ಪುಟ:ಸ್ವಾಮಿ ಅಪರಂಪಾರ.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ




                                               ಸ್ವಾಮಿ ಅಪರಂಪಾರ                 ೧೩೭                  
        ದುಭಾಷಿ  ನಿವೇದಿಸಿದ :
        "ನಿಮಗೆ ಜ್ವರ ಬಂದಿದೆ : ಹಾಲು ಕೊಟ್ಟರೆ ಬೇಡ ಅನ್ನುತೀರಿ ಅಂತಾನೆ." 
        "'ಹುಚ್ಚಚ್ಚಾರ ! ನನಗೆಲ್ಲಿಯ ಜ್ವರ ? ಇಂಗ್ರೇಜಿ ಸರಕಾರದ ದೌಲತ್ತಿನ ಮುಂದೆ ಈ 
   ಪಿಟಿಪಿಟಿ ?"
        ಸಿದ್ದಲಿಂಗನೆಂದ :
        "'ದೌಲತ್ತು  ? ಅಯ್ಯಾ , ನಿಮ್ಮ ಕರಸ್ಥಲದ ಘನ ನಿಮ್ಮಲ್ಲಿರಲಿ, ಅಯ್ಯಾ ನಿಮ್ಮ ಪರ
    ಸ್ಥಲದ ಘನ ನಿಮ್ಮಲ್ಲಿರಲಿ !"
        "ಏನೆನ್ನುತಿದಾನೆ ಈತ ?"
         ದುಭಾಷಿ ಅರಿಕೆ ಮಾಡಿದ : 
        "ಅದೊಂದು ಶಿವಶರಣರ ವಚನ , ಖಾವಂದರೇ, ತಾವು ಪರಸ್ಥಲದವರು ಎನ್ನುತ್ತಾನೆ."
         ಸಿದ್ದಲಿಂಗ ಕೇಳಿದ:
         ಸ್ವಾಮಿಗಳ ಪತ್ರಕ್ಕೆ ಉತ್ತರವಿಲ್ಲವೇನು ?"
         "'ಉತ್ತರ ನಮ್ಮ ಸೈನಿಕರು ಕೊಡುತಾರೆ"  ಎಂದ ಕಾಸ್ಸಾಮೇಜರ್.
         "'ಹಾವಿನ  ಬಾಯಕಪ್ಪೆ, ಹಸಿದು,  ಹಾರುವ ನೊಣಕ್ಕೆ ಆಸೆ ಮಾಡುವಂತೆ ಶೂಲವ
   ನೇರುವ ಕಳ್ಳನು ಹಾಲು ತುಪ್ಪವ ಕುಡಿದು ಮೇಲೇಸು ಕಾಲ ಬದುಕುವನೊ ? ಕೆಡೆ ಒಡಲ
   ನೆಚ್ಚಿ ಕಡು  ಹುಸಿಯನೆ ಹುಸಿದು ಒಡಲ ಹೊರೆವವರ ಕೂಡಲ ಸಂಗಮದೇವಯ್ಯ
   ನರನೊಲ್ಲ ಕಾಣಿರಣ್ಣ."
        ದುಭಾಷಿಯೆ೦ದ :
        "ಇದೂ ಒಂದು ವಚನ, ಸಾಹೇಬರೇ,   ತಮ್ಮನ್ನು  ಅದು  ಟೀಕಿಸತದೆ."
       "'ನಮ್ಮನ್ನು  ಟೀಕಿಸುತದೆ ! ಹುಂ ! ಕಂಪನಿಯ ರಾಯಭಾರಿ ಕುಲಪಟ್ಟಿ ಕರುಣಾಕರ
   ಮೆನೊನನ್ನು ಕೊಡಗಿನ ಅರಸ ಚಿಕವೀರರಾಜೇಂದ್ರ ಬಂಧಿಸಿಟ್ಟಿದ್ದ. ಈಗ ನಿನ್ನನ್ನು ನಾವು
   ಬಂಧನದಲ್ಲಿಡುತೇವೆ."
        "'ನನಗೆ ಗೊತ್ತಿರುವ ಹಾಗೆ ಮೆನೊನ್ ಗೂಢಚರ್ಯೆ ಮಾಡಿದ. ನಾನಾದರೋ ಓಲೆ  
   ಹೊತ್ತ ದೂತನಾಗಿ ಬಂದಿದೇನೆ."
        "ಓಲೆಯಾ ? ಅಲ್ಲ ?  ಇದು ಬಂಡಾಯ ಪ್ರದರ್ಶನ.  ಯಾರಲ್ಲಿ ? ಈ ಫಕೀರನನ್ನು 
   ಬಂಧಿಸಿ ಸೆರೆಯಲ್ಲಿಡಿ !"
         "ಶಿವ, ಶಿವ, ಶಿವ ! ಎಂದ, ಸಿದ್ಧಲಿಂಗ. ಒಂದು ಕ್ಷಣ ಅವನ ಪಾದಗಳು ತಣ್ಣ
   ಗಾದುವು.  ಆದರೂ ಅಧೀರನಾಗದೆ ಆತ ನಿ೦ತ.
          ಸಶಸ್ತ್ರ ಕಾವಲುಗಾರರು ಒಳಬಂದು,  ಸಿದ್ದಲಿಂಗನ  ಎರಡೂ  ರಟ್ಟೆಗಳನ್ನು  ಹಿಡಿದು
    ಹಿಂದಕ್ಕೆ ಜಗ್ಗತೊಡಗಿದರು.
          ಸಿದ್ದಲಿಂಗ ಕೂಗಿ ನುಡಿದ:
           "ದರ್ಪಿಷ್ಟನಾದ  ಕುಂಪಣಿ  ಚಾಕರ ! ಇದರ ಫಲ ನೀನು ಉಣ್ಣತೀಯೆ ! ಜೋಕೆ !" 
          ಕಾಸ್ಸಾಮೇಜರ್ ಕರ್ಕಶವಾಗಿ ಅಂದ:
           "ತೊಲಗಾಚೆ !"
           ಹೊರಗೆ ಸೆರೆಮನೆಯ ಕಡೆಗೆ ನಡೆಯುತ್ತ, ಕೈಗಳಿಗೆ ತೊಡಿಸಿದ ಸಂಕೋಲೆಗಳ