ಪುಟ:ಸ್ವಾಮಿ ಅಪರಂಪಾರ.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೫೨ ಸ್ವಾಮಿ ಅಪರಂಪಾರ

                  ಸುತ್ತಲಿನವರು ಆಡಿಕೊಂಡರು :
                  "ಇವನು ದರ್ಪಿಷ್ಹನಾದ  ದೊರೆ.”
                  ಲೀಹಾರ್ಡಿಗೆ ಸ್ಪೋಕ್ಸ್ ಬರೆದ:
                  "ನಾನು ಮೈಸೂರಿಗೆ ಬಂದು ಅಧಿಕಾರ ವಹಿಸಿಕೊಂಡಿರುವ ವಿಷಯ ನಿಮಗೆ ಗೊತ್ತಿ
                ದ್ದೀತು. ಅಪರಂಪಾರಸ್ವಾಮಿ ಮತು ಅವನ ಸಂಗಡಿಗರ ಹುಟ್ಟಡಗಿಸುವುದು ತಡವಾಗ
                ಬಾರದು. ಆ ದಿಶೆಯಲ್ಲಿ ನಮ್ಮಿಂದೇನಾದರೂ ಆಗಬೇಕಿದ್ದರೆ ತಿಳಸೋಣಾಗಲಿ."
                   ಆದರೆ, ಒಂದು ಸಂಗತಿ ಸ್ಟೋಕ್ಸ್ ಗೆ ತಿಳಿದಿರಲಿಲ್ಲ. ಆ ಪತ್ರವನ್ನು ಆತ ಬರೆಯುತ್ತಿದ್ದ 
                ಘಳಿಗೆಯಲ್ಲೇ ಅಪರಂಪಾರಸ್ವಾಮಿ ಮೈಸೂರು ನಗರದೊಳಕ್ಕೆ ಕಾಲಿರಿಸಿದ್ದ, ಜತೆಗೆ   
                ಅಪ್ಪಯ್ಯ, ವೆಂಕಟಪ್ಪ ಮತ್ತಿತರ ಪ್ರಮುಖರೂ ಇದ್ದರು. ಅವರೆಲ್ಲ ಯಾತ್ರಿಕರಂತೆ ವೇಷ 
                ಮರೆಸಿ ಧರ್ಮಛತ್ರದಲ್ಲಿ ತಂಗಿದ್ದರು.
                      ಕತ್ತಲಾದ ಬಳಿಕ ಅಪರಂಪಾರನನ್ನು ಬಸಪ್ಪಾಜಿ ಅರಸ ಮನೆಗೆ ಬರಮಾಡಿಕೊಂಡ.
                      ಗೌರವಾದರಗಳನ್ನು ತೋರುತ್ತ ವಿನೀತನಾಗಿ ಅವನೆಂದ:
                     "ವಿದ್ಯಮಾನಗಳನ್ನು ತಿಳಿದೆ, ಸ್ವಾಮಿಯವರೆ, ಮೆಚ್ಚುಗೆ ಸೂಚಿಸೋದು ಸರಿಯೋ
                 ತಪ್ಪೋ ಅರಿಯೆ. ಆಗಬೇಕಾದಷ್ಟು ನನ್ನ ಕಡೆಯಿಂದ ಆಗಿಲ್ಲ ಅನ್ನೋದೊಂದೇ ನನ್ನ 
                 ಕೊರಗು."
                      ಅಪರಂಪಾರ ನುಡಿದ :  
                    "ಅದನ್ನು ಇತ್ಯರ್ಥಪಡಿಸೋಣ  ಅಂತಲೇ  ಬಂದೆವು. ತೆನೆ ಭಾರದಿಂದ ಪೈರು ಬಾಗ  
                 ತೊಡಗಿದೆ, ಕುಯಿಲಿಗೆ ಬರುತೇನೆ ಅಂದಿದ್ದಿರಿ. ಇನ್ನು ಬಹಳ ಸಮಯ ಉಳಿದಿಲ್ಲ."
                    "ಕೊಟ್ಟ ಮಾತಿಗೆ ತಪ್ಪಲಾರೆ. ನನ್ನ ಧನಕನಕ ಸರ್ವಸ್ವ ಮಿಾಸಲು. ನಾನೂ ಬರು 
                 ತ್ತೇನೆ. ಜತೆಯಲ್ಲೂ ಹಲವರನ್ನು ತರುತ್ತೇನೆ."
                   "ಇಲ್ಲಿ ಬಂಡಾಯವೇಳುವ ಮಾತು?" 
                  ಬಸಪ್ಪಾಜಿಯ ಉತ್ತರ ತಡವಾಯಿತು:
                  "ಮಿಾನ ಮೇಷ ಎಣಿಸುತಾ ಇದಾರೆ. ಕೊನೇ ನಿರ್ಧಾರ ಮಾಡಿಲ್ಲ."  
                  "ಕೃಷ್ಣರಾಜ ಒಡೆಯರನ್ನು ನಾವು ಕಂಡರಾಗುತ್ತಿತ್ತು."
                   ಕ್ಷಣ ವಿಳಂಬಿಸಿ ಬಸಪ್ಪಾಜಿ ಉತ್ತರವಿತ್ತ :
                  "ಆಗಲಿ, ಅರಮನೆಗೆ ಹೋಗಿ ಮಾತನಾಡಿ ಬರುತ್ತೇನೆ. ಇದು ಗೋಪ್ಯವಾಗಿ ನಡೆಯ 
                ಬೇಕಾದ ಸಂಗತಿ."
                  "ನಾವು ಛತ್ರಕ್ಕೆ ಹೋಗಿ ಇರತೇವೆ, ಆಗದೆ?"  
                  "ತಮಗೆ ಆಕ್ಷೇಪವಿಲ್ಲವಾದರೆ ತಾವು ಇಲ್ಲಿ ತಂಗಬಹುದು. ಅಂಗರಕ್ಷಕನಾಗಿ ತಮ್ಮ 
                ಕಡೆಯ ಒಬ್ಬಾತ ಇರಲಿ, ಇಲ್ಲಿ ತಾವು ಸುರಕ್ಷಿತವಾಗಿರುತೀರಿ. ಆ ಜವಾಬ್ದಾರಿ ನನ್ನದು."
                  "ಆಗಲಿ, ಛತ್ರಕ್ಕೆ ಸುದ್ದಿ ಮುಟ್ಟಿಸಿಬಿಡಿ. ಶಂಕರಪ್ಪ ಇಲ್ಲೇ ಹೊರಗಿದಾನೆ. ನಮ್ಮ ಜತೆ 
              ಉಳಿಯಲಿ."
                    ಸ್ವಲ್ಪ ಸಮಯ ಕಳೆದು ಅಪರಂಪಾರನೆಂದ : 
                 "ಸಿದ್ಧಲಿಂಗ ಅಯ್ಯನನ್ನು ಎಲ್ಲಿ ಸೆರೆಯಲ್ಲಿಟ್ಟಿದಾರೆ, ಬಲ್ಲಿರಾ?" 
                  "ಶ್ರೀರಂಗಪಟ್ಟಕ್ಕೆ ಒಯ್ದರೂಂತ ಕಳೆದ ವರ್ಷ ಕೇಳಿದೆ."