ಪುಟ:ಸ್ವಾಮಿ ಅಪರಂಪಾರ.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೧೬೪

ಸ್ವಾಮಿ ಅಪರಂಪಾರ

ಕುದುರೆಗಳು ಬಾಣಗಳಾದುವು. ಆದರೆ ಮುಂದಿದ್ದವರ ಬೆನ್ನು ಹಿಡಿಯಲು ಶಕ್ತ
ವಾಗಲಿಲ್ಲ.
ದಂಡು ಹಾರಂಗಿಗೆ ಹೋಯಿತು. ಆದರೆ ವೆಂಕಟಪ್ಪನ ದಳವನ್ನು ಸೇರುವುದಕ್ಕೆ
ಮುನ್ನವೇ ಆಂಗ್ಲ ತುಕ್ಕಡಿಯನ್ನು ಕಂಡಿತು.
ನರಭಕ್ಷಕರ ತೋಪುಗಳು ಗರ್ಜಿಸಿದುವು. ಓಡಿದವರು ಅಡವಿಪಾಲಾದರು. ಹೋರಾಡಿ
ದವರು ಮಾಡಿದರು, ಬಂದಿಗಳಾದರು.
ಆಂಗ್ಲ ತುಕ್ಕಡಿಯ ಇನ್ನೊಂದು ಭಾಗವಾಗಲೇ ವೆಂಕಟಪ್ಪನ ದಳವನ್ನು ಸುತ್ತು
ವರಿದಿತ್ತು.

* * *

ಹಿಂದೂಸ್ಥಾನದ ಗವರ್ನರ್ ಜನರಲ್ ಸಮಾಧಾನದ ನಿಟ್ಟುಸಿರನ್ನು ಬಿಟ್ಟ.
“ಅಪರಂಪಾರನನ್ನು ಬೆಂಗಳೂರಿಗೊಯ್ದು ಸೆರೆಯಲ್ಲಿಡಿ !”
__ಎಂದು ಆಜ್ಞೆ ಕಳುಹಿದ.

* * *

ಅಶುಭ ವಾರ್ತೆ ಮೈಸೂರನ್ನು ತಲಪಿದಾಗ ಸ್ಟೋಕ್ಸ್ ಅಂದ :
“ಲೀಹಾರ್ಡಿ ಪರವಾಗಿಲ್ಲ.”
ಕೃಷ್ಣರಾಜ ನುಡಿದ :
“ಹೀಗಾಗದೇಂತ ನಮಗೆ ಮೊದಲೇ ಗೊತ್ತಿತ್ತು.”
ಬಸಪ್ಪಾಜಿಯೆಂದ :
“ಹೀಗೂ ಆಯ್ಕೆ? ಒಳ್ಳೆಯ ಮನುಷ್ಯರಿಗೆ ಯಾವಾಗಲೂ ಇಂಥದೇ ಗತಿಯೆ ?”

* * *

ಗುರುಮೂರ್ತಪ್ಪನಿಂದ ಸುದ್ದಿ ತಿಳಿದ ಸೂರಪ್ಪನಾಯಕ ಮರುಗಿದ.
ಆತನೆಂದ:
“ಆದದ್ದಾಯಿತು. ಆದರೆ ಇದೇ ಕಥೆಯ ಕೊನೆ ಆಗಬಾರದು. ನಾನಿನ್ನೂ ಬದುಕಿದೇನೆ.”

* * *

ವೇಲೂರಿನಲ್ಲಿ ಚಿಕವೀರರಾಜನ ಪರಿವಾರ ಕಂಬನಿ ಮಿಡಿಯಿತು.
ಅರಸನೊಡನೆ ರಾಣಿ ಗೌರಮ್ಮನೆಂದಳು :
“ನಾವು ನಿರ್ಭಾಗ್ಯರು.”
ವೇಲೂರಿನ ಕಲೆಕ್ಟರ್ ಚಿಕವೀರರಾಜನ ಭೇಟಿಗೆ ಬಂದು ನುಡಿದ :
“ನೀವು ಕಂಪೆನಿ ಸರಕಾರದ ಅತಿಥಿಗಳಾಗಿ ಕಲಕತ್ತೆಗೋ ಕಾಶಿಗೂ ತೆರಳಿ ಮುಂದೆ
ಅಲ್ಲಿಯೇ ವಾಸಮಾಡಬೇಕು ಅಂತ ಗವರ್ನರ್ ಜನರಲರು ಅಪೇಕ್ಷೆಪಡುತಾರೆ.”

* * *

ಅಪ್ಪಂಗಳದಲ್ಲಿ ಗಂಗಮ್ಮ ತಲೆ ಕೆದರಿಕೊಂಡು ಅತ್ತಳು; ನಕ್ಕಳು.
ತನ್ನಷ್ಟಕ್ಕೆ ಅವಳು ಗಟ್ಟಿಯಾಗಿ ಅಂದುಕೊಂಡಳು :
“ಹುಚ್ಚುಂಡೆ, ಹುಚ್ಚುಂಡೆ, ಇನ್ನೂ ಏನಾದರೂ ಉಳಿದೆದೆಯೇನೆ ?”