ಪುಟ:ಸ್ವಾಮಿ ಅಪರಂಪಾರ.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ೧೪೫

                      ೫೦
  ಹೊಸ ಉಸಿರೊಂದು ಕೊಡಗಿನ ಕಾಡುಬೆಟ್ಟಗಳಲ್ಲಿ, ಗಿರಿ ಕಂದರಗಳಲ್ಲಿ ಸಂಚಾರ ಮಾಡಿತು.ಒಂದು ವೃಕ್ಷ ಸುಯ್ಲಾಡಿ ಇನ್ನೊಂದಕ್ಕೆ ಸುದ್ದಿ ಮುಟ್ಟಿಸಿತು.ಅದು ಸುಯ್ಲಾಡಿ, ಮತ್ತೊಂದಕ್ಕೆ. ಗಿರಿ ಧ್ವನಿಸಿತು. ಕಂದರ ಪ್ರತಿಧ್ವನಿಸಿತು.ಅದು ಬೇರೊಂದು ಗಿರಿಗೆ ಅಪ್ಪಳಿಸಿತು.ಹೀಗೆ... 
 ಕೆಂಚಮನೆಯಿಂದ ಹಾಲೇರಿ ನಾಡಿಗೆ ಅಪರಂಪಾರನ ಕರೆಯನ್ನು ಹೊತ್ತು ಮರಳಿದವ ನೊಬ್ಬ ಅಪ್ಪಂಗಳಕ್ಕೂ ಬಂದ.
 ಆತ ಚಾವಡಿಕಾರ ಧರ್ಮಪ್ಪ. ಅವನು ಆಡಿದುದನ್ನು ಕೇಳಿ, ಬದುಕಿನ ಗಾಣಕ್ಕೆ ಸುತ್ತು ಸುತ್ತು ಬಂದು ಬಸವಳಿದು ತಲೆಗೂದಲು ನರೆತಿದ್ದ ಗಂಗಮ್ಮ ನಕ್ಕಳು.
 "ನಿನ್ನ ಪಾದ ಸೇರತೇನೆ, ಕರಕೋ–ಎಂದರೆ, ಮತ್ತೂ ಮತ್ತೂ ಪರಿಹಾಸ್ಯ ಮಾಡತೀಯ ಶಿವನೆ ?" ಎಂದು ಅತ್ತಳು.
 ರಾಜಮ್ಮಾಜಿ ತೇಲುತ್ತಲಿದ್ದುದು ತುಂಬು ನೀರಿನ ನದಿಯ ಮೇಲೆ. ಒಡಕು ದೋಣಿ, ನೀರು ಒಳಕ್ಕೆ ನುಗ್ಗಿದ್ದರೆ ಅದು ಮುಳುಗಬಹುದು. ತನ್ನ ಜಲಸಮಾಧಿಯಾಗಬಹುದು. ಅದನ್ನಾಕೆ ಬಲ್ಲಳು. ಆ ಕಾರಣದಿಂದಲೇ ಎಂಥ ವಾರ್ತೆ ಬಂದರೂ ಅವಳ ಮನಸ್ಸು ಅಂಕೆ ತಪ್ಪುತ್ತಿರಲಿಲ್ಲ. ಪ್ರವಾಹದಲ್ಲಿ ಏನೇನು ತೇಲಿ ಬರುವುದಿಲ್ಲ? ಬುಡಕಿತ್ತ ಮರಗಳು, ಕುಸಿದ ಮನೆಗಳ ಮಾಡಗಳು; ಆಕಳು; ಜನರು; ವಿಷಜಂತುಗಳು. ಇವೆಲ್ಲವನ್ನು ನಿರ್ವಿಕಾರಭಾವದಿಂದ ನೋಡುತ್ತ ತನ್ನ ದೋಣಿಯಲ್ಲಿ ರಾಜಮ್ಮಾಜಿ ಕುಳಿತಿದ್ದಳು, ಕದಲದೆ.
 ಗಂಗಮ್ಮ ಹೇಳಿದಳು:
  "ಇಲ್ಲಿಗೊಂದಾವರ್ತಿ ಒಬ್ಬ ಸ್ವಾಮಿಯೋರು ಬಂದರು. ಮುಚ್ಚಂಜೆ ಹೊತ್ತಿನಾಗೆ. ಈ ಮಗುವಿನ ಕೈ ನೋಡಿ, ನಿನಗೆ ಮುತ್ತೈದೆ ಸಾವು ಪ್ರಾಪ್ತವಾಗತದೆ ಅಂದರು. ಇಲ್ಲಿಂದ ಮಡಕೇರಿಗೆ ಹೋದರು ನೋಡು. ಅರಮನೆಯಲ್ಲಿ ಗಲಾಟೆಯಾಯ್ತಂತೆ. ಅವರೇ ಅಪರಂಪಾರ ಅಂತ ಜನ ಆಡಿಕೊಳ್ಳುತಾ ಇದ್ದರು.”
 ಧರ್ಮಪ್ಪನೆಂದ:
 "ಇದ್ದಾತು ತಾಯಿಾ. ನಮ್ಮ ಸ್ವಾಮಿಯೋರು ತಿರುಗದ ತಾಣವಿಲ್ಲ, ನೋಡದ ಜನವಿಲ್ಲ."
 ಪಕ್ಕದಲ್ಲಿ ನಿಂತಿದ್ದ ಮಗಳಿಗೆ ಕೇಳಿಸಬಾರದೆಂದು ಬಹಳ ಗೋಪ್ಯವೆನ್ನುವಂತೆ ಗಂಗಮ್ಮ ಪಿಸುದನಿಯಲ್ಲಿ ಅಂದಳು :
 "ಈ ಸ್ವಾಮಿಯೋರೇ ಅಪ್ಪಾಜಿ ಅರಸರ ಮಕ್ಕಳು ಅನ್ನೋ ವಿಷಯ ನೀ ಏನಾದರೂ ಕೇಳಿದೀಯಾ ?"
 "ಇಲ್ರಾ. ಅಂಗೇನೂ ಇದ್ದಂಗಿಲ್ಲ ಬಿಡಿರಿ."
 ರಾಜಮ್ಮಾಜಿಗೆ,ತಾಯಿಯಾಡಿದುದೂ ಆತ ನೀಡಿದ ಉತ್ತರವೂ ಕೇಳಿಸಿದ್ದುವು. ಕತ್ತಿನ ನರವೊಂದು  ಟಿಪಟಿಪೆಂದು ಬಡಿಯತೊಡಗಿತೇ ಹೊರತು ಮುಖಭಾವ ಬದಲಾಗಲಿಲ್ಲ.
 "ಅಂತೂ ಇಂಗ್ರೇಜಿಯವರನ್ನ ಓಡಿಸಿ ಅರಸನನ್ನ ಮರಳಿ ಕರಸತಾರೆ ಅನ್ನು” ಎಂದಳು ಗಂಗಮ್ಮ.
 10