ಪುಟ:ಸ್ವಾಮಿ ಅಪರಂಪಾರ.pdf/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



                                                 ಸ್ವಾಮಿ ಅಪರಂಪಾರ                                റ೫೧
                       ಮಾತು  ಮಾತಿಗೂ  ಅಚ್ಚಣ್ಣ,  'ಅರ್ಥವಾಯಿತು  ಅರ್ಥವಾಯಿತು'  ಎಂಬಂತೆ 
                    ತಲೆಯಾಡಿಸಿದ.
                       ಅಪರಂಪಾರ ತುಸು ಯೋಚಿಸಿ ನುಡಿದ :
                       "ಯೋಜನೆ ದಿವ್ಯವಾಗಿದೆ, ಇಲ್ಲಿ ನಾವು ಕೊಳ್ಳಿ ಇಡತೇವೆ. ಪುಟ್ಟಬಸವನೂ ಅವನ
                    ಸಂಗಡಿಗರೂ ಘಟ್ಟದ ಕೆಳಗೆ ದೀವಟಿಗೆ ಹಿಡಿಯಲಿ. ಮೈಸೂರು ಇಕ್ಕೇರಿಗಳು ಉರಿದೇಳಲಿ.
                    ಆಗ ಮಹಾದೇವನ ಹಣೆಗಣ್ಣು ತೆರೆದ ಹಾಗಾಗುತದೆ. ಆ ಬೆಳಕಿನಲ್ಲಿ ಹಿಂದೂಸ್ಥಾನದ
                    ಬೇರೆ ರಾಜ್ಯಗಳ ಜನ ತಮ್ಮ ದಾರಿ ಕುಡುಕೊಳ್ಳುತಾರೆ. ಸರಿಯೆ ಅಪ್ಪಯ್ಯ ?"
                        ಅಪರಂಪಾರನ ಸಂತೋಷದಲ್ಲಿ ತಾನೂ ಪಾಲುಗೊಳ್ಳುತ್ತ ಅಪ್ಪಯ್ಯನೆಂದ:
                       "ಸರಿ, ಸ್ವಾಮಿಯವರೆ."
                       "ಹಾಗಾದರೆ ಪುಟ್ಟಬಸವನಿಗೆ ಒಂದು ಮಾರೋಲೆ ಬರೆಯೋಣಾಗಲಿ, ಒಕ್ಕಣೆ..."
                       ||ಓಂ||
                      ಶ್ರೀ ಶ್ರೀ ಶ್ರೀ ಅಪರಂಪಾರಸ್ವಾಮಿಗಳ ಕಾಜಗೋಡು ಮುಕ್ಕಾವಿನಿಂದ ಭಕ್ತಾಗ್ರಣಿ
                   ಪುಟ್ಟಬಸವನಿಗೆ ಬರೆಯುವುದೇನೆಂದರೆ---
                      ಕ್ಷೇಮ. ಸಾಂಪ್ರತ. ನಿನ್ನ ಓಲೆ ಮುಟ್ಟಿ ಮಹದಾನಂದವಾಯಿತು. ಎಲ್ಲವನ್ನೂ
                   ವಿಚಾರಿಸಿ ನೋಡಿ ನಾವು ಅಭಿಪ್ರಾಯಪಡುವುದೇನೆಂದರೆ...
                                                       ೫೩
                   ಉರಿಯ ಶಾಖ ಲೀಹಾರ್ಡಿಗೆ ತಗಲಿತು.  ಮೈಸೂರಿನ ಕಾಸ್ಸಾಮೇಜರನಿಗೂ ಆ
               ಹೊಗೆಯಿಂದ ಉಸಿರು ಕಟ್ಟಿತು. ಮದರಾಸಿನ ಗವರ್ನರನೆಂದ: "ಇದೇನು ಮೋಡ ?"
                ಕಲಕತ್ತೆಯಿಂದ ಗವರ್ನರ್ ಜನರಲ್ ಕೇಳಿದ: “ಅಲ್ಲಿ ಏನು ನಡೆದಿದೆ?"
                    ಅವರು ರೂಢಿಗೆ ತಂದ ಶಕೆಯ ಅನ್ವಯ : ಒಂದು ಸಾವಿರದ ಎ೦ಟುನೂರು
                 ಮೂವತ್ತಾರನೆಯ ಇಸವಿ, 
             ಕಂಪೆನಿ ಸರಕಾರದಿಂದ ಆಜ್ಞಪ್ತನಾಗಿ ಸ್ಟೋಕ್ಸ್ ಎಂಬಾತ ಮೈಸೂರಿಗೆ ಬಂದು,
               ರಾಜ್ಯದ ಮುಖ್ಯಾಧಿಕಾರಿಯಾಗಿ ಕಾಸ್ಸಾಮೇಜರನಿಂದ ಅಧಿಕಾರ ವಹಿಸಿಕೊಂಡ.
             ಸಡಿಲಗೊಂಡಿತ್ತಲ್ಲವೆ ರಾಜ್ಯಯಂತ್ರ ? ಸ್ಟೋಕ್ಸ್ ತಡಮಾಡಲಿಲ್ಲ. ಕೀಲುಗಳನ್ನೆಲ್ಲ 
               ಬಿಗಿಗೊಳಿಸತೊಡಗಿದ. 
               ಗವರ್ನರನಿಗೆ ಅತ ಸಲಹೆ ಮಾಡಿದ:
             “ಆದಷ್ಟು ಬೇಗನೆ ಆಡಳಿತದ ಕೇಂದ್ರವನ್ನು ಬೆಂಗಳೂರಿಗೆ ವರ್ಗಾಯಿಸುವುದು ಉತ್ತಮ.
            ಮೈಸೂರಿಗಿರುವ ಮಹತ್ವವನ್ನ  ಕಡಿಮೆ ಮಾಡುವುದು ಒಳಿತು, ಆಗ ನಾಗರಹಾವಿನ 
            ವಿಷದ ಹಲ್ಲುಗಳನ್ನೆಲ್ಲ ಕಿತ್ತಹಾಗಾಗುತದೆ."
              ಕಾಸ್ಸಾಮೇಜರ್ ದುರ್ಬಲನಾಗಿದ್ದ: ತನಗೂ ಆತನಿಗೂ ಹೋಲಿಕೆಯಿಲ್ಲ--–ಎಂದು 
             ಮೇಲಣವರಿಗೆ ತೋರಿಸಿಕೊಡುವ ಆತುರ ಸ್ಟೋಕ್ಸ್ ಗೆ.
                ಇನ್ನೊಂದು ನಿರ್ಧಾರವನ್ನು ಆತ ಕೈಕೊಂಡ, ರಾಜಕಾರ್ಯದಲ್ಲಿ ಆಸಕ್ತಿ ಇಲ್ಲದವ 
               ನೆಂದೂ ಸಂಶಯಾಸ್ಪದ ಜನರೊಡನೆ ಸಂಪರ್ಕವಿರಿಸಿಕೊಂಡವನೆಂದೂ ಆರೋಪ ಹೊರಿಸಿ,
               ದಿವಾನ ವೆಂಕಟರಮಣಯ್ಯನನ್ನು ಅವನು ಉದ್ಯೋಗದಿಂದ ಕಿತ್ತುಹಾಕಿದ.