ಪುಟ:ಸ್ವಾಮಿ ಅಪರಂಪಾರ.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ

ಜ್ಯೋತಿಯೊಂದನ್ನು ತಂದಿರಿಸಿದರು. ನೆರೆದವರೆಲ್ಲ ಸ್ವಾಮಿಗೂ ಜ್ಯೋತಿಗೂ ಇದಿರಾಗಿ ಕುಳಿತರು. ಇದು, ದೀರ್ಘ ಸಿದ್ಧತೆಯ ಬಳಿಕ ಏರ್ಪಡಿಸಲಾಗಿದ್ದ ಸಭೆ. ಮಡಕೇರಿಯಿಂದ ಹಿಂತಿರುಗಿದ ಅಪರಂಪಾರ, ಅಂಥದೊಂದು ಸಭೆ ಅಗತ್ಯವೆಂದು ಮನಗಂಡು, ಹಾಲೇರಿ ರಾಜವಂಶಕ್ಕೆ ನಿಷ್ಠರಾಗಿದ್ದ ಹಲವರಿಗೆ ಕರೆ ಕಳುಹಿದ. ಬಿತ್ತಿದ ಬೀಜಗಳು ಮೊಳಕೆಯೊಡೆ ದಿದ್ದುವು. ಈಗ ಸಸಿಗಳನ್ನು ಪಾತಿಯಿಂದ ಎತ್ತಿ, ಉತ್ತ ಹೊಲಗಳಲ್ಲಿ ಕ್ರಮಬದ್ಧವಾಗಿ ನೆಡುವ ಕಾಲ ಒದಗಿತ್ತು. ಮಂದಯ್ಯನೆಂದ: "ಸ್ವಾಮಿಗಳು ಪ್ರವಚನ ಶುರುಮಾಡಬಹುದು." ಸಾಸಿವೆ ಬಿದ್ದರೂ ಸಪ್ಪಳ ಕೇಳಿಸುವಂತಹ ನೀರವತೆ ಹಜಾರದಲ್ಲಿ ನೆಲೆಸಿತು. ಅಪರಂಪಾರ ಅರಂಭಿಸಿದ: "ಕೊಡಗಿನ ಹಲವು ಹದಿನೆಂಟು ನಾಡುಗಳ ಪ್ರಮುಖರೇ, ರಾಜನಿಷ್ಠರಾದ ವೀರಾಗ್ರಣಿ ಗಳೇ, ಇದು ಪ್ರವಚನವಲ್ಲ__ಕಥೆ, ನಮ್ಮ ಹುಟ್ಟನಾಡಿನ ಏಳು ಬೀಳುಗಳ ಕರುಣ ಕಥೆ...”

                   *  *  *

ಬದುಕಿನ ಜಂಜಡವನ್ನು ತೊರೆದು ದೂರ ಹೋಗಲೆಳಸಿ ತಾನು ಹಿಂದೆಯೊಮ್ಮೆ ಶಿವಾಚಾರ್ಯ ಸ್ವಾಮಿಗಳ ಸನ್ನಿಧಿಗೆ ಹೋಗಿದ್ದನಲ್ಲ? ಆ ರಾತ್ರೆ ಅವರಾಡಿದ ಮಾತುಗಳು ಅಪರಂಪಾರನ ನೆನಪಿಗೆ ಬಂದುವು. ಆ ಪದಗಳನ್ನೇ ಈಗ ಅಪರಂಪಾರ ಪುನರುಚ್ಚರಿಸಿದ. [ಮಲ್ಲಪ್ಪಗೌಡನ ನೆನಪೂ ಮುಸುಕು ಸರಿಸಿ ಹೊರಗಿಣಿಕಿತು. ನಂಜರಾಜಪಟ್ಟಣದಲ್ಲಿ ಅವನಿಗಾಗಿದ್ದ ಅನುಭವದ ಪುನರಾವರ್ತನೆಯಾಯಿತು ಈಗಿನದು.] ಜಂಗಮನೆಂದು ಬಂದವನನ್ನು ಕೊಡವರು ತಮ್ಮ ಅರಸನಾಗಿ ಸ್ವೀಕರಿಸಿದ ಬಗೆ: ಆ ವರೆಗೆ ಹಲವು ಪಾಳೆಯಗಾರರ ಕೆಳಗೆ ಹರಿದು ಹಂಚಿಹೋಗಿದ್ದ ಕೊಡಗನ್ನು ಆತ ಒಗ್ಗೂಡಿಸಿದ್ದು: ಸಿರಿಬಾಯಿ ದೊಡ್ಡವೀರಪ್ಪನ ಕಾಲದಲ್ಲಿ ಕೊಡಗು ಉಚ್ಚಾಯಸ್ಥಿತಿ ಗೇರಿದ್ದು...

                   *  *  *

"ಸದ್ಭಕ್ತಿ ಸದಾಚಾರವಿಲ್ಲದ ಗುರುತ್ವ ಉಂಟೆ? ಸದ್ಭಕ್ತಿ ಸದಾಚಾರವಿಲ್ಲದ ನಿಜಲಿಂಗ ಉಂಟೆ? ನಿಜಜಂಗಮ ಉಂಟೆ? ಸದ್ಭಕ್ತಿ ಸದಾಚಾರ ಇಲ್ಲದ ಶರಣತ್ವ ಉಂಟೆ? ಸಿರಿಬಾಯಿ ದೊಡ್ಡವೀರಪ್ಪ ಆಚಾರವಂತನಾದ ಧರ್ಮಪರಾಯಣನಾದ ಹಿರಿಯ ವ್ಯಕ್ತಿ ಯಾಗಿದ್ದ...ಮುಂದೆ ಕೊಡಗು ಮತ್ತೊಮ್ಮೆ ಅನೈಕ್ಯದ ರೋಗಕ್ಕೆ ತುತ್ತಾಯಿತು... ಅನಂತರ ದೊಡ್ಡವೀರರಾಜೇಂದ್ರ ಒಡೆಯರ್ ಅಧಿಕಾರಕ್ಕೆ ಬಂದು ಕೊಡಗಿನ ಹಿರಿಮೆ ಯನ್ನು ಪುನಃ ಎತ್ತಿ ಹಿಡಿದರು. ಆಂಗ್ಲರ ಮೈತ್ರಿಯನ್ನು ಅವರು ಸಂಪಾದಿಸಿದರು. ಸರಿಯೆನ್ನಿ, ತಪ್ಪೆನ್ನಿ, ಕಾಲಗರ್ಭದಲ್ಲಿ ಈಗಾಗಲೇ ಅಡಗಿಹೋಗಿರುವಂಥ ಘಟನೆ ಅದು. ಟೀಪೂಗಿದಿರು ನಡೆದ ಯುದ್ಧದಲ್ಲಿ ಇಂಗ್ರೇಜಿಯವರಿಗೆ ಆ ರಾಜೇಂದ್ರ ಸಹಾಯ