ಪುಟ:ಸ್ವಾಮಿ ಅಪರಂಪಾರ.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



    ೧೪೮             ಸ್ವಾಮಿ ಅಪರ೦ಪಾರ
  ಭಕ್ತ,ದ್ರೋಹಿಯಲ್ಲ,ಘನವಂತ ಕಾಸ್ಸಾಮೇಜರ್ ಸಾಹೇಬರಿಗೆ ಬೇರೆ ಅವನು ಹಿತೋಪ:
ದೇಶ ಮಾಡಲಿಲ್ಲವೆ? ಅಲ್ಲದೆ-" 
   "ಏನು ?"
   "ಇವರು ನಿಶಾಚರರು. ತಲೆಮರೆಸಿಕೊಂಡು ಸುಳಿಯುವ ಜನ. ಇವು ಹಿಂಡು ಹಿಂಡಾಗಿ ಅಲೆಯುವ  ಆನೆಗಳು..."
   ಲೀಹಾರ್ಡಿ ತುಟಿಕಚ್ಚಿ ನುಡಿದ:
   "ಚಿಕವೀರರಾಜ ಹೋದಮೇಲೆ ಕಾಡಾನೆಗಳನ್ನು ಬೇಟೆಯಾಡುವ ಸಾಮರ್ಥ್ಯ ಕೊಡ ವರಲ್ಲಿ ಉಡುಗಿಹೋಯ್ತು ಅನ್ನಿ."
   ಪೊನ್ನಪ್ಪ-ಬೋಪಣ್ಣರಿಬ್ಬರೂ ಅಂದರು :
  "ಹಾಗಲ್ಲ. ಹಾಗಲ್ಲ."
   ಧ್ವನಿ ಏರಿಸಿ ಲೀಹಾರ್ಡಿಯೆಂದ:
  "ಹಾಗೂ ಅಲ್ಲ, ಹೀಗೂ ಅಲ್ಲ. ನೀವು ಒಗಟೆಯಾಗಿ ಮಾತಾಡತೀರಿ, ಇದು ಸರಿಯಲ್ಲ.
 ಕಾಡಿಗೆ ಬೆಂಕಿ ಬಿದ್ದಿದೆ. ಆ ಉರಿ ವ್ಯಾಪಿಸದಂತೆ ನೋಡಿಕೊಳ್ಳಬೇಕು. ತಿಳಿಯಿತೆ?"
   ತಿಳಿಯಿತು-ಎಂಬಂತೆ ದಿವಾನದ್ವಯರು ಗೋಣಾಡಿಸಿದರು...
   ...ಆದರೆ ಆಡಿದಷ್ಟು ಸುಲಭವಾಗಿರಲಿಲ್ಲ,ಉರಿ ಆರಿಸುವುದು.
   ಮರಮರ ಮಥನಿಸಿ ಹುಟ್ಟಿದ ಕಿಚ್ಚು, ಮಾಯಾವಿಯಾದ ಅಗ್ನಿ, ಕುಂಪಣಿ ದೂತ ರೊಡನೆ ಅದು ಕಣ್ಣುಮಚ್ಚಾಲೆಯಾಡಿತು.
   ಅಪರಂಪಾರ ತಂಡದವರು ಎಲ್ಲೆಡೆಗಳಲ್ಲೂ ಕಾಣಿಸಿಕೊಂಡರು. ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದರು, ಜನರನ್ನು ಸಜ್ಜುಗೊಳಿಸಿದರು. ಅಸ್ತ್ರ ಹಿರಿದು ಎಲ್ಲರೊಂದಾಗಿ ಹೋರಾ ಡುವ ಘಳಿಗೆಯನ್ನು ಇದಿರುನೋಡಿದರು. 
   ಕೆಂಚಮನೆಯಿಂದ ಅಪರಂಪಾರ ಹಾರಂಗಿಗೆ ಬಂದ. ಅಲ್ಲಿಂದ ದಳವಾಯಿ ವೆಂಕಟಪ್ಪ ಹಾಗೂ ಅಪ್ಪಯ್ಯರೊಡಗೂಡಿ ಕಾಜಗೋಡಿಗೆ ಪಯಣ ಬೆಳೆಸಿದ.
   ಅಪ್ಪಂಗಳದಿಂದ ಹೊರಟ ಧರ್ಮಪ್ಪ ಅಪರಂಪಾರನನ್ನು ಕಾಣಲು ಒಂದು ತಿಂಗಳೇ ಹಿಡಿಯಿತು. ಕಾಜಗೋಡು ಈಗ ಜೇನುತೊಟ್ಟಿ. ಜನ ಬರುತ್ತಿದ್ದರು, ಹೋಗುತ್ತಿದ್ದರು. ಕಾಲ ಹಗಲು-ಇರುಳುಗಳ ಅಂತರವನ್ನೇ ಮರೆತಂತಿತ್ತು.
   ಅದೇ ಆಗ ಮೈಸೂರಿಗೂ ಇಕ್ಕೇರಿಗೂ ದೂತರನ್ನು ಕಳುಹಿ ಅಪರಂಪಾರ ಒಂದು.
ಕ್ಷಣ ಗೋಡೆಗೊರಗಿ ಕುಳಿತ. ಅಷ್ಟರಲ್ಲಿ ವ್ಯಕ್ತಿಯೊಂದು ತಲೆ ಬಾಗಿಲ ಬಳಿ ಹಣಿಕಿ ಹಾಕಿತು.
   “ಧರ್ಮಪ್ಪ ಅಲ್ಲವಾ ? ಬಾ. ಎಂದು ಬಂದೆ?"
   -ಅಪರಂಪಾರ ಕೇಳಿದ.
   ಧರ್ಮಪ್ಪ ಸ್ವಾಮಿಗೆ ನಮಿಸಿ, ತಾನು ಹೋದ ಊರುಗಳು, ಕಂಡ ಜನರು, ಪಡೆದ ವಾಗ್ದಾನಗಳು–ಈ ಕುರಿತು ವರದಿಯೊಪ್ಪಿಸಿದ.
   ಕೊನೆಯಲ್ಲಿ ಅವನೆಂದ:
   "ಅಪ್ಪಂಗಳದಲ್ಲಿ ಅರಮನೆ ತಾವ ಓಗಿದ್ದೆ."
   ಶರೀರಕ್ರಿಯೆಯಲ್ಲಿ ಭಂಗ ಉಂಟಾದವನಂತೆ ಅಪರಂಪಾರ ಮಿಸುಕಿದ.