ಪುಟ:ಸ್ವಾಮಿ ಅಪರಂಪಾರ.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಸ್ವಾಮಿ ಆಪರಂಪಾರ

ಮಾಡಿದರು. ಒಂದೂವರೆ ಲಕ್ಷ ವರಹ ಬೆಲೆಬಾಳುವ ಸರಂಜಾಮು ಸಾಮಗ್ರಿಗಳನ್ನು ಒಂದು ಕವಡೆಯನ್ನೂ ಸ್ವಿಕರಿಸದೆ ಆತ ಇಂಗ್ರೇಜಿಯವರಿಗೆ ಕೊಟ್ಟರು. "ಅದಕ್ಕೆ ಪ್ರತಿಫಲವಾಗಿ ಅವರಿಗೇನು ಸಿಕ್ಕಿತು ? ಟೀಪೂ ಸೋತ ಬಳಿಕ ಮೈಸೂರಿಗೆ ಅಧಿಕಾರಿಯಾಗಿ ಬಂದ ಕರ್ನಲ್ ಕ್ಲೋಸ್, ಒಂದು ಓಲೆ ಬರೆದು, ಮೈಸೂರು ರಾಜ್ಯದಲ್ಲಿ ನೀವು ಕೊಳ್ಳೆ ಹೊಡೆದಿದೀರಂತೆ; ಕೆಳಗೆ ನಮೂದಿಸಿರುವುದನ್ನು ನಮ್ಮ ವಶಕ್ಕೊಪ್ಪಿಸಿ-- ಎಂದ. ನಮೂದಿಸಿದ್ದೇನು? ನಗಬೇಡಿ. ಹೇಳುತೇನೆ ; ೬೭ ಹೆಂಗಸರು ; ೩೪.ಗಂಡಸರು ; ೧೧ ಹುಡುಗರು : ೧೦ ಹುಡುಗಿಯರು : ೧೩೮೩ ಹಸುಗಳು : ೫೭೪ ಎಮ್ಮೆಗಳು : ೮೩೪ ಹೋರಿಗಳು; ೧೨೧ ಎಳೆಗರುಗಳು; ೭೨೯ ಕಂಠೀರವ ವರಹಗಳು; ల೯ ಬೆಳ್ಳಿ ಆಭರಣ ಗಳು; ೬೪ ಜೋಡಿ ಬಂಗಾರದ ಬೆಂಡೋಲೆಗಳು ; ೨೧೫ ಹಿತ್ತಾಳೆ ತಟ್ಟೆಗಳು ; ೯೩ ತಾಮ್ರದ ಪಾತ್ರೆಗಳು ; ೬೭ ಬಂದೂಕುಗಳು; ೬ ಕುದುರೆಗಳು ; ೧೫೫ ಕುರಿಗಳು ; ೯೫ ಚಾಕುಗಳು : ೯೬ ಕುಡುಗೋಲುಗಳು ; ೬೦ ಕೊಡಲಿಗಳು ; ೭ ಕಬ್ಬಿಣದ ಸಂಕೋಲೆಗಳು; ೭೨ ಮೂಟೆ ಬಟ್ಟೆಗಳು...

[ಶ್ರೋತೃಗಳು ನಕ್ಕರು. ಅಪರಂಪಾರ ತಾನೂ ಸಣ್ಣನೆ ನಕ್ಕ.]

  • ಎಂಥೆಂಥ ಅಮೂಲ್ಯ ಒಡವೆಗಳು! ಕೊಡಗಿನ ಸಿಂಹಾಸನಾಧೀಶ್ವರ ಒಬ್ಬ ಯಃಕಶ್ಚಿತ್

ದರೋಡೆಗಾರ ಎನ್ನುವ ಹಾಗೆ ಆ ಕ್ಲೋಸ್ ಕಾಗದ ಬರೆದ. ಅದು, ಶ್ರೀದೇವರು ಸೂರ್ಯ ಚಂದ್ರ ಭೂಮಿ ಇರುವ ತನಕ ಮೈತ್ರಿಯಿಂದಿರುತೇವೆ ಎಂದು ಕುಂಪಣಿ ಸರಕಾರ ಒಡಂಬಡಿಕೆ ಮಾಡಿಕೊಂಡಿದ್ದ ಒಬ್ಬ ಸ್ವತಂತ್ರ ರಾಜನಿಗೆ! ನಮ್ಮ ಅರಸ ಆತನಿಗೆ ಉತ್ತರ ಕೊಡಲಿಲ್ಲ. ಬದಲು, ನೇರವಾಗಿ, ಮದರಾಸಿನ ಗವರ್ನರನಿಗೂ ಕಲ್ಕತ್ತೆಯ ಗವರ್ನರ್ ಜನರಲನಿಗೂ ಪತ್ರ ಕಳುಹಿಸಿದರು. ಅದರಲ್ಲಿ ಏನಂದರು ? 'ಈ ಕರ್ನಲ್ ಕ್ಲೋಸ್ ನಮ್ಮನ್ನೆಂದೂ ನೋಡಿಲ್ಲ. ನಮ್ಮ ಬಗ್ಗೆ ಅವನಿಗೇನೂ ತಿಳಿಯದು. ಒಬ್ಬ ಗುಲಾಮನನ್ನು ಸಂಬೋಧಿಸುವ ಹಾಗೆ ಕಾರಕೂನನ ಕೈಲಿ ನನಗೆ ಕಾಗದ ಬರೆಸಿದ್ದಾನೆ.' [ಶ್ರೋತೃವೃಂದದಿಂದ: "ಕೇಳಿರಿ! ಕೇಳಿರಿ!"] "ಮುಂದೇನಾಯಿತು? ಅದು ಹಾಗಲ್ಲ, ಹೀಗೆ; ತಪ್ಪು ತಿಳಿವಳಿಕೆಯಿಂದ ನಡೆದ ಅಚಾತುರ್ಯ; ನ್ಯಾಯ ದರಿಯಾಸ್ತು ಮಾಡೋಣ__ಅಂದರು. ಆ ಜಾತಿಯೇ ಹಾಗೆ. ಒದೆದಿರೋ ಮುದುರಿಕೋತವೆ. ಬಗ್ಗಿದಿರೋ ಬೆನ್ನಮೇಲೆ ಕೂಡುತವೆ. ಕಂಕುಳಲ್ಲಿ ದೊಣ್ಣೆ ಇಟ್ಟುಕೊಂಡೇ 'ಶರಣಾರ್ಥಿ' ಅನ್ನೋದು. "ಮುಂದೆ ಪಟ್ಟವೇರಿದ ಲಿಂಗರಾಜರು ಸ್ವಾತಂತ್ರ್ಯವನ್ನು ಬಿಟ್ಟಕೊಡಲಿಲ್ಲ. ದಾರಿ ಯಲ್ಲಿ ಹೋಗುತ್ತಿದ್ದ ಮಾರಿಯನ್ನು ಮನೆಗೆ ಕರೆಯಲೂ ಇಲ್ಲ. ಸಂಯಮದಿಂದ ದಕ್ಷತೆ ಯಿಂದ ರಾಜ್ಯ ಆಳಿದರು. "ಅವರ ಬಳಿಕ ಘನತೆವೆತ್ತ ಚಿಕವೀರರಾಜೇಂದ್ರ ಒಡೆಯರು ಸಿಂಹಾಸನಾರೂಢರಾದರು. ನಿಮಗೆ ಗೊತ್ತೇ ಇದೆ. ಆಗ ಮಾರಿಬೇನೆಯೊಂದು ತಲೆದೋರಿ ದೊರೆಯ ದಾಯಾದಿ ಗಳಿಬ್ಬರು ಮಡಿದರು..." ಒಮ್ಮಿಂದೊಮ್ಮೆಲೆ ಕುಳಿರುಗಾಳಿ ಬೀಸಿದಂತಾಯಿತು. ಸ್ವಾಮಿಯ ಮಾತಿನ ಪ್ರವಾಹ ದಲ್ಲಿ ತೇಲುತ್ತ ಸಾಗಿದ್ದ ಶಂಕರಪ್ಪ, ತಲೆಗೇನೋ ಬಡೆದಂತಾಗಿ ಕಣ್ಣುಗಳನ್ನರಳಿಸಿ ನೋಡಿದ. 'ಇವನು ಮನುಷ್ಯನಲ್ಲ, ದೇವತೆ' ಎಂದುಕೊಂಡ ಮಲ್ಲಪ್ಪಗೌಡ. ಅಪರಂಪಾರ