ಪುಟ:ಸ್ವಾಮಿ ಅಪರಂಪಾರ.pdf/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ

ಪೂರ್ವಾಶ್ರಮದಲ್ಲಿ ಪದಚ್ಯುತ ಅರಸನ ಜ್ನಾತಿ ಎಂದು ಅಸ್ಪಷ್ಟವಾಗಿ ತಿಳಿದಿದ್ದ ಬೇರೆ ಕೆಲವರಿಗೆ, ಇದೇನು, ಹೀಗನ್ನುತಿದ್ದಾರೆ'__ಅನಿಸಿತು. ['ಒಂದೇ ನೆಗೆತಕ್ಕೆ ಕಂದಕವನ್ನು ದಾಟಿದೆ. ಇನ್ನು ಮುಂದಕ್ಕೆ ಓಡಬೇಕು' ಎಂದು ಅವಸರಪಟ್ಟ ಅಪರಂಪಾರ.] "...ಚಿಕವೀರರಾಜರ ಆಳ್ವಿಕೆ, ಸುವರ್ಣ ಲಿಪಿಯಲ್ಲಿ ಬರೆದಿಡುವ ಅಧ್ಯಾಯ ವಾಗತದೆ__ಎಂದು ಪ್ರಜೆಗಳು ಭಾವಿಸಿದರು. ಆದರೆ, ಇದ್ದಕ್ಕಿದ್ದಹಾಗೆ ಏನಾಗಿಬಿಟ್ಟಿತು! ಆಂಗ್ಲರ ಕುಟಿಲ ಕಾರಸ್ಥಾನಕ್ಕೆ ಜಯವಾಯಿತು. ಅವರು ಅನ್ನವನಿಕ್ಕಿ, ಹಿರಣ್ಯ ಕೊಟು, ಹೊಗಳುಭಟರನ್ನು ಪಡೆದರು. ನಮ್ಮವರು ಕೆಲವರು ಉಂಡ ಮನೆಗೆ ಎರಡು ಬಗೆ ದರು. "ಕತ್ತೆ ಬಲ್ಲುದೆ ಕತ್ತುರಿಯ ವಾಸನೆಯ ? ತೊತ್ತು ಬಲ್ಲಳೆ ಗುರುಹಿರಿಯರುತ್ತಮ ರೆಂಬುದ? ಊಹೂಂ. ಸ್ವತಂತ್ರನಾಗಿ ಜೀವಿಸಿದ್ದು, ಮುಂದೆ ಸ್ವಾತಂತ್ರ್ಯವನ್ನು ಕಳೆದು ಕೊಂಡವನೊಬ್ಬನೇ ಬಲ್ಲ ಅದರ ಸವಿಯ. ಮನೆಯ ಕೊಳ್ಳೆ ಹೊಡೆದರೆಂದು ಅಳಬೇಕೆ ನಾವು? ಕಡುಗಲಿಗಳಾಗಿ ಆ ಕಳ್ಳರ ಹಿಡಿಯಬೇಕು. ಆಯುಷ್ಯ ತೀರದೆ ಮರಣವಿಲ್ಲ. ಸಾವಿಗ್ಯಾತಕೆ ಅಂಜಬೇಕು ನಾವು ? ನಡುಬಾಬಾಡೆಯ ಜ್ಯೋತಿಯ ಎದುರು ಈ ಮಾತು ಹೇಳುತಿದೇನೆ. ಈ ನೆಲದಲ್ಲಿ ಕಾರಣವರಿಗೆ__ವೀರರಿಗೆ__ಬರಗಾಲವಿಲ್ಲ. ಕಾಡುಗಳಲ್ಲಿ ಬೇಟೆಕಾರ ಅಯ್ಯಪ್ಪ ದೇವರ ನೆನೆದು ನಾವು ಬೇಟೆಯಾಡುವುದಿಲ್ಲವೆ? ಮನಸ್ಸಿದ್ದಲ್ಲಿ ಮಹಾದೇವನಿಪ್ಪ. ಅವನ ನೆನೆದು, ಸಪ್ತಸಾಗರಂಗಳ ದಾಟಿ ಬಂದಿರುವ ಕ್ರೂರಮೃಗ ವನ್ನು ನಾವು ಬೇಟೆಯಾಡಬೇಕು. "ನಾನು ಮೊರೆವ ನಾದವ ಕೇಳಿದೆ; ಉರಿವ ಜ್ಯೋತಿಯ ನೋಡಿದೆ; ಸುರಿವ ಅಮೃತವ ಸವಿದುಂಡೆ. ಅದಕಾರಣ ತೊರೆದೆ ಜನನ ಮರಣವ. ಚಿತ್ತಮುಟ್ಟಿ ಸೇವೆಯ ಮಾಡುವ ಭಕ್ತ ನಾನು. ಮರ್ತ್ಯ-ಕೈಲಾಸ ನನಗಿಲ್ಲ. ಕೈದು ಹಿಡಿದು ಪರಕೀಯರ ವಿರುದ್ಧ ಹೋರಾಡಿ ಎಂದು ನನಗೋಸ್ಕರ ನಾ ಕೇಳುತ್ತಿಲ್ಲ. ಬಟ್ಟೆಯಲ್ಲಿ ಹೊನ್ನ ವಸ್ತ್ರ ಬಿದ್ದಿದ್ದರೆ, ನಾನು ಕೈಮುಟ್ಟಿ ಎತ್ತಿದೆನಾದಡೆ ನಿಮಾಣೆ, ನಿಮ್ಮ ಪ್ರಮಥರಾಣೆ, ಅದೇನು ಕಾರಣವೆಂದಡೆ. ನೀವಿಕ್ಕಿದ ಭಿಕ್ಷೆಯಲ್ಲಿಪ್ಪೆನಾಗಿ. ಇಂತಲ್ಲದೆ ನಾನು ಅಳಿಮನವ ಮಾಡಿ ಪರದ್ರವ್ಯಕ್ಕೆ ಆಸೆ ಮಾಡಿದೆನಾದಡೆ ನೀನಾಗಲೇ ಎನ್ನ ನರಕದಲದ್ದಿ ನೀನೆದು ಹೋಗಾ ಶಂಭು ಜಕ್ಕೇಶ್ವರಾ...ಮಾಡುವಾತ ನಾನಲ್ಲಯ್ಯ ! ನೀಡುವಾತ ನಾನಲ್ಲವಯ್ಯ! ಬೇಡು ವಾತ ನಾನಲ್ಲವಯ್ಯ...ಮಹಾದೇವ ಕೂಗಿ ನುಡಿಯುತಿದಾನೆ. ನಿಮಗಾಗಿ ಹೋರಾಡಿ ! ನಿಮ್ಮ ಮಕ್ಕಳಿಗಾಗಿ ಹೋರಾಡಿ!"

   ಭಾವನೆಗಳು ಉತ್ಕಟಗೊಂಡಿದ್ದ ಶ್ರೋತೃಗಣ ಕೂಗಿತು: 

“ಉಘೇ! ಉಘೇ! ಸ್ವಾಮಿ ಅಪರಂಪಾರ ಉಫೇ! ಉಘೇ!"

ಅಪರಂಪಾರನೆಂದ :

"ಚಿಕವೀರರಾಜರಿಗೆ ಜಯವಾಗಲಿ__ಎನ್ನಿ." ನೆರೆದವರು ಜಯಘೋಷ ಮಾಡಿದರು : "ಹಾಲೇರಿ ವಂಶೋತ್ಪನ್ನ ಕೊಡಗು ಸಿಂಹಾಸನಾಧೀಶ್ವರ ಚಿಕವೀರರಾಜೇಂದ್ರ ಒಡೆಯ ರಿಗೆ__ಜಯವಾಗಲಿ!"