ಪುಟ:ಸ್ವಾಮಿ ಅಪರಂಪಾರ.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



               ಸ್ವಾಮಿ  ಅಪರಂಪಾರ               ೧೪೭
   "ಹೋಗಿ ಬರತೀನಿ, ಅಮ್ಮಣ್ಣಿ" ಎಂದು ನುಡಿದು, ಧರ್ಮಪ್ಪ ಅಂಗಳ ದಾಟಿದ. ದೂರದಲ್ಲಿ ಆತ ಮರೆಯಾಗುವವರೆಗೂ ಅವನನ್ನು ದಿಟ್ಟಿಸುತ್ತ ರಾಜಮ್ಮಾಜಿ ನಿಂತಳು.
                   ೫೧
   ಕೊಡಗಿನಾದ್ಯಂತ ಭೂಗರ್ಭದಿಂದ ಗುಡುಗು ಕೇಳಿಸಿದವನಂತೆ ಆಂಗ್ಲರವನು ತಲ್ಲಣಿಸಿದ. ತನ್ನ ಕನಸಿನ ನಂದನವನವಾದ ಕೊಡಗಿನಲ್ಲೆ ಕಾಳ್ಗಿಚ್ಚೆ? ಕಂಡು ಅರಿಯದ ಕೇಳಿ ತಿಳಿಯದ ಊರಲ್ಲಿ ಕರಿಯರು ತೋಡುವ ಕಂದಕವೇ ತನಗೆ ಗೋರಿಯಾಗಬೇಕೆ?
   ಲೀಹಾರ್ಡಿ ದೇಶೀಯರೆಲ್ಲರ ಮೇಲೂ ಸಂಶಯ ತಳೆದ. ಆಡಳಿತವನ್ನು ಬಿಗಿಗೊಳಿಸ ಲಾಗದ ತನ್ನ ಅಸಹಾಯಕತೆಗಾಗಿ ಅವರೆಲ್ಲ ನಗುತ್ತಿರುವರೆಂದೇ ಅವನ ಅಂಬೋಣ. ಕುರ್ನೀಸು ಮಾಡಲು ಬಂದವರೆಲ್ಲರ ಪೋಷಾಕಿನೊಳಗೆ ಭರ್ಚಿಯೋ ಬಂದೂಕೋ ಅಡಗಿರು ತ್ತದೆಂಬ ಭಯ ಆತನಿಗೆ.
   ದಿವಾನರಾದ ಪೊನ್ನಪ್ಪ-ಬೋಪಣ್ಣರನ್ನು ಕರೆದು ಇರಿಯುವ ನೋಟದಿಂದ ಅವರನ್ನು ದಿಟ್ಟಿಸುತ್ತ, ಲೀಹಾರ್ಡಿಯೆಂದ:
   “ಗೂಢಚಾರರು ಇತ್ತೀಚೆಗೆ ತಂದಿರುವ ಸುದ್ದಿಯೇನು?" 
   ಬೋಪಣ್ಣನ ಕಡೆಗೊಮ್ಮೆ ನೋಡಿ ಪೊನ್ನಪ್ಪ ಉತ್ತರಿಸಿದ:
   "ಕೆಂಚಮನೆಯಲ್ಲಿ ಒಂದು ಸಭೆಯಾದ ವಿಷಯ ಆಗಲೇ ತಿಳಿಸಿದ್ದೇವೆ.ಅದಾದ ಮೇಲೆ ಯಾವ ವಿಶೇಷ ವರ್ತಮಾನವೂ ಬ೦ದ ಹಾಗಿಲ್ಲ."
   “ಆ ಸ್ವಾಮಿಯ ಬೆಂಬಲಕ್ಕಿದ್ದಾರೆ ಅಂತ ನಮಗೆ ಸಂಶಯ ಇರುವವರನ್ನೆಲ್ಲ ಎಲ್ಲಾ ಕಡೆ ಯಾಕೆ ಹಿಡಿದುಹಾಕಬಾರದು ?"
   ಬೋಪಣ್ಣನೆಂದ:
  "ಆತುರದಿಂದ ದುಡುಕೋದು ಬ್ಯಾಡ. ಸುಮ್ಮಸುಮ್ಮನೆ ಪ್ರಜೆಗಳ ವೈರ ಕಟ್ಟಿಕೊಂಡ ಹಾಗೆ ಆಗತದೆ."
  "ಹಾಗಾದರೆ ಏನು ಮಾಡೋಣ-ಅನ್ನತೀರಿ?”
  ಪೊನ್ನಪ್ಪ ಉತ್ತರಿಸಿದ:
  "ತಾವು ಧೈರ್ಯದಿಂದಿರಿ. ಇದು ಮಳೆಗಾಲದ ಮಹಾಪೂರ. ಭದ್ರಂತ ಇಳಿದು ಹೋಗತದೆ."
  "ಮಹಾಪೂರದಲ್ಲಿ ನಾವು ಕೊಚ್ಚಿ ಹೋದಮೇಲೆ ಅದು ಇಳಿದರೇನು? ನಿಂತರೇನು?” 
  "ಕಲ್ಲು ಬಂಡೆಗಳನ್ನು ನೀರು ಕೊಚ್ಚಿಹಾಕುವುದಿಲ್ಲ" ಎಂದ ಬೋಪಣ್ಣ. 
  ಪೊನ್ನಪ್ಪನೆಂದ :
  "ಆ ಸ್ವಾಮಿಯೊಬ್ಬ ತಲೆತಿರುಕ ಶಿವಭಕ್ತ. ತನ್ನ ಮಿತಿಯೇನು ಅಂಬೋದನ್ನ ಮರೆತು ಹಾರಾಡುತಿದಾನೆ."
  "ಆತ ಒಬ್ಬನನ್ನಾದರೂ ರಾಜದ್ರೋಹದ ಆರೋಪ ಹೊರಿಸಿ ಯಾಕೆ ಹಿಡಿಯ ಬಾರದು?”
  "ಇಲ್ಲಿಯೂ ಸಾವಧಾನದಿಂದ ವರ್ತಿಸಬೇಕು. ಪ್ರಜೆಗಳ ದೃಷ್ಟಿಯಲ್ಲಿ ಅವನು ರಾಜ