ಪುಟ:ಸ್ವಾಮಿ ಅಪರಂಪಾರ.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

Ꮿ❍ᏄᎮ© - ಸ್ವಾಮಿ ಅಪರಂಪಾರ


ಆಪರಂಪಾರ ನುಡಿದ:

ನಮ್ಮವರೆಲ್ಲ ಅಲ್ಲಲ್ಲೇ ತಂಗಿರಲಿ. ಹಾಲೇರಿ__ಹೊಸಳ್ಳಿ__ಮಡಕೇರಿ ಕಡೆ ನಾವೊಮ್ಮೆ 

ಹೊಗಿಬರಬೇಕು. ಒನ್ತತಟಿಯಾಗಿಯೇ ಹೋಗುವುದು ಮೇಲು."

ವೆಂಕಟಪ್ಪ ವಿಸ್ಮಿತನಾದ.
"ಮಡಕೇರಿಗೂ ಹೋಗಬೇಕೆನ್ನುತೀರಾ? ಸಿಂಹ ಅಲ್ಲೇ ಅದೆಯಲ್ಲ!"
"ಅದರ ಕೂಡೆ ಕುಸ್ತಿಗೆ ಹೋಗತೇವೆ ಅಂದುಕೊಂಡಿರಾ? ನಾವು ಗುಪ್ತವಾಗಿರತೇವೆ."
ಅಪ್ಪಯ್ಯನೆಂದ: 

"ಅಂಗರಕ್ಷಕರಾಗಿ ಇಬ್ಬರು ಭಟರು ಜತೆಗಿರಲಿ. ಸ್ವಾಮಿಯವರು ಒಪ್ಪುವುದಾದರೆ

ಅವರು ಕಾವಿಯುಟ್ಟ ವೇಷ ಮರೆಸಿಕೊಳ್ಳುತಾರೆ."

"ನಮ್ಮ ಅಭ್ಯಂತರವಿಲ್ಲ." ...ಹಾಲೇರಿ ನಾಡಿನಲ್ಲಿ ಪ್ರಮುಖರೊಂದಾಗಿ, "ಅರಮನೆಯ ಅನ್ನ ತಿಂದಿದೇವೆ. ಕೃತಘ್ನರಾದೇವಾ? ಯಾವಾಗ ಬೇಕೋ ಆಗ ಬರುತೇವೆ. ತಯಾರಾಗಿರುತೇವೆ" ಎಂದು ವಚನವಿತ್ತರು. ...ಅಪರಂಪಾರನನ್ನು ಇದಿರ್ಗೊಂಡ ಸಂಜೆ, ಹೊಸಳ್ಳಿಯ ಮಲ್ಲಪ್ಪಗೌಡ ಪರಮ ಸುಖಿ. ಅಶ್ರುಧಾರೆ ಬತ್ತದ ತೊರೆಯಾಯಿತು. ಅಕ್ಕವ್ವನೂ ಆನಂದಬಾಷ್ಪ ಸುರಿಸುತ್ತ ಓಡಾಡಿದಳು. ಅವಳು ಬಾರಿಬಾರಿಗೂ ಅಂದಳು: "ಬಂದಿರಾ ದೇವರೇ? ಬಂದಿರಾ ನಮ್ಮಪ್ಪ ?" ನೋಡಿದವರು ತಲೆಬಾಗುವಂತೆ ಮಾಡುವ ಈ ಹಿರಿಯ ವ್ಯಕ್ತಿಯೆಲ್ಲಿ? ಗಂಜಿ ನೀರು ಕುಡಿಸಿ ತಾನೂ ಬದುಕಿಸಿದ ಆ ಬಡಜೀವವೆಲ್ಲಿ ?'ದೊರೆ ಮಗನಿಗೆ ಶಿವಮರಳು' ಎನಿಸಿತ್ತು ಆಗ. ಈಗಲೋ? ಲೋಕವನ್ನೆ ಮರುಳುಗೊಳಿಸುವ ಮಾಂತ್ರಿಕ ಮಹಾನುಭಾವ ಆತ. ಮಲ್ಲಪ್ಪಗೌಡನಿಗೆ ದೊಡ್ಡ ಔತಣವೇರ್ಪಡಿಸಬೇಕೆಂಬ ಆಸೆ. ಆದರೆ, ಅದು ಈಗ

ಸಲ್ಲದೆಂದು ಆತ ಬಲ್ಲ. ಆಂಗ್ಲರ ಅಭಿಯೋಗಕ್ಕೆ ಮುನ್ನ ಸಿದ್ಧಲಿಂಗ ಅಯ್ಯ ಬಂದಿದ್ದಾಗಲೇ
ಮಲ್ಲಪ್ಪಗೌಡನಿಗೆ ಮನದಟ್ಟಾಗಿತ್ತು-—ಅಪರಂಪಾರಸ್ವಾಮಿ ತುಳಿಯುತ್ತಿರುವುದು ಕಂಟಕ
ತುಂಬಿದ ದಾರಿಯನ್ನು ಎಂಬುದು.

ಅಕ್ಕವ್ವನನ್ನು ಅಪರಂಪಾರ ಕೇಳಿದ: "ಹಡೆದವ್ವ, ಭಿಕ್ಷೆ ಕೇಳೋಕೆ ಬಂದಿದೇನೆ." ಆಕೆ ಮುಗ್ಗೆ. "ಎಂಥ ಮಾತು ಸೋಮಿಯೋರೆ! ಇಲ್ಲಿ ಇರುವುದೇಲ್ಲಾ ನಿಮ್ಮದೇ ಅಲ್ಲವಾ?" "ಮಲ್ಲಪ್ಪನನ್ನು ನನಗೆ ಕೊಡು.ಒಂದೆರಡು ವರ್ಷದ ಮಟ್ಟಿಗೆ. ಆಮೇಲೆ ತಂದು

ಒಪ್ಪಿಸುತೇನೆ." 

ಮಗ್ಧೆಯೀಗ ದಿಟ್ಟೆ. "ಸಂತೋಸವಾಗಿ ಕಳಿಸಿಕೊಡತೇನೆ.ಸೋಮಿಯೋರೆ. ಮಹಾದೇವ ನನ್ನ ಮಾಂಗಲ್ಯ ಕಾಯುತಾನೆ." ...ಇರುಳಿನ ರಕ್ಷೆಯಲ್ಲಿ ಅವರು ಮಡಕೇರಿಯನ್ನು ತಲಪಿದರು. ಓಂಕಾರೇಶ್ವರ