ಪುಟ:ಸ್ವಾಮಿ ಅಪರಂಪಾರ.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೫೮

ಸ್ವಾಮಿ ಅಪರ೦ಪಾರ

“ಅದೇ. ಗೌಡಳ್ಳಿಗೆ ಒಂದು ಹರದಾರಿ ಈಚೆಗೆ ಬಲಕ್ಕೆ ತಿರುಗಿದರೆ ಸುಮಾರು ಅರ್ಧ
ಹರದಾರಿ ದೂರದಲ್ಲಿ ಒಂದು ಪುಷ್ಕರಿಣಿ ಸಿಗತದೆ.”
"ಆದರೆ ನಮ್ಮ ಶಂಕರಪ್ಪಗೆ ದಾರಿ ತಿಳೀತದೊ ಇಲ್ಲವೊ ?”
"ಈ ಕಡೆಯವ ಒಬ್ಬನನ್ನೂ ಜತೆ ಮಾಡಿದರಾಯ್ತು."
ಕೊಠಡಿಯ ಹೊರಗೆ ಒಬ್ಬ ಅತ್ತಿತ್ತ ಸುಳಿದಾಡುತ್ತಿದ್ದ. ಆತನನ್ನು ಉದ್ದೇಶಿಸಿ
ಅಪ್ಪಯ್ಯನೆಂದ :
“ಏಯ್! ಇಲ್ಲಿ ಬಾ."
ಆತ ಬ೦ದ.
“ಹೊರಗೇನು ಮಾಡ್ತಿದ್ದೆ?”
"ಸುಮ್ಕೆ ನಿಂತಿದ್ದೆ."
"ನಿನ್ನ ಹೆಸರೇನು ?”
"ಚಾವಡಿಕಾರ ಮಂಜಣ್ಣ.”
"ಯಾವೂರು ?"
"ಹಾರಂಗಿ ಹತ್ತಿರ ಹಳ್ಳಿ."
"ನಿನಗೆ ಗೌಡಳ್ಳಿ ದಾರಿ ಗೊತ್ತಾ?”
“ಓ.”
"ಹಳ್ಳಿ ಈಚೆಗೆ ಬಲಕ್ಕೆ ಕೆರೆ ಸಿಗುತ್ತಲ್ಲ--'
“ಗೊತ್ತು ಬುಡಿ.”
"ಕುದುರೆ ಸವಾರಿ ಕಲ್ತಿದೀಯಾ ?”
"ಓ.”
"ನಾಳೆ ನಸುಕಿಲಿ ದಂಡು ಹೊರಡ್ತದಲ್ಲ, ಆಗ ನೀನು ಸ್ವಾಮಿಯೋರ ಜತೆ ಇರಬೇಕು.
ಅವರಿಗೆ ಕೆರೆ ತೋರಿಸಬೇಕು."
"ಹ್ಞು."
"ಮೈಗಾವಲಿನ ಶಂಕರಪ್ಪನೂ ಜತೆಗಿರತಾನೆ.”
“ಆಗಲಿ ಬುದ್ಧಿ."
"ಹೋಗು. ಒಸಿ ಹೊತ್ತು ಮಲಕೋ."
ಅಪರಂಪಾರನೆಂದ :
"ಎಲ್ಲ ಇತ್ಯರ್ಥವಾಯಿತಲ್ಲ? ಮನಸ್ಸಿಗೆ ನಿದ್ದೆ ಬೇಕಾಗಿಲ್ಲ. ಆದರೆ ದೇಹಕ್ಕೆ ಬೇಕು.
ತುಸು ಅಡ್ಡಾಗುತೇವೆ."
ಇರುಳು ಕಳೆಯಿತು. ಕೋಳಿಯ ಕೂಗಿಗೆ ತುತೂರಿಯ ನಿನಾದ ಶ್ರುತಿ ಹಿಡಿಯಿತು.
ಸ್ವಲ್ಪವೇ ಹೊತ್ತಿನಲ್ಲಿ ಯೋಧರು ಅಣಿಯಾದರು.
ಅವರನ್ನು "ಬಾಂಧವರೇ” ಎಂದು ಸಂಬೋಧಿಸಿ, ಅಪರಂಪಾರ ನುಡಿದ:
"ನಮ್ಮದು ಸತ್ಯದ ನ್ಯಾಯದ ದಂಡು. ಅಸತ್ಯದ ಅನ್ಯಾಯದ ಕೇತುಪಟವನ್ನು ಧೂಳಿ
ದೂಸರ ಮಾಡೋದಕ್ಕೆ ನಾವು ಹೊರಟಿದೇವೆ. ನೆಲದ ಮರೆಯ ನಿಧಾನದಂತೆ, ಮುಗಿಲ
ಮರೆಯಲಡಗಿರ್ದ ಮಿಂಚಿನಂತೆ, ಬಯಲ ಮರೆಯಲಡಗಿರ್ದ ಮರೀಚಿಯಂತೆ, ಕಂಗಳ