ಪುಟ:ಸ್ವಾಮಿ ಅಪರಂಪಾರ.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



                 ಸ್ವಾಮಿ ಅಸರಂಪಾರ               ೧೪೯
   'ಅಲ್ಲಿ ಎಲ್ಲರೂ ಕ್ಷೇಮವೇ?'-ಎಂದು ರೂಪುಗೊಂಡ ಪ್ರಶ್ನೆ, "ಹೌದೆ?" ಎಂಬ ಏಕಪದವಾಗಿ    ಹೊರಬಿದ್ದಿತು.
   "ಸಾಮಿಯೋರು ಒಂದಾವರ್ತಿ ಬಂದು ಓದದ್ದನ್ನ ಗಂಗಮ್ಮಾಜಿ ಜ್ಞಾಪಿಸಿಕೊಂಡ್ರು."
    ಅಪರಂಪಾರ ಏನನ್ನೂ ಹೇಳಲಿಲ್ಲ.
    ಕಟ್ಟುಬಿಚ್ಚಿ, ರತ್ನಹಾರವನ್ನು ಸ್ವಾಮಿಯ ಎದುರಿಗಿದ್ದ ಮಣೆಯ ಮೇಲಿರಿಸಿ, ಧರ್ಮಪ್ಪನೆಂದ: 
   "ಸ್ವಾಮಿಯೋರಿಗೆ ತಲಪಿಸೋಕೆ ಅಂತ ಚಿಕ್ಕಮ್ಮಣ್ಣಿಯೋರು ಕೊಟ್ರು. ಅಪ್ಪಂಗಳದ ಸೊಸೆ ಕೊಟ್ಟಿದ್ದೂಂತ ಯೋಳು-ಅಂದ್ರು."
   ಹಣತೆಯ ಬೆಳಕಿನಲ್ಲಿ ಹಾರ ಮಿನುಗಿತು.
   ಆ ಪ್ರಭೆ ತನ್ನ ಕಣ್ಣುಗಳನ್ನು ಕುಕ್ಕುತ್ತಿದ್ದಂತೆ ಅಪರಂಪಾರನಿಗೆ ಭಾಸವಾಯಿತು. ಎಲ್ಲಿ ಕಂಡಿದ್ದೆ ಇದನ್ನು? ತಾನು ಅಮ್ಮ ಅಮ್ಮ ಎಂದು ಸೆರಗು ಹಿಡಿದು ಹಿಂದೆಯೇ ಹೋಗುತ್ತಿದ್ದ ಒಂದು ಜೀವ ಇದನ್ನು ತೊಟ್ಟುಕೊಂಡಿರುತ್ತಿತ್ತಲ್ಲ? ಆಕೆ ಕೊಟ್ಟಳೇನೋ ತನ್ನ ಸೊಸಗೆ ?
   ಆ ರೂಪ. ಪಾದಗಳೆರಡು. ಎರಡು ಅಂಗೈಗಳು...
   ಅಪರಂಪಾರನ ಮೆದುಳು ಸಿಡಿಯತೊಡಗಿತು. ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿ, ಶಂಕರಪ್ಪನನ್ನು ಆತ ಕರೆದ:
  “ಏನಪ್ಪಣೆ ಸ್ವಾಮಿಯೋರೆ?" ಎಂದು ಅವನು ಕೇಳಿದಾಗ, "ಇದೊಂದು ಹಾರ ಅಪ್ಪಂಗಳದ ಅರಮನೆಯಿಂದ ಬಂದದೆ. ರಾಜಭಂಡಾರದ ಒಡವೆ. ರಾಜಭಂಡಾರಕ್ಕೇ ಸೇರಬೇಕು. ಆ ತನಕ ಇದನ್ನು ಜೋಪಾನವಾಗಿಟ್ಟಿರಬೇಕಲ್ಲ?” ಎಂದು ಅಪರಂಪಾರ ನುಡಿದ.
  ಶಂಕರಪ್ಪ ಮಣೆಯ ಮೇಲಿಂದ ರತ್ನಹಾರವನ್ನೆತ್ತಿಕೊಂಡು ಅಂದ:
  "ನಾನು ತೆಗೆದಿಟ್ಟಿರತೇನೆ.”
                       ೫೨
   ಅಂದು ಅಪರಂಪಾರಸ್ವಾಮಿಯ ಸಂದರ್ಶನಕ್ಕೆ ಅಪರಿಚಿತನೊಬ್ಬ ಬಂದ. ಅವನ ಹೆಸರು ಅಚ್ಚಣ್ಣ.ಕೊಡಗು ಇಂಗ್ಲಿಷರಿಗೆ ವಶವಾದಾಗ ಗ್ರಾಮಾಂತರ ಪ್ರದೇಶವನ್ನು ಸೇರಿ ತಪ್ಪಿಸಿಕೊಂಡು ಹೋಗಿದ್ದ  ಕಾರ್ಯಕಾರರಲ್ಲೊಬ್ಬ, ಪುಟ್ಟಬಸವ, ಒಂದು ಓಲೆಯನ್ನು ಅಚ್ಚಣ್ಣನೊಡನೆ ಕೊಟ್ಟ ಕಳುಹಿದ್ದ.
   ಆ ಓಲೆ ಅಪರಂಪಾರನನ್ನು ಹರ್ಷಿತನನ್ನಾಗಿ ಮಾಡಿತು.
   ಅವನೆಂದ : 
  "ಮಹಾದೇವ ಮುನಿದಾಗ ಅಶುಭ ಪರಂಪರೆಗಳೇ ಒದಗುತವೆ. ಅವನು ಒಲಿದಾಗ
ಶುಭದ ಮೇಲೆ ಶುಭ."
  ಯಾರು ಪುಟ್ಟಬಸವ ?
  ಆತನೇ ಬರೆದಿದ್ದ:
  "ನಾನು ಸ್ವಾಮಿಯರಿಗೆ ಪರಿಚಯಸ್ಥನಲ್ಲ. ತಮ್ಮನ್ನು ಮಾತ್ರ ನಾನು ಒಮ್ಮೆ