂಪಾರ ಎಂದೆ? ಆ ಹೆಸರು ಕೇಳಿದ್ದ ನೆನಪು. ಚಿಕವೀರರಾಜನ ದಾಯಾದಿ

ವೇಷಧಾರಿ ಜಂಗಮನಾಗಿದಾನೆ ಅಂತ ಪುಕಾರು ಹುಟ್ಟಿತು. ಕಡೆಗೆ ಅಲ್ಲ ಅಂತಾಯು.." ಪೊನ್ನಪ್ಪನೆಂದ :

"ದಾಯಾದಿಯೊ, ದಾಯಾದಿಯ ಅಪ್ಪನೊ, ಹಿಡಿದುತಂದು ಗತಿಕಾಣಿಸಿದರಾಯ್ತು...”