ಪುಟ:ಸ್ವಾಮಿ ಅಪರಂಪಾರ.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೬೮ ಸ್ವಾಮಿ ಅಪರ೦ಪಾರ

ಮಾಡಿಕೊಟ್ಟೆ. ಇದು ಸ್ವಾಮಿದ್ರೋಹವಲ್ಲದೆ ಇನ್ನೇನು ?"

ಹಾವನ್ನು ತುಳಿದವನಂತೆ ಲೀಹಾರ್ಡಿ ಬೆಚ್ಚಿಬಿದ್ದು, ಸ್ವತಃ ತಾನೇ ಹಾವಿನಂತೆ ಪೂತ್ಕರಿಸಿದ :

“ಅಧಮ ! ನಿನ್ನನ್ನು ದಸ್ತಗಿರಿ ಮಾಡಿದ್ದೇವೆ!"

 ಕೆಳಮುಖವಾಗಿ ಕೈಗಳನ್ನು ಜೋಡಿಸಿ ಲ‍‍ಕ್ಶ್ಮೀನಾರಯಣನೆಂದ :
"ಒಪ್ಪಿಗೆ ಬೇಡಿ ಹಾಕಬಹುದು." 

...ಲಕ್ಷ್ಮಿನಾರಾಯಣ ಬಂಧಿತನಾಧ. ಸ್ವಲ್ಪ ಕಾಲ ಬೆಂಗಳೂರು-ಮಡಕೇರಿಗಳ ನಡುವೆ ಔಪಚಾರಿಕ ಪತ್ರವ್ಯವಹಾರಗಳು ನಡೆದುವು. ಆ ಬಳಿಕ ತನ್ನ ಕೈದಿಯನ್ನು ಬೆಂಗಳೂರಿನ ಸೆರೆಮನೆಗೆ ಲೀಹಾರ್ಡಿ ಕಳುಹಿಸಿಕೊಟ್ಟ.

                  ೬೧                             
"ಹೆಗ್ಗಣವನಿಕ್ಕಿ ನೆಲಗಟ್ಟು ಕಟ್ಟಿದಂತೆ ಆಯಿತೆನ್ನಯ ಕಾಯಗುಣ."

-ಬೆಂಗಳೂರು ಸೆರೆಮನೆಯ ಬೆಳಕಿಲ್ಲದೊಂದು ಕೊಠಡಿಯಲ್ಲಿ ಕುಳಿತು ಅಪರಂಪಾರ ಸ್ವಾಮಿ ಚಿಂತಿಸಿದ.

ದಿನಗಳು, ಮಾಸಗಳು, ಯಾವ ವಾರ? ಯಾವ ತಿಥಿ ? ಬಲ್ಲವರು ಯಾರು? ಕೇಳ ಬೇಕು ಯಾರನ್ನು?
 ಹಗಲಾಗುತ್ತಿತು, ಇರುಳಾಗುತ್ತಿತು; ಮತ್ತೆ ಹಗಲು, ಮತ್ತೆ ಇರುಳು, ಸೂರ್ಯ ಗೋಲ ಹೊರಗೆ ಉರಿದಾಗ ಎತ್ತರದ ಛಾವಣಿಯ ಸೂರುಗಳೆಡೆಯಿಂದ ಒಂದೆರಡು ಕಿರಣಗಳು ಒಳಬರುತ್ತಿದ್ದವು. ರಾತ್ರೆ ಚಂದ್ರನಿದ್ದರೆ ಒಂದಿಷ್ಟು ಮಂದಪ್ರಕಾಶ, ಇಲ್ಲವೋ 

ಕಪ್ಪು ಕತ್ತಲು.

ಸೆರೆಮನೆಯ ಅಧಿಕಾರಿ–ಆಂಗ್ಲರವನು-ದಿನಕ್ಕೊಮ್ಮೆ ಬರುತ್ತಿದ್ದ. ಹರಕು ಹಿಂದೂ ಸ್ಥಾನಿಯಲ್ಲಿ ಅವನು ಮಾತನಾಡುತ್ತಿದ್ದ:
"ಏನ್ಮಾಡುತಿದೀಯ, ಸ್ವಾಮಿ?"
ಮೊದಲು ಕೆಲವು ದಿನ ತುಟಿಪಿಟ್ಟೆನ್ನಲಿಲ್ಲ ಅಪರಂಪಾರ. ಮುಂದೆ ಮಾನವ ಪ್ರವೃತ್ತಿ ಗೆದ್ದಿತು. ಉತ್ತರವಾಗಿ ಒಂದು ಮಾತಿಗೆ ಒಂದು ಮಾತು.
"ಶಿವಧ್ಯಾನ ಮಾಡತಿದೀಯಾ ?"
"ಹೂಂ"
"ಊಟ ಆಯಿತಾ?"
"ಹೂಂ."
"ನಿಮ್ಮ ಜನಕ್ಕೆ ಸೋಲಾಯಿತೂಂತ ಒಪ್ಪತೀಯಾ ?"
"ಮರುಳೆ,'ಸೋತವರು ಯಾರು? ಗೆದ್ದವರು ಯಾರು?"
"ಅಂದರೆ?"
"ಜನಮನವ ಗೆಲಲಾರದವನೇ ಪರಾಜಿತ."
"ನೋಡಿದರೆ ನೀನು ಬುದ್ಧಿವಂತ, ಹಾಗಿದ್ದೂ ಮಟ್ಠಾಳ ಕೆಲಸ ಮಾಡಿದೆಯಲ್ಲಾ!"
"ಕನ್ನವನಿಕ್ಕಿ ಮನೆಯೇ ನಿಮ್ಮದೆನುತೀರಾ ? ತೊಲಗಪ್ಪ ಆಚೆಗೆ!"