ಪುಟ:ಸ್ವಾಮಿ ಅಪರಂಪಾರ.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ

೧೫೫

ಮೇಳದವರನ್ನು ಕರೆಸಿದ್ವಿ. ಇವತ್ತು ಆಡಿಸೋಣ ಅಂತಿದ್ವಿ. ನಾಳೆಗೆ ಇಟ್ಟುಕೊಂಡರಾಗದೆ
ಅಂದರು ಬಸಪ್ಪಾಜಿ. ಒಪ್ಪಿದ್ವಿ. ಇವತ್ತು ಈ ಕಾರ್ಯಕ್ರಮವಾಯ್ತು. ನಾಳೆ ದಶಾವತಾರ
ಬಯಲಾಟ."

ಏಳಬೇಕು ಎనిಸಿತು అಪರ೦ಪಾರನಿಗೆ. ತಾನಾగి ಮೊದలు ಏಳುವುದು ಅಪಚಾರ
ವಾಗುವುದೆಂದು ಸುಮ್ಮನಿದ್ದ. ಬಸಪ್ಪಾಜಿ ಸೂಕ್ಷ್ಮವನ್ನು ಗ್ರಹಿಸಿ, "ಇನ್ನು ಏಳೋಣ,
ಆಗದೆ?" ಎಂದ.

ಕೃಷ್ಣರಾಜ ಒಡೆಯನೆದ್ದ. ಉಳಿದವರೂ ಎದ್ದರು. ವಂದನೆ ಪ್ರತಿವಂದನೆಗಳಾದುವು.
ಅಪರಂಪಾರ ಕಂಬಳಿ ಹೊದೆದುಕೊಂಡ.
ನಾಲ್ವರು ವ್ಯಕ್ತಿಗಳು ಪುನಃ ಕೈದೋಟದಿಂದ ಹೊರಬಿದ್ದರು...
...ದಾರಿಯಲ್ಲಿ ಬಸಪ್ಪಾಜಿ ಕೇಳಿದ:
"ಸ್ವಾಮಿಯವರಿಗೆ ನಿರಾಸೆಯಾಯ್ತೆ?"
ಅಪರಂಪಾರನೆಂದ:
"ಇಲ್ಲ. ಕಳೆದುಹೋದ ಸ್ವಾತಂತ್ರ್ಯವನ್ನ ಪುನಃ ಗಳಿಸೋದು ಎಷ್ಟು ಕಠಿಣ ಅನ್ನೋದು
ಈಗ ಹೆಚ್ಚು ಮಂದಟ್ಟಾಗಿದೆ."

...ಮುದೆ ಒಂದೇ ದಿನದ ಅವಧಿಯಲ್ಲಿ ಬೇರೊಂದು ಅನುಭವ ಅಪರಂಪಾರನನ್ನು
ಅಣಕಿಸಿತು.

ಕೈದೋಟದಲ್ಲಿ ಭೇಟಿ ನಡೆದ ಮಾರನೆಯ ರಾತ್ರೆ, ಧರ್ಮಛತ್ರದಲ್ಲಿ ಮಲ್ಲಪ್ಪಗೌಡ
ಓಡುತ್ತೋಡುತ್ತ ಬಸಪ್ಪಾಜಿ ಅರಸನ ಮನೆಗೆ ಬಂದ. ಶಂಕರಪ್ಪನೂ ಅವನೂ ಒಳ
ಕೊಠಡಿಯ ಬಾಗಿಲು ಬಡಿದರು. ಅಪರಂಪಾರನಾಗಲೀ ಬಸಪ್ಪಾಜಿಯಾಗಲೀ ನಿದ್ರಿ
ಸಿರలిల్ల.
ಏದುಸಿರು ಬಿಡುತ್ತ ಮಲ್ಲಪ್ಪಗೌಡನೆಂದ:
“ಇಂಗ್ರೇಜಿ ಸಿಪಾಯರು ಛತ್ರವನ್ನ ಸುತ್ತುವರಿದವರೆ. ನಾನು ಹೊರಗೆ ಮರದ ಕೆಳಗೆ
ಕಾವಲು ಕುಳಿತಿದ್ದೆ."
ಅಪರಂಪಾರ ಕೇಳಿದ:
"ಛತ್ರದೊಳಗೆ ಯಾರಿದಾರೆ ?"
"ನಮ್ಮವರು ಬಯಲಾಟ ನೋಡೋಕೆ ಓದ ಒಸಿ ಒತ್ನಲ್ಲೇ ಇವರು ಬಂದ್ರು. ನಾಟಕ
ఇರದೇ ಓಗಿದ್ರೆ ಎಲ್ರೂ ಸಿಕ್ಹಾಕೊಳ್ತಿದ್ವಿ."
"ಈಗ? ಅಪ್ಪಯ್ಯ-ವೆಂಕಟಪ್ಪನವರಿಗೆಲ್ಲಾ ತಿಳಿಸಿದಿಯಾ ?"
"ಹ್ಞು. ಅವರೆಲ್ಲಾ ಕೋಟೆ ಹೊರಗೆ ಕಾದ್ಕೊಂಡು ನಿಂತವರೆ. ಏನು ಮಾಡ್ಬೇಕು,
ಕೇಳ್ಕೊಂಡ್ಬಾ—అంದ್ರು."
"ಛತ್ರದೊಳಗೆ ಏನಾದರೂ ಸಾಮಾನಿದೆಯಾ ?"
“ಚೂರುಪಾರು ಬಟ್ಟೆಗಂಟು. ಕಂಬಳಿಯನಕಾ ಒದ್ಕೊಂಡೇ ಇದ್ರು. ಬಂದೂಕಗಳನ್ನೂವೆ
ತಕೊಂಡೋಗಿದ್ರು."
ಬಸಪ್ಪಾಜಿ ಕಲ್ಲಿನ ಕಂಬದಂತೆ ನಿಂತಿದ್ದ. ಅವನ ಗಂಟಲು ಆರಿಹೋಗಿತ್ತು.
ಅಪರಂಪಾರನೆಂದ :