ಪುಟ:ಸ್ವಾಮಿ ಅಪರಂಪಾರ.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ದೇವಾಲಯದ ಪುಷ್ಕರಿಣಿಯ ದಂಡೆಯ ಮೇಲೆ ಅಪರಂಪಾರ ಧ್ಯಾನಮಗ್ನನಾದ.

 ಮಲ್ಲಪ್ಪ ಶಂಕರಪ್ಪನನ್ನು ಕರೆದುಕೊಂಡು ಬಂದ.

ಅಪರಂಪಾರ ಧ್ಯಾನ ಮುಗಿಸಿ ಎಚ್ಚೆತ್ತಾಗ, ಆತನ ಅಡಿಗಳಿಗೆ ಎರಗಿದ ಶಂಕರಪ್ಪನನ್ನು ಕುರಿತು ಅವನೆ೦ದ: "ಬಾ ಬಂಧುವೆ, ಇಷ್ಟು ಹೊತ್ತು ನಿನಗಾಗಿ ಕಾದಿದ್ದೆವು, ಏಳು, ಏಳು."

ಗದ್ಗದಿತನಾಗಿ ಶಂಕರಪ್ಪ ನುಡಿದ :
"ಅನ್ನವಲ್ಲದ ಅನ್ನ ತಿಂದು ದಿನ ಕಳೆಯುತಾ ಇದ್ದೆ. ಕಡೆಗೆ ಬಂದಿರಿ. ನನ್ನ ಜನ್ಮ
ಸಾರ್ಥಕ ಆಯಿತು. ಇನ್ನು ನಿಮ್ಮ ಪಾದ ಬಿಟ್ಟಿರಲಾರೆ."

ಶಂಕರಪ್ಪನ ಭುಜಗಳನ್ನು ಮೃದುವಾಗಿ ಮುಟ್ಟಿ, ಅವನನ್ನೆತ್ತಿ, ಅಪರಂಪಾರನೆಂದ : “ಮಡಕೇರಿಯ ಸ್ಥಿತಿಗತಿಗಳೇನು ಶಂಕರಪ್ಪ? ಹೇಳು ಕೇಳುತೇವೆ."


“ಆಕೈಯ್ಯ ಕೊಡಿಚಿರ ಬೋಜ ಪರೆವೆ ಬೋಜ ಪರಂದ ಫಲ ವೆಚ್ಚಕುಂಡೋ? ಆಕೈಯ್ಯ ಕೊಡಿಚಿರ ಕಾಬೆರ ನೋಟೊ ಇಂಜಿಡೊ ಮಂಜಡೊ ಬೇರಿಂಜ ಫೋಲೆ ಆಕೈಯ್ಯ ಕೊಡಿಚಿರ ಕಾಬೆರ ಬೋಜ ಚಳ್ಳೆಯ ಕೊಡಿಚಿರ ಕಾಬೆರ ಬೋಜ ಕಾಬೆರ ಪತ್ತಾಂಗ್ ಮೋದಿರ ಬೋಂಡು"

__ಕೊಡವನೊಬ್ಬ ಇಂಪಾಗಿ ಹಾಡುತ್ತಿದ್ದ. ನೆರೆದಿದ್ದ ಜನರಲ್ಲಿ ಹಲವರು ಆಲಿಸು ತ್ತಿದ್ದರು. ಉಳಿದವರು ಅಲ್ಲಲ್ಲಿ, ಹಾಡಿಗೆ ಭಂಗ ಬರದಿರಲೆಂದು ಧ್ವನಿ ತಗ್ಗಿಸಿ, ತಮ್ಮ ತಮ್ಮೊಳಗೆ ಮಾತನಾಡುತ್ತಿದ್ದರು.

ಅದು, ಕೆಂಚಮನೆ ಮಂದಯ್ಯನ ಗೃಹ. ಮುಂಭಾಗದ ಹಜಾರ, 'ತೂಕುಂಬೊಳಿಚ'ದ 

ಬೆಳಕು ಹಜಾರದಲ್ಲಿ ಪಸರಿಸಿತ್ತು. ನೆರೆದವರಲ್ಲಿ ಏಳು ಸಾವಿರ ಸೀಮೆ, ಯಾದವ ನಾಡು, ಹಾಲೇರಿ ನಾಡು, ತಲಕಾವೇರಿ ನಾಡು, ನಾಲ್ಕು ನಾಡು ಮತ್ತಿತರ ಪ್ರದೇಶಗಳ ಪ್ರಮುಖ ರಿದ್ದರು, ಚಾವಡಿಕಾರರಿದ್ದರು. ಅವರೆಲ್ಲ ಇದಿರು ನೋಡುತ್ತಿದ್ದುದು ಅಪರಂಪಾರಸ್ವಾಮಿಯ ಬರುವಿಕೆಯನ್ನು. ಹಾವುಗೆಗಳ ಸಪ್ಪಳವಾಯಿತು. ಮನೆಯ ಹೊರಮೈಯ ಒಂದು ಕೊಠಡಿಯಲ್ಲಿ ಬಿಡಾರ ಮಾಡಿದ್ದ ಅಪರಂಪಾರಸಾಮಿ, ಶಿವಪೂಜೆಯನ್ನು ಮುಗಿಸಿ, ಮಂದಯ್ಯ___ ಶಂಕರಪ್ಪನೊಡನೆ ಹಜಾರಕ್ಕೆ ಆಗಮಿಸಿದ. ಎಲ್ಲರೂ ಎದ್ದು ನಿಂತರು. "ಶರಣು" "ಶರಣು" ಎಂದರು. ಅಪರಂಪಾರ ಅವರ ವಂದನೆಗಳನ್ನು ಸ್ವೀಕರಿಸಿದ. ಮಂದಯ್ಯನೆಂದ : "ಹೀಗೆ ದಯಮಾಡಿಸಬೇಕು." ಅಪರಂಪಾರ ಅವನನ್ನು ಹಿಂಬಾಲಿಸಿ, ಹಜಾರದ ಪಶ್ಚಿಮ ಗೋಡೆಯ ಬಳಿ ಪೂರ್ವ ದಿಕ್ಕಿಗೆ ಮುಖಮಾಡಿ, ಪೀಠದ ಮೇಲೆ ಆಸೀನನಾದ. ಅವನೆದುರು 'ನಡುಬಾಬಾಡೆಯ'