ಪುಟ:ಸ್ವಾಮಿ ಅಪರಂಪಾರ.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



                                      ಸ್ವಾಮಿ ಆಪರಂಪಾರ                           ೧೩೯
      "ಜಲದ ಮಂಟಪದ ಮೇಲೆ ಉರಿಯ ಚಪ್ಪರವನ್ನಿಕ್ಕಿ, ಅದರಲ್ಲಿ ಆಲಿಕಲ್ಲ ಹಸೆಯ
  ಹಾಸಿದರೇನು ಬಂತು ? ಇದ್ದ ಸುಖ ನಷ್ಟವಾಯ್ತೆಂದು ಅತ್ತರೇನು ಬಂತು ? ಸುಮ್ಮನೆ
  ಕಾಲವನು ಕಳೆದು ಸಾವುದುಚಿತವೆ ? ಪಡೆವೆ ನೀನೆಂದಿಗೆ ವರ ಮುಕ್ತಿ ಸುಖವನು ? ಕೆಡುವ
  ಕಾಯದ ಮೋಹವನು ಮಾಣು ಮನುಜ !"
       ಜನತೆ ಕಿವಿಗೊಟ್ಟು ಆಲಿಸಿತು.
       ಅಪರಂಪಾರನೆ೦ದ :
       "ಕರಿಯಂಜುವುದು ಅಂಕುಶಕ್ಕಯ್ಯ,  ಗಿರಿಯಂಜುವುದು ಕುಲಿಶಕ್ಕಯ್ಯ,  ತಮಂಧ 
  ವಂಜುವುದು ಜ್ಯೋತಿಗಯ್ಯ.  ಕಾನನವಂಜುವುದು ಬೇಗೆಗಯ್ಯ.  ಪಂಚಮಹಾಪಾತಕ
  ವಂಜುವುದು ಕೂಡಲ ಸಂಗಮನ ನಾಮಕ್ಕಯ್ಯ,  ಪರಕೀಯ ಮರ್ಕಟನಂಜುವುದು
  ಕಾವೇರಿ ಮಕ್ಕಳ ಠೇಂಕಾರ ಹೂಂಕಾರಕ್ಕಯ್ಯ."
        ನಿಜವೆಂದು ಪ್ರಜೆಗಳು ತಲೆದೂಗಿದರು. ಕೊಡಗಿನ ವಿವಿಧ ನಾಡುಗಳಿಗೆ ಪ್ರತಿಭಟನೆಯ 
  ಸಂದೇಶ ಮುಟ್ಟಿಸಲೆಂದು ಅಪರಂಪಾರ ಯಾತ್ರೆ ಕೈಗೊಂಡ.
       ಕೊಡ್ಲಿಪೇಟೆ ; ಅಲ್ಲಿಂದ ಸೋಮವಾರಪೇಟೆ...
       ಅಪರಂಪಾರನೂ ಅವನ ಸಂಗಡಿಗರೂ ಹೋದಲ್ಲೆಲ್ಲ ಅಭೂತಪೂರ್ವ ಸ್ವಾಗತ ದೊರೆ
  ಯಿತು.  ಸ್ವಾಮಿ ಅಪರಂಪಾರ ಕೊಡಗಿನ ವಿಮೋಚನೆಗೆಂದೇ ಅವತರಿಸಿರುವ ಮಹಾ
  ಮಹಿಮ ಎoದು ಜನ ಹೊಗಳಿದರು.
    ಅವರಿಗೆ  ಅಪರಂಪಾರನೆಂದ : 
    "ನಾನು ಘನ ತಾನು ಘನವೆಂಬ ಹಿರಿಯರು೦ಟೆ ? ಜಗದೊಳಗೆ ಹಿರಿಯರ ಹಿರಿತನ
  ದಿಂದೇನಾಯ್ತು ?  ಹಿರಿದು ಕಿರಿದೆಂಬ ಶಬ್ದವಡಗಿದರೆ ಆತನೆ ಶರಣ, ಗುಹೇಶ್ವರಾ."
       ವಿವರಿಸುತ್ತ  ಆತ ನುಡಿದ :
        "ಸಮುದ್ರ ಘನವೆಂಬೆನೆ ? ಧರೆಯ ಮೇಲಡಗಿತ್ತು,  ಧರೆ ಘನವೆಂಬೆನೆ ? ನಾಗೇಂದ್ರನ
  ಫಣಾಮಣಿಯ ಮೇಲಡಗಿತ್ತು,  ನಾಗೇಂದ್ರ  ಘನವೆಂಬೆನೆ ? ಪಾರ್ವತಿಯ ಕಿರುಕುಣಿಯ
  ಮುದ್ರಿಕೆಯಾಯಿತ್ತು.  ಅಂಥ ಪಾರ್ವತಿ ಘನವೆಂಬೆನೆ ? ಪರಮೇಶ್ವರನ ಅರ್ಧಾಂಗಿ.
  ಯಾದಳು.  ಹಾಗಾದರೆ ಯಾವುದಪ್ಪ ಘನ ? ಹಿರಿತನದ ಮಾತು ಬೇಡಿ, ಮರುಳರಿರಾ ! 
  ಈ ಘಳಿಗೆಯಲ್ಲಿ ನಾವೊಂದು, ನಾಡೊಂದು. ಗುರಿ ಒಂದೇ! ಬಂದವರನ್ನು ಹೊರಕ್ಕಟ್ಟ
   ವುದು."
     ಜನರೆಂದರು : 
     "ಅಪ್ಪಣೆಯಾದರೆ ಈಗಲೇ ಈ ಕ್ಷಣವೇ ನಿಮ್ಮ ಜತೆ ಹೊರಡುತೇವೆ."
     ಅಪರಂಪಾರನೆಂದ :
     "ಮನೆಮನೆಯ ಪಣತೆಗೆ ತೈಲ ಸುರಿಯುತಿದೇವೆ.  ಬತ್ತಿ ನೆನೆಯಲಿ,  ಸೊಡರು
  ಮುಟ್ಟಿಸುವ ಹೊತ್ತು ಬಂದಾಗ ಕೂಗಿ ಹೇಳುತೇವೆ. ಗಿರಿಗೆ  ಗಿರಿ, ಕಾನನಕ್ಕೆ ಕಾನನ,
  ಮಾರ್ದನಿ ಕೊಡತವೆ. ಆಗ ಏಕಕಾಲದಲ್ಲಿ ಸಹಸ್ರ ಸಹಸ್ರ ಜ್ಯೋತಿಗಳು ಕೊಡಗನ್ನು
  ಬೆಳಗುತವೆ." 
       ...ಹಾರಂಗಿಯಲ್ಲಿ ದಳವಾಯಿ ವೆಂಕಟಪ್ಪ,ತಾನೂ ತನ್ನ  ಕೈ  ಕೆಳಗಿನ ಚಾವಡಿಕಾರರೂ.
   ಸ್ವಾಮಿಗಳನ್ನು ಸೇರುವುದಾಗಿ ಘೋಷಿಸಿದ.