ಪುಟ:ಸ್ವಾಮಿ ಅಪರಂಪಾರ.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ




         ೧೩೮                   ಸ್ವಾಮಿ   ಆಪರ೦ಪಾರ
         ಝಣತ್ಕಾರದ ಹಿನ್ನೆಲೆಯಲ್ಲಿ,  ಸಿದ್ದಲಿಂಗ ತನಗೆ ತಾನೇ ಅಂದುಕೊಂಡ :
             "ಅಂಜಬೇಡ, ಅಳುಕಬೇಡ.  ಹೋದವರಾರು ? ಇದ್ದವರಾರು ? ಎಲೆ ಮರುಳೆ !"
             ...ಕಾಸ್ಸಾಮೇಜರ್ ದುಭಾಷಿಗೆ ನಿರ್ದೇಶಗಳನ್ನಿತ್ತ್ತ :  
             "ಆ ಸ್ವಾಮಿಯ ಪತ್ರ ಇಂಗ್ಲೀಷಿಗೆ ತರ್ಜುಮೆಯಾಗಲಿ.  ಒಂದು ಪ್ರತಿಯನ್ನು
        ಮದರಾಸಿನ  ಗವರ್ನರರಿಗೂ ಇನ್ನೊಂದನ್ನು ಮಡಕೇರಿಗೂ ಕಳಿಸಬೇಕು. ಕಾಜಗೋಡಿಗೆ
        ನಮ್ಮ ಗೂಢಚಾರರು ಹೋಗಿ ಅಲ್ಲೇನು ನಡೀತದೆ ಅಂತ ವರದಿ ತರಲಿ."
              ...ಬಸಪ್ಪಾಜಿ  ಅರಸು ಬೆಟ್ಟವನ್ನೇರಲಿಲ್ಲ. ಒಬ್ಬ ಅಯ್ಯನನ್ನು ಸೆರೆಮನೆಗೆ ಸೇರಿಸಿದ 
        ರೆಂಬ  ವಾರ್ತೆ ಸಂಜೆಯಾಗುವ ಮೊದಲೇ ಆತನಿಗೆ ತಲಪಿತ್ತು.
            ಆ ಸುದ್ದಿಯನ್ನು  ಕಾಜಗೋಡಿಗೆ ಮುಟ್ಟಿಸುವುದಕ್ಕೋಸ್ಕರ  ಒಬ್ಬ. ದೂತನನ್ನು
        ಕಳುಹಬೇಕೆಂದು ಆತ ನಿರ್ಧರಿಸಿದ.
                                                    ೪೮
         ಮೈಸೂರಿನಿಂದ ಬಂದ ಸುದ್ದಿ ಅನಿರೀಕ್ಷಿತವಾಗಿರಲಿಲ್ಲ, ಆದರೂ, ಸಿದ್ಧಲಿಂಗ ನಿಜ
  ವಾಗಿಯೂ ಬಂಧಿತನೆಂದು, ಇನ್ನು ಬಹಳ ಕಾಲ ಆತನ ಒಡನಾಟವಿರದೆಂದು,
  ಅಪರಂಪಾರನಿಗೆ ತುಸು ಬೇಸರವಾಯಿತು. ಹೊರಗೆ ಅದನ್ನು ತೋರಗೊಡದೆ, ಅಪ್ಪಯ್ಯ
   ಮತ್ತು ಇತರ ಹಿಂಬಾಲಕರೆದುರು ಅಪರಂಪಾರ ನುಡಿದ :
         "ಪೀಠಿಕಾ ಪ್ರಕರಣ ಇಲ್ಲಿಗೆ ಮುಗಿದಂತಾಯಿತು. ಇನ್ನು ಮೊದಲ ಪರ್ವ."
      ಆಂಗ್ಲರ ಆಡಳಿತ ಕೊಡಗಿನಲ್ಲಿ ಕೇಂದ್ರೀಕೃತವಾಗಿದ್ದುದು ಮಡಕೇರಿಯಲ್ಲಿ, ಅವರ
  ದೊಂದು ರೆಜಿಮೆಂಟು ಅಲ್ಲಿ ಸ್ಥಿರವಾಗಿ ತಳವೂರಿತ್ತು.  ಆಕ್ರಮಣಕಾಲದಲ್ಲಿ ಬಂದಿದ್ದ
  ಪಡೆಗಳು ಹಿಂದಕ್ಕೆ ತೆರಳಿದ್ದುವು, ಹಿಂದೂಸ್ಥಾನದ ಇತರ ಅಳಿದುಳಿದ ಸ್ವಾತಂತ್ರ್ಯ  ದುರ್ಗ 
  ಗಳಿಗೆ ಲಗ್ಗೆ ಇಡುವುದಕ್ಕೋಸ್ಕರ, ಪೊನ್ನಪ್ಪ ಬೋಪಣ್ಣರ ಮೂಲಕ, ಅವರಿಗೆ ನಿಷ್ಕರಾದ
  ನಾಡುಗಳ ತಕ್ಕರನ್ನೂ ಕಾರ್‍ಯಕಾರರನ್ನೂ ಹಾದು, ಹೋಬಳಿ ಗ್ರಾಮಗಳಿಗೆ ಪರಕೀಯ
  ಅಧಿಕಾರದ ಜೇಡಬಲೆ ಹರಡಿತ್ತು, ಆದರೆ ಅವು ಅಗೋಚರ ತಂತುಗಳು. ಅಂಟಿಕೊಂಡಿ
  ದ್ದುದು ನೆಲಕ್ಕೆ, ಆಳುವವರಿಗೆ ಬೇಕಾಗಿದ್ದುದು ಆ ಫಲವತೃದೇಶದ ಉತ್ಪನ್ನದ ಸಿಂಹ
  ಭಾಗ. ಸಾಮಾಜಿಕ ಮತ್ತಿತರ ಕಟ್ಟುಕಟ್ಟಳೆಗಳನ್ನು ಪಾಲಿಸುತ್ತೇವೆ ಎಂದಿದ್ದರಲ್ಲ ? ಅದು
  ಪೊಳ್ಳು ಭರವಸೆ ಎಂಬುದು ಸ್ವಲ್ಪ ಸಮಯದಲ್ಲೇ ಪ್ರಜೆಗಳಿಗೆ ಮನದಟ್ಟಾಯಿತು. ಇನ್ನು
  ಬಳ್ಳಗಳಲ್ಲಿ  ಭತ್ತ  ಅಕ್ಕಿಗಳನ್ನು ಅಳೆದುಕೊಟ್ಟರಾಗದು; ಕಂದಾಯ ಹಣದ ರೂಪದಲ್ಲಿ
  ಸಂದಾಯವಾಗಬೇಕು ಎಂದರು ಆಂಗ್ಲರು. ಆ ಹೊಸ ವ್ಯವಸ್ಥೆಗೆ ಒಪ್ಪಿದರೆ ರೈತ
  ಜೀವಚ್ಛವವಾಗಬೇಕು. ಉತ್ಪನ್ನವಾದ ಕಾಳನ್ನೆಲ್ಲ ವರ್ತಕರಿಗೆ ಮಾರಿದರೂ ಕಂದಾಯ
  ತೆರಲು ಬೇಕಾದ ಹಣ ಹುಟ್ಟುತ್ತಿರಲಿಲ್ಲ. ಜನರು ಹಿಂದಿನಿಂದ ನಡೆದು ಬಂದಿದ್ದ
  ಭೂವ್ಯವ ಸೆಥ್  ಯನ್ನು --'ಲಂಗರಾಜನ ಕೋಲು' ' ಲಂಗರಾಜನ ಶಿಸುತ್ತ 'ಗಳನ್ನು--ಸ್ಮರಿಸಿ
  ಕೊಂಡು, ಇಂಥ ದುರ್ಗತಿಯೊದಗಿತಲ್ಲ ಎಂದು ಗೋಳಾಡಿದರು.
       ಕೊಡಗಿನಲ್ಲಿ, ಕೊಡಗಿನ ಭಾಗವಾದ ಘಟ್ಟದ ಕೆಳಗಿನ ನಾಲ್ಕು ಮಾಗಣೆಗಳಲ್ಲಿ, ಅಶಾಂತಿ
  ಹೊಗೆಯಾಡಿತು.
       ಆಗ  ಕೇಳಿಸಿತು ಅಪರಂಪಾರನ ವಾಣೆ :